Get Updates
Get notified of breaking news, exclusive insights, and must-see stories!

ಮೋದಿ ಗುಣಗಾನ, ಶೀಲಾ ದೀಕ್ಷಿತ್ ಗೆ ಕೃತಜ್ಞತೆ ಅರ್ಪಿಸಿದ ಅಮಿತ್ ಶಾ

ನವದೆಹಲಿ, ಮಾರ್ಚ್ 15: ಭಯೋತ್ಪಾದನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ವಿಷಯಕ್ಕೆ ಬಂದಾಗ ಮನಮೋಹನ್ ಸಿಂಗ್ ಅವರಿಗಿಂತ ನರೇಂದ್ರ ಮೋದಿ ಅವರೇ ಬಲಶಾಲಿ ಎಂದು ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ಹೇಳಿದ ಮಾತಿಗೆ ಅಮಿತ್ ಶಾ ಧನ್ಯವಾದ ಅರ್ಪಿಸಿದ್ದಾರೆ.

"ಇಡೀ ದೇಶಕ್ಕೂ ಗೊತ್ತಿರುವ ಸತ್ಯವನ್ನು ಕಾಂಗ್ರೆಸ್ ಪಕ್ಷ ಎಂದಿಗೂ ಒಪ್ಪಿಕೊಳ್ಳದಿದ್ದರೂ, ಅದನ್ನು ಪುನರುಚ್ಚರಿಸಿದ ಶೀಲಾ ದೀಕ್ಷಿತ್ ಅವರಿಗೆ ನನ್ನ ಧನ್ಯವಾದಗಳು" ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

ಚಾನೆಲ್ ವೊಂದಕ್ಕೆ ಸಂದರ್ಶನ ನೀಡುವ ಸಂದರ್ಭದಲ್ಲಿ ಮಾತನಾಡುತ್ತಿದ್ದ ಶೀಲಾ ದೀಕ್ಷಿತ್, ''ಮುಂಬೈ ಭಯೋತ್ಪಾದಕ ದಾಳಿಯ ನಂತರವೂ ಭಯೋತ್ಪಾದಕರ ವಿರುದ್ಧ ಹೋರಾಡುವ ಅಥವಾ ಅವರನ್ನು ನಾಶಮಾಡುವ ಕೆಲಸಕ್ಕೆ ಆಗಿನ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಮುಂದಾಗಲಿಲ್ಲ. ಭಯೋತ್ಪಾದನೆಯ ನಿಗ್ರಹದ ವಿಷಯದಲ್ಲಿ ಮೋದಿಯವರಷ್ಟು ಕಠಿಣ ನಿರ್ಧಾರ ತೆಗೆದುಕೊಳ್ಳುವ ಧೈರ್ಯ ಮನಮೋಹನ್ ಸಿಂಗ್ ಅವರಿಗಿರಲಿಲ್ಲ ಎಂಬುದನ್ನು ಒಪ್ಪಿಕೊಳ್ಳಲೇಬೇಕು" ಎಂದಿದ್ದರು.

Amit Shah thanks sheila dikshit for her remark on PM Modi

ಆದರೆ ಮೋದಿಯವರೂ ಭಯೋತ್ಪಾದನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ಅವರ ರಾಜಕೀಯ ಹಿತಾಸಕ್ತಿ ಇರುವುದನ್ನು ಅಲ್ಲಗಳೆಯುವಂತಿಲ್ಲ ಎಂದೂ ಶೀಲಾ ದೀಕ್ಷಿತ್ ಹೇಳಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+