• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಾಮುಂಡಿ ದೇವಿ ದರ್ಶನಕ್ಕೆ ಬರಿಗಾಲಿನಲ್ಲಿ ಬೆಟ್ಟ ಹತ್ತಿದ ನಟ ಪುನೀತ್

|

ಮೈಸೂರು, ಸೆಪ್ಟೆಂಬರ್ 11: ಇಂದು ಬೆಳಿಗ್ಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಾಮುಂಡಿ ಬೆಟ್ಟವನ್ನು ಬರಿಗಾಲಿನಲ್ಲಿ ಹತ್ತಿ ಚಾಮುಂಡಿ ದೇವಿ ದರ್ಶನ ಪಡೆದಿದ್ದಾರೆ.

ಕನ್ನಡ ಚಿತ್ರರಂಗ ಸದಾ ಕೊಡಗಿನ ಜೊತೆ ಇರುತ್ತೆ; ನಟ ಪುನೀತ್

ಮೈಸೂರಿನ ಹಲವೆಡೆ ಯುವರತ್ನ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಸಾಮಾನ್ಯವಾಗಿ ಶೂಟಿಂಗ್ ವೇಳೆಯಲ್ಲಿ ಮೈಸೂರಿಗೆ ಬಂದರೆ ಪುನೀತ್ ಬೆಟ್ಟದ ಮೆಟ್ಟಿಲುಗಳನ್ನು ಹತ್ತಿಯೇ ತಾಯಿಯ ದರ್ಶನ ಪಡೆಯುತ್ತಾರೆ. ಇಂದು ಕೂಡ ಬೆಟ್ಟ ಹತ್ತಿದ್ದಾರೆ.

ಈ ವೇಳೆ ಪುನೀತ್ ಅವರನ್ನು ಕಂಡು ವಾಯು ವಿಹಾರಕ್ಕೆ ಬಂದಿದ್ದ ಸಾರ್ವಜನಿಕರು ಸಂಭ್ರಮಿಸಿದರು. ಪುನೀತ್ ರಾಜ್ ಕುಮಾರ್ ಬೆಟ್ಟ ಹತ್ತಿ ಇಳಿಯುವವರೆಗೂ ಅಭಿಮಾನಿಗಳು ಜೊತೆಯಲ್ಲಿ ಅವರಿಗೆ ಸಾಥ್ ನೀಡಿದರು. ಕೆಲ ದಿನಗಳ ಹಿಂದೆಯೂ ಮೈಸೂರಿಗೆ ಬಂದಿದ್ದ ವೇಳೆ ಚಾಮುಂಡಿ ಬೆಟ್ಟ ಹತ್ತಿ ಚಾಮುಂಡಿಗೆ ವಿಶೇಷ ಪೂಜೆ ಸಲ್ಲಿಸಿದ್ದರು.

English summary
Actor and Power star puneeth rajkumar climbed chamundi hills. He offered a special pooja in this temple.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X