• search
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೇವಲ 10 ರೂ.ಗೆ ಚಿಕಿತ್ಸೆ ನೀಡುವ ಮೈಸೂರಿನ ಮಾದರಿ ವೈದ್ಯ ಶ್ಯಾಮಸುಂದರ್

|

ಮೈಸೂರು, ಡಿಸೆಂಬರ್ 3: ಇತ್ತೀಚಿನ ದಿನಗಳಲ್ಲಿ ವೈದ್ಯರು, ಆಸ್ಪತ್ರೆ ಎಂದರೆ ಸಾಕು ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಆಸ್ಪತ್ರೆಗಳಲ್ಲಿ ಬೆಡ್ ಮೇಲೆ ಮಲಗಿ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರೆ, ಇತ್ತ ಅವರ ಸಂಬಂಧಿಕರು ಆಸ್ಪತ್ರೆಯ ಸಿಬ್ಬಂದಿಗಳ ಬಳಿ ಹೋಗಿ ಬಿಲ್ ಎಷ್ಟಾಯ್ತು? ಎಂದು ಕೇಳಿಕೊಂಡು ಬರುತ್ತಿರುತ್ತಾರೆ.

ಅದಕ್ಕೆ ಕಾರಣವೂ ಇದೆ ಬಿಡಿ. ಆಸ್ಪತ್ರೆಗೆ ದಾಖಲಾದ ಕೆಲವೇ ಕ್ಷಣಗಳಲ್ಲಿ ನಾವು ನೀರಿಕ್ಷಣೆಯೇ ಮಾಡಿರುವುದಿಲ್ಲ, ಅಷ್ಟೊಂದು ಮೊತ್ತದ ಬಿಲ್ ನಮ್ಮ ಮುಂದಿರುತ್ತದೆ. ಎಲ್ಲಾ ಆಸ್ಪತ್ರೆಗಳಲ್ಲಿ ಹೀಗೆ ನಡೆದುಕೊಳ್ಳುವುದಿಲ್ಲವಾದರೂ ಕೆಲ ಆಸ್ಪತ್ರೆಗಳಲ್ಲಿ ಇದು ಸಾಮಾನ್ಯವಾಗಿ ಕಂಡುಬರುವ ದೃಶ್ಯ.

ಅನ್ನದಾನ ಮಾಡ್ತಾರೆ, ಮಗ್ಗಿ ಪುಸ್ತಕವನ್ನೂ ಕೊಡ್ತಾರೆ ಈ ವೈದ್ಯ

ಆದರೆ ನಿಮಗೆ ಮುಖ್ಯವಾದ ವಿಚಾರವೊಂದು ಹೇಳುವುದಿದೆ. ಅದೇನೆಂದರೆ ಮೈಸೂರಿನಲ್ಲೊಬ್ಬರು ಡಾಕ್ಟರ್ ಇದ್ದಾರೆ. ಅವರು ಪಡೆಯುವ ವೈದ್ಯಕೀಯ ಸಲಹಾ ಚಿಕಿತ್ಸೆ ಶುಲ್ಕ (ಕನ್ಸಲ್ಟೆನ್ಸಿ ಫೀ) 10 ರೂ ಅಷ್ಟೇ. ಅರೇ 10 ರೂ.ಗೆ ಒಂದು ಪ್ಲೇಟ್ ತಿಂಡಿಯೂ ಬರಲ್ಲ. ಅಂತಹದ್ದರಲ್ಲಿ ಟ್ರೀಟ್ ಮೆಂಟ್! ಎಂದು ಚಕಿತರಾಗಬೇಡಿ.

ಚಿಕಿತ್ಸಾ ಉಪಕರಣಗಳ ವೆಚ್ಚ, ವೈದ್ಯರ ವೈದ್ಯಕೀಯ ಸಲಹಾ ಚಿಕಿತ್ಸೆ ಶುಲ್ಕ ಗಗನಕ್ಕೇರುತ್ತಿರುವ ಈ ಹೊತ್ತಿನಲ್ಲಿ ಇಲ್ಲೊಬ್ಬರು ವೈದ್ಯರು ಕೇವಲ 10ರೂ.ಗೆ ಚಿಕಿತ್ಸೆ ನೀಡುತ್ತಾ ಮಾದರಿ ವೈದ್ಯರೆನಿಸಿಕೊಂಡಿದ್ದಾರೆ.

ನೆಚ್ಚಿನ '20 ರೂಪಾಯಿ ಡಾಕ್ಟರ್' ಶರೀರದ ಮುಂದೆ ಕಣ್ಣೀರಿಟ್ಟರು ಜನ

ಜೆಎಸ್ಎಸ್ ವೈದ್ಯಕೀಯ ಕಾಲೇಜಿನ ಅಂಗರಚನಾ ವಿಜ್ಞಾನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿರುವ ಅವರ ಹೆಸರು ಎನ್‌.ಎಂ.ಶ್ಯಾಮಸುಂದರ್. ಬಡ ರೋಗಿಗಳ ಬಂಧು ಎಂದರೆ ತಪ್ಪಾಗಲಾರದು. ಅಂದ ಹಾಗೆ ವೈದ್ಯರ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ ಓದಿ...

 ಹಳ್ಳಿಗಳಿಂದ ಹುಡುಕಿಕೊಂಡು ಬರುತ್ತಾರೆ

ಹಳ್ಳಿಗಳಿಂದ ಹುಡುಕಿಕೊಂಡು ಬರುತ್ತಾರೆ

ಮೈಸೂರು ನಗರದ ಸಿದ್ಧಾರ್ಥ ಬಡಾವಣೆಯ 14ನೇ ಮುಖ್ಯರಸ್ತೆಯಲ್ಲಿ ಶಾಂತಲಾ ವಿದ್ಯಾಪೀಠ ಹಿಂಭಾಗ ಮಿನಿ ಕ್ಲಿನಿಕ್‌ ಇಟ್ಟುಕೊಂಡು ನಿತ್ಯ ರಾತ್ರಿ 8 ರಿಂದ 10 ಗಂಟೆವರೆಗೆ ಚಿಕಿತ್ಸೆ ನೀಡುತ್ತಾರೆ ವೈದ್ಯ ಶ್ಯಾಮಸುಂದರ್. ಕಳೆದ 3 ದಶಕಗಳಿಂದ ಈ ಕಾಯಕದಲ್ಲಿ ತೊಡಗಿಸಿಕೊಂಡಿದ್ದು, ಲಕ್ಷಾಂತರ ರೋಗಿಗಳು ಇಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಜಿಲ್ಲೆಯ ವಿವಿಧ ಹಳ್ಳಿಗಳಿಂದ ಜನರು ಈ ವೈದ್ಯರನ್ನು ಹುಡುಕಿಕೊಂಡು ಬರುತ್ತಾರೆ ಎಂದರೆ ಇವರ ಸಾಮರ್ಥ್ಯ ನೀವೇ ಊಹಿಸಿ.

 10 ರೂ.ಗೆ ಚುಚ್ಚುಮದ್ದು, ಮಾತ್ರೆ

10 ರೂ.ಗೆ ಚುಚ್ಚುಮದ್ದು, ಮಾತ್ರೆ

10 ರೂಪಾಯಿ ಡಾಕ್ಟರ್‌ ಎಂದೇ ಈ ಭಾಗದಲ್ಲಿ ಪ್ರಸಿದ್ಧಿ ಪಡೆದಿರುವ ಶ್ಯಾಮಸುಂದರ್ 10 ರೂ.ಗೆ ತಪಾಸಣೆ ಜೊತೆಗೆ ಚುಚ್ಚುಮದ್ದು ಹಾಗೂ ಮಾತ್ರೆ ನೀಡುತ್ತಾರೆ. ಮಕ್ಕಳಿಗೆ ಹರ್ನಿಯಾ ಸೇರಿದಂತೆ ಸಣ್ಣಪುಟ್ಟ ಶಸ್ತ್ರಚಿಕಿತ್ಸೆಯನ್ನೂ ಮಾಡಿದ್ದಾರೆ.

ಮಾವ ಎಚ್ ಡಿ ದೇವೇಗೌಡ್ರ ಬಗ್ಗೆ ಅವರ ಅಳಿಯ ಡಾ. ಸಿ ಎನ್ ಮಂಜುನಾಥ್ ಹೇಳುವುದೇನು?

 ಪ್ರಾಧ್ಯಾಪಕರಾಗಿ ಕೆಲಸ

ಪ್ರಾಧ್ಯಾಪಕರಾಗಿ ಕೆಲಸ

ಅಂಗರಚನಾ ವಿಜ್ಞಾನ ವಿಭಾಗದ ಮುಖ್ಯಸ್ಥರಾಗಿ 16 ವರ್ಷದಿಂದ ಕಾರ್ಯ ನಿರ್ವಹಿಸುತ್ತಿರುವ ಶ್ಯಾಮ್ ಸುಂದರ್ ಗೆ 63 ವರ್ಷ. ಇವರು ಇದೇ ವಿಭಾಗದಲ್ಲಿ ಈಗ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ, ಜೆಎಸ್ ಎಸ್‌ ದೇಹದಾನ ಸಂಸ್ಥೆಯ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

 ನಿತ್ಯ 25 ಮಂದಿಗೆ ಚಿಕಿತ್ಸೆ ನೀಡುವೆ

ನಿತ್ಯ 25 ಮಂದಿಗೆ ಚಿಕಿತ್ಸೆ ನೀಡುವೆ

ಇನ್ನು ಈ ಕುರಿತಾಗಿ ಒನ್ ಇಂಡಿಯಾ ಜೊತೆ ಮಾತನಾಡಿದ ಡಾ. ಶ್ಯಾಮ್ ಸುಂದರ್, ನನಗೆ ಈ ಕೆಲಸ ಹೆಚ್ಚು ತೃಪ್ತಿ ತರಿಸಿದೆ. ನನಗೆ ಕಾಲೇಜಿನಲ್ಲಿ ತಿಂಗಳ ವೇತನ ಬರುತ್ತದೆ. ಹೀಗಾಗಿ, ಚಿಕಿತ್ಸೆಗೆ ಬರುವವರಿಂದ ಹೆಚ್ಚು ಹಣ ಪಡೆಯುವುದಿಲ್ಲ. ನಿತ್ಯ 25 ಮಂದಿಗೆ ಚಿಕಿತ್ಸೆ ನೀಡುತ್ತೇನೆ. ರಾತ್ರಿ ಟಿ.ವಿ ನೋಡಿ ಕಾಲ ಕಳೆಯುವ ಬದಲು ಕ್ಲಿನಿಕ್‌ ಇಟ್ಟುಕೊಂಡು ಚಿಕಿತ್ಸೆ ನೀಡುತ್ತಿದ್ದೇನೆ.

ಶಸ್ತ್ರಚಿಕಿತ್ಸೆ ನಡೆಸಿ ಇಂತಿಷ್ಟೇ ಹಣ ಕೊಡಿ ಎಂದು ನಾನು ಕೇಳುವುದಿಲ್ಲ. ಎಷ್ಟು ಕೊಡುತ್ತಾರೋ ಅಷ್ಟು ಪಡೆಯುತ್ತೇನೆ. ಹೀಗೆ, ಸುಮಾರು 3 ಸಾವಿರ ಶಸ್ತ್ರಚಿಕಿತ್ಸೆ ನಡೆಸಿದ್ದೇನೆ. ಚಿಕಿತ್ಸೆ ಪಡೆದ
ರೋಗಿಯು ನಾಳೆ ಬಂದು ಚೆನ್ನಾಗಿದ್ದೇನೆ ಎಂದು ಹೇಳಿದರೆ ಅದೇ ನನಗೆ ಸಮಾಧಾನ ಎಂದು ನಗುಮೊಗದಿಂದಲೇ ನುಡಿಯುತ್ತಾರೆ ವೈದ್ಯ ಶ್ಯಾಮ್ ಸುಂದರ್.

ಉನ್ನತ ಹುದ್ದೆಯಲ್ಲಿದ್ದರೆ ಸಾಕು ಎಲ್ಲವನ್ನೂ ವ್ಯವಹಾರಿಕವಾಗಿಯೇ ಕಾಣುವ ಅನೇಕರ ನಡುವೆ ಶ್ಯಾಮ್ ಸುಂದರ್ ಎಲ್ಲರಿಗೂ ಮಾದರಿಯಾಗಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಮೈಸೂರು ಸುದ್ದಿಗಳುView All

English summary
Shyamasundar, a doctor from Mysuru give vaccine and pill with checkup for only Rs. 10. Here is a detailed article on this.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more