ಶತದಿನದ ಬಳಿಕ ಅಯೋಧ್ಯೆಗೆ ಭೇಟಿ ನೀಡಲಿರುವ ಉದ್ಧವ್ ಠಾಕ್ರೆ

ಮುಂಬೈ, ಜನವರಿ 23: ಮಹಾರಾಷ್ಟ್ರ ಸರ್ಕಾರವು ನೂರು ದಿನ ಪೂರೈಸುತ್ತಿದ್ದಂತೆ ಅಯೋಧ್ಯೆ ರಾಮಮಂದಿರಕ್ಕೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭೇಟಿ ನೀಡಲಿದ್ದಾರೆ.

ಸರ್ಕಾರವು ನೂರು ದಿನ ಪೂರೈಸಿದ ಶುಭ ಸಂದರ್ಭದಲ್ಲಿ ಪವಿತ್ರ ಸ್ಥಳಕ್ಕೆ ಠಾಕ್ರೆ ಭೇಟಿನೀಡಲಿದ್ದಾರೆ. ಶಿವಸೇನೆ ಹಾಗೂ ಸರ್ಕಾರದ ಉಜ್ವಲ ಭವಿಷ್ಯಕ್ಕಾಗಿ ಪ್ರಾರ್ಥಿಸಲಿದ್ದಾರೆ ಎಂದು ಶಿವಸೇನೆ ವಕ್ತಾರ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ತಿಳಿಸಿದ್ದಾರೆ.

ಈ ಹಿಂದೆ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಳಿಕವೂ ಅಯೋಧ್ಯೆಗೆ ಉದ್ಧವ್ ಠಾಕ್ರೆ ಭೇಟಿ ನೀಡಲಿದ್ದಾರೆ ಎಂದು ಠಾಕ್ರೆ ಹೇಳಿದ್ದರು ಆದರೆ ಅಯೋಧ್ಯೆ ರಾಮಮಂದಿರದ ಬಗ್ಗೆ ಸೀಮಿತ ನಿಲುವು ಹೊಂದಿರುವ ಕಾಂಗ್ರೆಸ್ ಹಾಗೂ ಎನ್‌ಸಿಪಿ ಜೊತೆಗೂಡಿ ಸರ್ಕಾರ ರಚಿಸಿರುವ ಹಿನ್ನೆಲೆಯಲ್ಲಿ ಠಾಕ್ರೆ ಭೇಟಿ ರದ್ದಾಗಿತ್ತು.

ಉದ್ಧವ್ ಠಾಕ್ರೆ ಬಿಜೆಪಿಯ ಟೀಕೆಗೆ ಒಳಗಾಗಿದ್ದರು

ಉದ್ಧವ್ ಠಾಕ್ರೆ ಬಿಜೆಪಿಯ ಟೀಕೆಗೆ ಒಳಗಾಗಿದ್ದರು

ಉದ್ಧವ್ ಠಾಕ್ರೆಯ ಈ ನಿರ್ಧಾರವು ಪಕ್ಷದ ವಲಯದಲ್ಲಿ ಹಾಗೂ ಬಿಜೆಪಿಯಲ್ಲಿ ಟೀಕೆಗೂ ಒಳಗಾಗಿತ್ತು. ಸರ್ಕಾರ ನಡೆಸುವ ಹಪಾಹಪಿಗಾಗಿ ಶಿವಸೇನೆಯು ತನ್ನ ಸಿದ್ಧಾಂತಗಳಿಂದ ದೂರ ಸರಿಯುತ್ತಿದೆ. ಹಿಂದಿನ ನಿಲುವಿನಿಂದ ಜಾರಿಕೊಳ್ಳುತ್ತಿದೆ ಎಂದು ಬಿಜೆಪಿ ಟೀಕಿಸಿತ್ತು.

ಅಯೋಧ್ಯೆ ಭೇಟಿ ಕುರಿತು ಚರ್ಚೆ

ಅಯೋಧ್ಯೆ ಭೇಟಿ ಕುರಿತು ಚರ್ಚೆ

ಆದರೆ ಈಗ ಮತ್ತೆ ಅಯೋಧ್ಯಾ ಭೇಟಿಗೆ ಸಂಬಂಧಿಸಿ ಚರ್ಚೆ ಆರಂಭವಾಗಿದೆ. ಈ ಹಿಂದೆ ಲೋಕಸಭೆ ಚುನಾವಣೆಗೂ ಮುನ್ನ ಉದ್ಧವ್ ಠಾಕ್ರೆ ಅಯೋಧ್ಯೆಗೆ ಭೇಟಿ ನೀಡಿದ್ದರು.

ಉದ್ಧವ್ ಠಾಕ್ರೆ ಭೇಟಿಗೆ ಅವಕಾಶ ನೀಡುತ್ತಾ ಕಾಂಗ್ರೆಸ್‌-ಎನ್‌ಸಿಪಿ

ಉದ್ಧವ್ ಠಾಕ್ರೆ ಭೇಟಿಗೆ ಅವಕಾಶ ನೀಡುತ್ತಾ ಕಾಂಗ್ರೆಸ್‌-ಎನ್‌ಸಿಪಿ

ಈ ಬಾರಿ ಮತ್ತೆ ಭೇಟಿ ನೀಡುವ ವಿಚಾರವನ್ನೇನೋ ಶಿವಸೇನೆ ಪ್ರಸ್ತಾಪಿಸಿದೆ ಆದರೆ ಇದನ್ನು ಕಾಂಗ್ರೆಸ್ ಹಾಗೂ ಎನ್‌ಸಿಪಿ ಹೇಗೆ ಸ್ವೀಕರಿಸಲಿದೆ. ಉದ್ಧವ್ ಠಾಕ್ರೆ ಭೇಟಿಗೆ ಅವಕಾಶ ನೀಡಲಿದೆಯೇ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಆದರೆ ಸದ್ಯಕ್ಕೆ ಉದ್ಧವ್ ಠಾಕ್ರೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ರಾಮಮಂದಿರ ಬಗ್ಗೆ ಸೀಮಿತ ಒಲವು

ರಾಮಮಂದಿರ ಬಗ್ಗೆ ಸೀಮಿತ ಒಲವು

ಈ ಹಿಂದೆ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಳಿಕವೂ ಅಯೋಧ್ಯೆಗೆ ಉದ್ಧವ್ ಠಾಕ್ರೆ ಭೇಟಿ ನೀಡಲಿದ್ದಾರೆ ಎಂದು ಠಾಕ್ರೆ ಹೇಳಿದ್ದರು ಆದರೆ ಅಯೋಧ್ಯೆ ರಾಮಮಂದಿರದ ಬಗ್ಗೆ ಸೀಮಿತ ನಿಲುವು ಹೊಂದಿರುವ ಕಾಂಗ್ರೆಸ್ ಹಾಗೂ ಎನ್‌ಸಿಪಿ ಜೊತೆಗೂಡಿ ಸರ್ಕಾರ ರಚಿಸಿರುವ ಹಿನ್ನೆಲೆಯಲ್ಲಿ ಠಾಕ್ರೆ ಭೇಟಿ ರದ್ದಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+