ದೆಹಲಿಯಲ್ಲಿ ಗುಂಡು ಹೊಡೆದಿದ್ದಕ್ಕೆ ಎರಡು ದಿನ ರಿಮ್ಯಾಂಡ್ ರೂಮ್ ವಾಸ

ನವದೆಹಲಿ, ಫೆಬ್ರವರಿ.02: ರಾಷ್ಟ್ರ ರಾಜಧಾನಿಯ ಶಾಹಿನ್ ಬಾಗ್ ನಲ್ಲಿ ಮೂರು ಸುತ್ತು ಗಾಳಿಯಲ್ಲಿ ಗುಂಡಿನ ದಾಳಿ ನಡೆಸಿದ ಆರೋಪಿ ಕಪಿಲ್ ಗುಜ್ಜರ್ ನನ್ನು ಎರಡು ದಿನಗಳ ಕಾಲ ಪೊಲೀಸ್ ರಿಮ್ಯಾಂಡ್ ರೂಮ್ ನಲ್ಲಿ ಇರಿಸುವಂತೆ ದೆಹಲಿ ಕೋರ್ಟ್ ಆದೇಶಿಸಿದೆ.

ಆರೋಪಿ ಕಪಿಲ್ ಗುಜ್ಜರ್ ನನ್ನು ಶನಿವಾರ ವಶಕ್ಕೆ ಪಡೆದಿದ್ದ ದೆಹಲಿ ಪೊಲೀಸರು ಕೋರ್ಟ್ ಎದುರು ಹಾಜರುಪಡಿಸಿದರು. ಈ ವೇಳೆ ಎರಡು ದಿನ ರಿಮ್ಯಾಂಡ್ ರೂಮ್ ನಲ್ಲಿ ಆರೋಪಿಯನ್ನು ಇರಿಸಿ ವಿಚಾರಣೆಗೆ ಒಳಪಡಿಸುವಂತೆ ಕೋರ್ಟ್ ಸೂಚನೆ ನೀಡಿದೆ.

A Man Who Fired Opened In Shaheen Bagh Sends to Police Remand Room

ಫೆಬ್ರವರಿ.01ರ ಶನಿವಾರ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಶಾಹಿನ್ ಬಾಗ್ ನಲ್ಲಿ ಪ್ರತ್ಯಕ್ಷನಾದ ಆರೋಪಿ ಕಪಿಲ್ ಗುಜ್ಜರ್ ಗಾಳಿಯಲ್ಲಿ ಗುಂಡು ಹಾರಿಸಿದ್ದನು. ಇದರಿಂದ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದರು.

ಹಿಂದೂ ಪರ ಘೋಷಣೆ ಕೂಗಿದ್ದ ಕಪಿಲ್ ಗುಜ್ಜರ್:

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಯುತ್ತಿರುವ ಸ್ಥಳದಲ್ಲೇ ಆರೋಪಿ ಕಪಿಲ್ ಗುಜ್ಜರ್, ಹಿಂದೂ ಪರ ಘೋಷಣೆಯನ್ನು ಕೂಗಿದ್ದನು. ಪೊಲೀಸರು ಆತನನ್ನು ವಶಕ್ಕೆ ಪಡೆದಾಗಲೂ ಕೂಡಾ ಈ ದೇಶದಲ್ಲಿ ಹಿಂದೂಗಳದ್ದೇ ಆಟ ನಡೆಯಬೇಕು. ಇಲ್ಲಿ ಬೇರೆ ಯಾರ ಆಟವೂ ನಡೆಯುವುದಿಲ್ಲ ಎಂದು ಘೋಷಣೆ ಕೂಗಿದ್ದನು. ಹೀಗೆ ಘೋಷಣೆ ಕೂಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲೂ ಸಖತ್ ಸದ್ದು ಮಾಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+