ಮೋದಿ ಸಂಪುಟದಲ್ಲಿ ಯಾರ್ಯಾರಿಗೆ ಯಾವ ಖಾತೆ?
ನವದೆಹಲಿ, ಮೇ 31: ಗುರುವಾರ ಸಂಜೆ ಪ್ರಮಾಣ ವಚನ ಸ್ವೀಕರಿಸಿದ 57 ಸಚಿವರಿಗೆ ಯಾವ ಖಾತೆ ನೀಡಲಿದ್ದಾರೆ ಎನ್ನುವುದು ಈಗ ಕುತೂಹಲದ ವಿಚಾರವಾಗಿದೆ.
24 ಸಂಪುಟ, 24 ರಾಜ್ಯ ಖಾತೆ ಹಾಗೂ 9 ಸ್ವತಂತ್ರ ನಿರ್ವಹಣೆಯ ಖಾತೆಗಳ ವಿವರ ಸಂಜೆಯೊಳಗೆ ಅಧಿಕೃತವಾಗಿ ಪ್ರಧಾನಿ ಮೋದಿ ಪ್ರಕಟಿಸಲಿದ್ದಾರೆ.
ಹೀಗಾಗಿ ಸಂಪುಟ ಸದಸ್ಯರ ಪ್ರಮಾಣ ವಚನದ ಬಳಿಕ ಖಾತೆ ಹಂಚಿಕೆ ಬಗ್ಗೆ ಕುತೂಹಲ ಹೆಚ್ಚಿದೆ. ಮೂಲಗಳ ಪ್ರಕಾರ ಈಗಾಗಲೇ ಖಾತೆಗಳ ಪಟ್ಟಿ ಅಂತಿಮವಾಗಿದ್ದು, ರಾಷ್ಟ್ರಪತಿಗೆ ಕಳುಹಿಸುವುದೊಂದೇ ಬಾಕಿ ಇದೆ.

ಕರ್ನಾಟಕಕ್ಕೂ ಮೂರು ಸಂಪುಟ ದರ್ಜೆಯ ಸ್ಥಾನಮಾನ ದೊರೆತಿದ್ದು, ಯಾವ ಪ್ರಮುಖ ಖಾತೆ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ವಿಶೇಷವಾಗಿ ಅಮಿತ್ ಶಾ ಗೆ ಹಣಕಾಸು ಅಥವಾ ಗೃಹ ಇಲಾಖೆ ದೊರೆಯುವುದು ನಿಚ್ಚಳವಾಗಿದೆ. ಶಾ ಗೃಹ ಇಲಾಖೆ ನೀಡಿದರೆ ರಾಜನಾಥ್ ಸಿಂಗ್ ಕೃಷಿ ಇಲಾಖೆಗೆ ವರ್ಗಾವಣೆಯಾಗುವ ಸಾಧ್ಯತೆ ಇದೆ.
ಇತ್ತ ನಿರ್ಮಲಾ ಸೀತಾರಾಮನ್ ನಿತಿನ್ ಗಡ್ಕರಿ, ಪಿಯೂಷ್ ಗೋಯೆಲ್, ಹರಿಶಂಕರ್ ಪ್ರಸಾದ್, ನರೇಂದ್ರ ಸಿಂಗ್ ತೋಮರ್ ಅದೇ ಖಾತೆಯಲ್ಲಿ ಮುಂದುವರೆಯುವ ಸಾಧ್ಯತೆಗಳಿವೆ.
ಕರ್ನಾಟಕದ ಮಾಜಿ ಸಿಎಂ ಡಿವಿ ಸದಾನಂದಗೌಡ ಅವರಿಗೆ ಯಾವ ಖಾತೆ ಸಿಗಲಿದೆ ಎನ್ನುವುದು ಕಾದು ನೋಡಬೇಕಿದೆ. ಸಂಪುಟದ ಹಿರಿತನದಲ್ಲಿ ನಾಲ್ಕನೆಯವರಾಗಿ ಡಿವಿಎಸ್ ಪ್ರಮಾಣ ವಚನ ಸ್ವೀಕರಿಸಿರುವುದು ಪ್ರಮುಖ ಖಾತೆ ದೊರೆಯುವ ಮುನ್ಸೂಚನೆ ನೀಡಿದೆ.
ಸಂಭಾವ್ಯ ಖಾತೆ:
ರಾಜನಾಥ್ ಸಿಂಗ್ ಗೃಹ ಅಥವಾ ಕೃಷಿ
ಅಮಿತ್ ಶಾ-ಹಣಕಾಸು ಅಥವಾ ಗೃಹ ಖಾತೆ
ನಿತಿನ್ ಗಡ್ಕರಿ-ಹೆದ್ದಾರಿ ಹಾಗೂ ಜಲಸಾರಿಗೆ
ಡಿವಿ ಸದಾನಂದ ಗೌಡ- ಯೋಜನಾ ಮತ್ತು ಸಾಂಖ್ಯಿಕ ಅಥವಾ ಕಾನೂನು
ನಿರ್ಮಲಾ ಸೀತಾರಾಮನ್ -ರಕ್ಷಣೆ
ರವಿಶಂಕರ್ ಪ್ರಸಾದ್-ಕಾನೂನು ಅಥವಾ ಟೆಲಿಕಾಂ
ನರೇಂದ್ರ ಸಿಂಗ್ ತೋಮರ್-ಸಂಸದೀಯ ವ್ಯವಹಾರ
ಎಸ್ ಜೈಶಂಕರ್-ವಿದೇಶಾಂಗ
ಪ್ರಹ್ಲಾದ್ ಜೋಶಿ-ಪೆಟ್ರೋಲಿಯಂ
ಪಿಯುಷ್ ಗೋಯೆಲ್-ರೈಲ್ವೆ
ಸ್ಮೃತಿ ಇರಾನಿ-ಮಹಿಳಾ ಮತ್ತು ಮಕ್ಕಳ ಕಲ್ಯಾಣ












Click it and Unblock the Notifications