10 ವಿಧವಾಗಿ ಕೊರೊನಾ ವೈರಸ್ ರೂಪಾಂತರ : ಏನಿದು A2a ?
ಮುಂಬೈ, ಏಪ್ರಿಲ್ 28: ವೈರಸ್ 10 ವಿಧವಾಗಿ ರೂಪಾಂತರಗೊಳ್ಳುತ್ತದೆ ಕೊರೊನಾ ವೈರಸ್‌ನಲ್ಲಿ A2a ಪ್ರಬಲವಾಗಿದೆ ಎಂದು ಜನೋಮಿಕ್ಸ್ ಸಂಸ್ಥೆ ವರದಿ ನೀಡಿದೆ.
ಪಶ್ಚಿಮ ಬಂಗಾಳದ ಕಲ್ಯಾಣಿಯಲ್ಲಿರುವ ಜನೋಮಿಕ್ಸ್ ಸಂಶೋಧನಾ ಸಂಸ್ಥೆಯ ನಿಧಾನ್ ಬಿಸ್ವಾಸ್ ಹಾಗೂ ಪಾರ್ಥ ಮಜುಂದಾರ್ ಇದರ ಬಗ್ಗೆ ಸಂಶೋಧನೆ ನಡೆಸಿದ್ದಾರೆ.
ಜಾಗತಿಕವಾಗಿ 55 ದೇಶಗಳಲ್ಲಿ ಆರ್‌ಎನ್‌ಎ ಪರೀಕ್ಷೆ ಮಾಡಿಸಲಾಗಿದೆ. ಈಗಾಗಲೇ 3636 ಮಂದಿಗೆ ಆರ್‌ಎನ್‌ಎ ಪರೀಕ್ಷೆ ಮಾಡಿಸಲಾಗಿದ್ದು, ಅದರಲ್ಲಿ 1848 ಮಂದಿಗೆ A2a ವೈರಸ್ ಇರುವುದು ದೃಢಪಟ್ಟಿದೆ.

ಭಾರತದಲ್ಲಿ 35 ಮಂದಿಗೆ ಆರನ್‌ಎ ಪರೀಕ್ಷೆ ಮಾಡಲಾಗಿದ್ದು 16 ಮಂದಿಯಲ್ಲಿ ಈ ಪ್ರಬಲ ವೈರಸ್ ಗೋಚರಿಸಿದೆ. ಭಾರತದಲ್ಲಿ ಒಟ್ಟು ಶೇ.47.5 ಮಂದಿಯಲ್ಲಿ ಈ ವೈರಸ್ ಪತ್ತೆಯಾಗಿದೆ. ಇದು ನೇರವಾಗಿ ಮನುಷ್ಯನ ಸ್ವಾಸಕೋಶಕ್ಕೆ ಪ್ರವೇಶಿಸುತ್ತದೆ. ಮಾರ್ಚ್ ತಿಂಗಳ ಬಳಿಕ ಈ ವೈರಸ್‌ನ ಬೆಳವಣಿಗೆಯಾಗಿದೆ. ವೈರಸ್ ಶೂನ್ಯದಿಂದ ಹತ್ತು ವಿಧಗಳಾಗಿ ರೂಪಾಂತರಗೊಳ್ಳುತ್ತದೆ.
ಬೇರೆ ವಿಧಗಳ ವೈರಸ್‌ಗಳನ್ನು ಹಿಂದಿಕ್ಕಿ ಇದರ ಬೆಳವಣಿಗೆಯಾಗಿದೆ. ಕಳೆದ ಹತ್ತು ವರ್ಷಗಳ ಹಿಂದೆ ಸಾರ್ಸ್ ವೈರಸ್ ಕಾಣಿಸಿಕೊಂಡಿತ್ತು, ಅದೂ ಕೂಡ ನೇರವಾಗಿ ಶ್ವಾಸಕೋಶಕ್ಕೆ ತೊಂದರೆ ನೀಡಿತ್ತು.
ಆದರೆ ಕೊರೊನಾದಷ್ಟು ಬಲವಾಗಿರಲಿಲ್ಲ, ಉಳಿದೆಲ್ಲಾ ವೈರಸ್‌ಗಳಿಗಿಂತ ಈ ವೈರಸ್ ಪ್ರಬಲವಾಗಿದೆ. ಬಹುತೇಕ ರಾಷ್ಟ್ರಗಳಲ್ಲಿ ಈ ವಿಧದ ವೈರಸ್ ಹೆಚ್ಚಿದೆ. ಎಲ್ಲೆಲ್ಲಿ ಯಾವ ವೈರಸ್ ಪ್ರಭಾವ ಹೆಚ್ಚಿದೆ ಎಂದು ತಿಳಿದುಬಂದರೆ ಲಸಿಕೆ ಕಂಡು ಹಿಡಿಯುವುದು ಕೂಡ ಸುಲಭವಾಗಲಿದೆ.
ಸಾರ್ಸ್ 800 ಮಂದಿಯನ್ನು ಹತ್ಯೆ ಮಾಡಿತ್ತು, 8 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿತ್ತು. ಅದರಲ್ಲಿ 0,A2,A2a,A3,B,B1 ಹೀಗೆ ಹಲವು ಬಗೆಯ ವೈರಸ್‌ಗಳಿವೆ.












Click it and Unblock the Notifications