ದೆಹಲಿಯಿಂದ ಮಾಸ್ಕೋಗೆ ತೆರಳುತ್ತಿದ್ದ ವಿಮಾನ ಅರ್ಧಕ್ಕೆ ವಾಪಸ್

ನವದೆಹಲಿ, ಮೇ 30: ದೆಹಲಿಯಿಂದ ಮಾಸ್ಕೋಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಅರ್ಧಕ್ಕೆ ವಾಪಸಾಗಿದೆ. ಓರ್ವ ಪೈಲಟ್‌ಗೆ ಕೊರೊನಾ ವೈರಸ್ ಪಾಸಿಟಿವ್ ಇರುವುದು ತಿಳಿದುಬಂದ ಕಾರಣ ವಿಮಾನವನ್ನು ವಾಪಸ್ ಕರೆಸಿಕೊಳ್ಳಲಾಯಿತು.

A320 ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕರು ಇರಲಿಲ್ಲ. ವಂದೇ ಭಾರತ್ ಮಿಷನ್ ಅಡಿ ಮಾಸ್ಕೋದಲ್ಲಿ ಸಿಲುಕಿರುವ ಕನ್ನಡಿಗರನ್ನು ವಾಪಸ್ ಕರೆತರಲು ತೆರಳುತ್ತಿದ್ದರು.ಉಜ್ಬೇಕಿಸ್ತಾನ್ ಏರೋಸ್ಪೇಸ್ ತಲುಪಿದಾಗ ತಮ್ಮ ಪೈಲಟ್‌ ಒಬ್ಬರಿಗೆ ಕೊರೊನಾ ವೈರಸ್ ಇರುವುದು ತಿಳಿದುಬಂದಿತ್ತು.

ವಿಮಾನವನ್ನು ವಾಪಸ್ ಕರೆತರಲು ಅನುಮತಿ ಕೇಳಲಾಯಿತು. ಮಧ್ಯಾಹ್ನ 12.30ರ ಸುಮಾರಿಗೆ ವಿಮಾನ ದೆಹಲಿಗೆ ಬಂದಿದೆ. ಕ್ರ್ಯೂಅನ್ನು ಕೂಡ ಕ್ವಾರಂಟೈನ್‌ನಲ್ಲಿರಿಸಲಾಗಿದೆ. ಬೇರೆ ವಿಮಾನವನ್ನು ಮಾಸ್ಕೋಗೆ ಕಳುಹಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Air Indias Delhi-Moscow Flight Returns Midway

ಕೊರೊನಾ ವೈರಸ್ ದೇಶದಾದ್ಯಂತ ಹಬ್ಬಿರುವ ಕಾರಣ ಕಳೆದ ಎರಡು ತಿಂಗಳ ಹಿಂದೆ ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು.

ಇದೀಗ ಮೇ 25ರಿಂದ ದೇಶೀಯ ವಿಮಾನಗಳ ಸೇವೆ ಆರಂಭಗೊಂಡಿದೆ. ಲಾಕ್‌ಡೌನ್‌ ಆರಂಭವಾದಾಗಿನಿಂದಲೂ ವಿದೇಶದಲ್ಲಿ ಸಿಲುಕಿದ್ದ ಭಾರತೀಯರನ್ನು ಕರೆತರುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಅದಕ್ಕಾಗಿ ವಂದೇ ಭಾರತ್ ಮಿಷನ್ ಎನ್ನುವ ಯೋಜನೆ ಜಾರಿಗೊಳಿಸಿದೆ. ಹಾಗೆಯೇ ಮಾಸ್ಕೋದಲ್ಲಿದ್ದ ಭಾರತೀಯರನ್ನು ಕರೆತರಲು ವಿಮಾನ ತೆರಳುತ್ತಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+