ವಿಮಾನಯಾನ ಸಿಬ್ಬಂದಿಗೆ ಆದ್ಯತೆ ಮೇರೆಗೆ ಕೊರೊನಾ ಲಸಿಕೆ ನೀಡಲು ಮನವಿ

ನವದೆಹಲಿ, ಜನವರಿ 24: ಆರೋಗ್ಯ ಕಾರ್ಯಕರ್ತರ ಬಳಿಕ ವಿಮಾನಯಾನ ಸಿಬ್ಬಂದಿಗೂ ಕೊರೊನಾ ಲಸಿಕೆ ನೀಡುವಂತೆ ಮನವಿ ಮಾಡಲಾಗಿದೆ.

ಆರೋಗ್ಯ ಕಾರ್ಯಕರ್ತರಂತೆಯೇ ವಿಮಾನ ಸಿಬ್ಬಂದಿ ಕೂಡ ಮುಂಚೂಣಿ ಕಾರ್ಯಕರ್ತರೇ ಆಗಿದ್ದಾರೆ, ಹಾಗಾಗಿ ಎರಡನೇ ಹಂತದಲ್ಲಿ ವಿಮಾನ ಯಾನ ಸಿಬ್ಬಂದಿಗೂ ಲಸಿಕೆ ನೀಡುವಂತೆ ಕೋರಿದ್ದಾರೆ.

ವಿಮಾನಯಾನ ಸಚಿವಾಲಯ ಈ ಕುರಿತು ಆರೋಗ್ಯ ಸಚಿವಾಲಯಕ್ಕೆ ಮನವಿ ಸಲ್ಲಿಸಿದೆ. ಜನವರಿ 20 ರಂದು ನಾಗರಿಕ ವಿಮಾನಯಾನ ಸಚಿವಾಲಯ ಕಾರ್ಯದರ್ಶಿ ಪ್ರದೀಪ್ ಸಿಂಗ್ ಖರೋಲಾ ಅವರು ಕೇಂದ್ರ ಆರೋಗ್ಯ ಸಿವಾಲಯಕ್ಕೆ ಪತ್ರ ಬರೆದಿದ್ದಾರೆ.

Aviation Sector Workers Be Vaccinated On Priority After Health Workers

ಕಳೆದ ವರ್ಷ ಡಿಸೆಂಬರ್ 28 ರಂದು ಬಿಡುಗಡೆ ಮಾಡಿದ ಮಾರ್ಗಸೂಚಿಗಳ ಪ್ರಕಾರ, ಪ್ರಾರಂಭದಲ್ಲಿ 3 ಕೋಟಿ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಮಿಕರು 50 ವರ್ಷ ಮೇಲ್ಪಟ್ಟ 27 ಕೋಟಿ ಜನರಿಗೆ ಕೊರೊನಾ ಲಸಿಕೆ ನೀಡಲು ನಿರ್ಧರಿಸಲಾಗಿದೆ.

ಸುರಕ್ಷಿತ ವಿಮಾನ ಸೇವೆ ಒದಗಿಸುವ ವಿಮಾನಯಾನ ಸಿಬ್ಬಂದಿ, ಎಂಜಿನಿಯರ್ , ತಂತ್ರಜ್ಞರು ಸೇರಿದಂತೆ ಮುಂಚೂಣಿ ಕಾರ್ಯಕರ್ತರಿಗೆ ಕೊರೊನಾ ಲಸಿಕೆ ಅಪಾಯಗಳು ಎದಯರಾಗಬಹುದು.

ಈ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾದ ಮುಂಚೂಣಿ ಕಾರ್ಮಿಕರಲ್ಲಿ ವಿಮಾನಯಾನ ಕ್ಷೇತ್ರದ ನೌಕರರು ಒಳಗೊಂಡಿಲ್ಲ, ಆದರೆ ಸಶಸ್ತ್ರ ಪಡೆಗಳ ಸಿಬ್ಬಂದಿ, ಜೈಲು ಸಿಬ್ಬಂದಿ, ನಗರ ಪಾಲಿಕೆಯ ಕಾರ್ಮಿಕರು ಸೇರಿದಂತೆ ಇತರರಿಗೆ ಆದ್ಯತೆ ನೀಡಲಾಗಿದೆ.

ಹಾಗಾಗಿ ವಿಮಾನಯಾನ ಕ್ಷೇತ್ರದ ಈ ಕಾರ್ಯಕರ್ತರಿಗೂ ಆದ್ಯತೆಯ ಆಧಾರದಲ್ಲಿ ಕೊರೊನಾ ಲಸಿಕೆ ನೀಡಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+