ದೆಹಲಿ ಸರ್ಕಾರಿ ಆಸ್ಪತ್ರೆಯ 14 ವೈದ್ಯಕೀಯ ಸಿಬ್ಬಂದಿಗೆ ಕೊರೊನಾ

ನವದೆಹಲಿ, ಏಪ್ರಿಲ್ 24: ದೆಹಲಿಯ ಸರ್ಕಾರಿ ಆಸ್ಪತ್ರೆಯ 14 ಮಂದಿ ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ವೈರಸ್ ತಗುಲಿದೆ. ಹೀಗಾಗಿ ಇಡೀ ಆಸ್ಪತ್ರೆಯನ್ನೇ ಮುಚ್ಚಲಾಗಿದೆ. ದೆಹಲಿಯಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಏರುತ್ತಲೆ ಇದ್ದು, ಸರ್ಕಾರ ಎಷ್ಟೇ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡರೂ ಕೊರೊನಾ ವೈರಸ್ ನಿಯಂತ್ರಣಕ್ಕೆ ಬರುತ್ತಿಲ್ಲ.

ಇದೀಗ, ದೆಹಲಿ ಜಹಾಂಗೀರ್‌ಪುರಿಯಲ್ಲಿರುವ ಬಾಬು ಜಗಜೀವನ್ ರಾಮ್ ಸ್ಮಾರಕ ಸರ್ಕಾರಿ ಆಸ್ಪತ್ರೆಯಲ್ಲಿ 14 ಜನ ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ. ಇದರಲ್ಲಿ ವೈದ್ಯರು ಮತ್ತು ನರ್ಸ್‌ಗಳು ಸೇರಿದ್ದಾರೆ.

ದೆಹಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,376ಕ್ಕೆ ಏರಿಕೆಯಾಗಿದೆ. ಈವರೆಗೂ ದೆಹಲಿಯಲ್ಲಿ 50 ಜನರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಕೇಂದ್ರ ದೆಹಲಿಯಲ್ಲಿ 184, ಆಗ್ನೇಯ ದೆಹಲಿಯಲ್ಲಿ 130, ಪಶ್ಚಿಮ ದೆಹಲಿಯಲ್ಲಿ 122 ಜನರಿಗೆ ಸೋಂಕು ದೃಢವಾಗಿದೆ.

ಆಸ್ಪತ್ರೆಯ ವೈದ್ಯರು, ನರ್ಸ್‌ಗಳಲ್ಲಿ ಸೋಂಕು

ಆಸ್ಪತ್ರೆಯ ವೈದ್ಯರು, ನರ್ಸ್‌ಗಳಲ್ಲಿ ಸೋಂಕು

ಆಸ್ಪತ್ರೆಯ ವೈದ್ಯರು ಮತ್ತು ನರ್ಸ್‌ಗಳಲ್ಲಿ ಸೋಂಕು ಕಾಣಿಸಿಕೊಂಡ ಹಿನ್ನೆಲೆ, ಇಡೀ ಆಸ್ಪತ್ರೆಯನ್ನು ಮುಚ್ಚಲಾಗಿದೆ. ಈ ಮೂಲಕ ಇದುವರೆಗೂ ದೆಹಲಿಯಲ್ಲಿ ಎರಡು ಆಸ್ಪತ್ರೆಗಳು ಸಂಪೂರ್ಣವಾಗಿ ಬಂದ್ ಆಗಿದ್ದು, ಆಸ್ಪತ್ರೆಯಲ್ಲಿ ಸ್ಯಾನಿಟೈಜೇಷನ್ ಕಾರ್ಯ ನಡೆಸಲಾಗುತ್ತಿದೆ.

ದೆಹಲಿಯ ಕ್ಯಾನ್ಸರ್ ಆಸ್ಪತ್ರೆಯ ಸಿಬ್ಬಂದಿಗಳಿಗೂ ಸೋಂಕು ಅಂಟಿತ್ತು

ದೆಹಲಿಯ ಕ್ಯಾನ್ಸರ್ ಆಸ್ಪತ್ರೆಯ ಸಿಬ್ಬಂದಿಗಳಿಗೂ ಸೋಂಕು ಅಂಟಿತ್ತು

ಈ ಹಿಂದೆ ದೆಹಲಿಯಲ್ಲಿರುವ ಕ್ಯಾನ್ಸರ್ ಇನ್ ಸ್ಟಿಟ್ಯೂಟ್ ಆಸ್ಪತ್ರೆಯಲ್ಲಿನ ಸಿಬ್ಬಂದಿಗಳಿಗೂ ಕೊರೊನಾ ವೈರಸ್ ಸೋಂಕು ಅಂಟಿಕೊಂಡ ಪರಿಣಾಮ ಆಸ್ಪತ್ರೆ ಸ್ಥಗಿತ ಮಾಡಲಾಗಿತ್ತು. ಅಷ್ಟೇ ಅಲ್ಲದೆ ರೋಗಿಗಳಿಗೂ ಸೋಂಕು ತಗುಲಿತ್ತು.

ಆಸ್ಪತ್ರೆಯನ್ನು ಕಂಟೈನ್‌ಮೆಂಟ್ ಝೋನ್ ಎಂದು ಘೋಷಣೆ

ಆಸ್ಪತ್ರೆಯನ್ನು ಕಂಟೈನ್‌ಮೆಂಟ್ ಝೋನ್ ಎಂದು ಘೋಷಣೆ

ಇದೀಗ ಈ ಆಸ್ಪತ್ರೆಯನ್ನು ಕಂಟೈನ್ ಮೆಂಟ್ ಝೋನ್ ಎಂದು ಘೋಷಿಸಲಾಗಿದ್ದು, ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಲಾಗಿದೆ. ಅಂತೆಯೇ ಆಸ್ಪತ್ರೆ ಸುತ್ತಮುತ್ತಲ ಪ್ರದೇಶವನ್ನು ಹಾಟ್ ಸ್ಪಾಟ್ ಎಂದು ಘೋಷಣೆ ಮಾಡಲಾಗಿದೆ. ಈ ಆಸ್ಪತ್ರೆಯು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿದ್ದು, ಇಲ್ಲಿ 100 ಬೆಡ್ ಗಳ ವಿಭಾಗವನ್ನು ಕೊರೋನಾ ವೈರಸ್ ಚಿಕಿತ್ಸೆಗಾಗಿಯೇ ಮೀಸಲಿರಿಸಲಾಗಿತ್ತು.

ಹಲವು ಆಸ್ಪತ್ರೆಗಳಲ್ಲಿ ಸ್ಯಾನಿಟೈಸೇಷನ್ ಕಾರ್ಯ

ಹಲವು ಆಸ್ಪತ್ರೆಗಳಲ್ಲಿ ಸ್ಯಾನಿಟೈಸೇಷನ್ ಕಾರ್ಯ

ಇನ್ನು ದೆಹಲಿಯ ಎರಡು ಆಸ್ಪತ್ರೆ ಸಿಬ್ಬಂದಿಗಳಲ್ಲಿ ವೈರಸ್ ಸೋಂಕು ಕಂಡುಬಂದ ಹಿನ್ನಲೆಯಲ್ಲಿ ಇದೀಗ ದೆಹಲಿಯ ಎಲ್ಲ ಆಸ್ಪತ್ರೆಗಳಲ್ಲೂ ಸ್ಯಾನಿಟೈಜೇಷನ್ ಕಾರ್ಯ ಮಾಡಲಾಗುತ್ತಿದೆ. ದೆಹಲಿ ಸಫ್ಜರ್ ಜಂಗ್ ಆಸ್ಪತ್ರೆ, ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆ ಸಿಬ್ಬಂದಿಗಳಲ್ಲೂ ಕೊರೋನಾ ವೈರಸ್ ಪತ್ತೆಯಾಗಿತ್ತು. ಹೀಗಾಗಿ ಎಲ್ಲ ಆಸ್ಪತ್ರೆಗಳಲ್ಲೂ ಸ್ಯಾನಿಟೈಜೇಷನ್ ಕಾರ್ಯ ನಡೆಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+