ಆಟೋ ಪ್ರಯಾಣ ದರ ಏರಿಕೆ, ಟ್ರಾಫಿಕ್ ಇದ್ದರೆ ಅದಕ್ಕೂ ಪ್ರತ್ಯೇಕ ಹಣ ಕೊಡ್ಬೇಕು

ನವದೆಹಲಿ, ಜೂನ್ 18: ನವದೆಹಲಿಯಲ್ಲಿ ಆಟೋರಿಕ್ಷಾ ಪ್ರಯಾಣ ದರ ಇಂದಿನಿಂದ ಶೇ.18ರಷ್ಟು ಏರಿಕೆಯಾಗಲಿದೆ. ಒಂದೊಮ್ಮೆ ನೀವು ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿಕೊಂಡರೆ ಅದಕ್ಕೂ ಪ್ರತ್ಯೇಕ ಹಣ ತೆರಬೇಕಿದೆ.

ಮೊದಲ 1.5 ಕಿ.ಮೀಗೆ 25 ರೂ ನಿಗದಿ ಮಾಡಲಾಗಿದೆ. ಕಿಲೋಮೀಟರ್ ದರ 8-9.5 ರೂಗೆ ಏರಿಕೆಯಾಗಿದೆ. ಲಗೇಜುಗಳಿದ್ದರೆ 7.5 ರೂ ನೀಡಬೇಕಾಗುತ್ತದೆ. ಒಂದೊಮ್ಮೆ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡರೆ ಪ್ರತಿ ನಿಮಿಷಕ್ಕೆ 0.75 ಪೈಸೆಯಂತೆ ಚಾಲಕರಿಗೆ ನೀಡಬೇಕಾಗುತ್ತದೆ.

ಮೀಟರ್‌ನಲ್ಲಿ ಈ ದರ ತೋರಿಸಲು ಇನ್ನೂ ಒಂದು ತಿಂಗಳು ಹಿಡಿಯಬಹುದು, ದೆಹಲಿಯಲ್ಲಿ ಒಟ್ಟು 90 ಸಾವಿರ ಆಟೋ ರಿಕ್ಷಾಗಳು ನೋಂದಣಿಯಾಗಿವೆ. ಕಳೆದ ವಾರವಷ್ಟೇ ದೆಹಲಿ ಸರ್ಕಾರ ಈ ಹೊಸ ದರವನ್ನು ಪ್ರಕಟಿಸಿತ್ತು .

 Auto-rickshaw fare hiked in Delhi

ಇಂದಿನಿಂದ ದರ ಜಾರಿಗೆ ಬರಲಿದೆ. ಈಗಾಗಲೇ ಅರವಿಂದ್ ಕೇಜ್ರಿವಾಲ್ ಸರ್ಕಾರವು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಘೋಷಣೆ ಮಾಡಿದ್ದು ಇನ್ನು ಏಳೆಂಟು ತಿಂಗಳಲ್ಲಿ ಈ ಯೋಜನೆಯೂ ಜಾರಿಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಸರ್ಕಾರಕ್ಕೆ ಸುಮಾರು 1567 ಕೋಟಿ ವೆಚ್ಚವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+