• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಫಡ್ನವಿಸ್ ಸರ್ಕಾರದ ಇನ್ನೊಂದು ಆದೇಶವನ್ನು ತಲೆಕೆಳಗಾಗಿಸಿದ ಉದ್ಧವ್

|

ಮುಂಬೈ, ಡಿಸೆಂಬರ್ 26: ಫಡ್ನವಿಸ್ ಸರ್ಕಾರದ ಮತ್ತೊಂದು ಆದೇಶವನ್ನು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಲೆಕೆಳಗಾಗಿಸಿದ್ದಾರೆ.

ಉದ್ಧವ್ ಠಾಕ್ರೆ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ 2 ಲಕ್ಷ ಪೊಲೀಸರ ವೇತನ ಖಾತೆಯನ್ನು ಖಾಸಗಿ ಸ್ವಾಮ್ಯದ ಆ್ಯಕ್ಸಿಸ್ ನಿಂದ ಸರ್ಕಾರಿ ಬ್ಯಾಂಕ್‌ಗೆ ವರ್ಗಾವಣೆ ಮಾಡಲು ಮುಂದಾಗಿದೆ.

ಎನ್ಸಿಪಿ ನಾಯಕ ಅಜಿತ್ ಪವಾರ್ ಮತ್ತೆ ಮಹಾರಾಷ್ಟ್ರ ಡಿಸಿಎಂ?

ವಾರ್ಷಿಕವಾಗಿ ಈ ಖಾತೆಗಳ ಮೂಲಕ 11 ಸಾವಿರ ಕೋಟಿ ವಹಿವಾಟು ನಡೆಯುತ್ತಿದೆ. ವಿಶೇಷವೆಂದರೆ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಆ್ಯಕ್ಸಿಸ್ ಬ್ಯಾಂಕ್ ಉನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಫಡ್ನವಿಸ್ ಪತ್ನಿ ಆ್ಯಕ್ಸಿಸ್ ಬ್ಯಾಂಕಿನಲ್ಲಿ ಉಪಾಧ್ಯಕ್ಷೆ ಹಾಗೂ ಪಶ್ಚಿಮ ಭಾರತ ಕಾರ್ಪೊರೇಟ್ ಹೆಡ್ ಆಗಿರುವುದರಿಂದ ಪೊಲೀಸರ ವೇತನ ಖಾತೆಯನ್ನು ಆಕ್ಸಿಸ್ ಬ್ಯಾಂಕಿನಲ್ಲಿ ತೆರೆಯಲಾಗಿದೆ ಎಂದು ನಾಗ್ಪುರ ಮೂಲದ ಸಾಮಾಜಿಕ ಕಾರ್ಯಕರ್ತ ಮೊಹ್ನಿಶ್ ಜಬಲ್‌ಪುರ ಎಂಬುವವರು ಜಾರಿ ನಿರ್ದೇಶನಾಲಯಕ್ಕೆ ದೂರು ಸಲ್ಲಿಸಿದ್ದರು.

ಆದರೆ ಫಡ್ನವಿಸ್ ಅವರು ಅಮೃತಾರನ್ನು ಮದುವೆಯಾಗುವ ಕೆಲ ತಿಂಗಳು ಮೊದಲೇ ಅಂದಿನ ಮಹಾ ಸರ್ಕಾರ ರಾಜ್ಯದ 2 ಲಕ್ಷ ಪೊಲೀಸರ ಬ್ಯಾಂಕ್ ಖಾತೆಗಳನ್ನು ಆ್ಯಕ್ಸಿಸ್ ಬ್ಯಾಂಕ್‌ನಲ್ಲಿ ತೆರೆಯಲಾಗತ್ತು.

ಹಾಗಾಗಿ ಈ ನಿರ್ಧಾರ ತೆಎಗೆದುಕೊಳ್ಳಲಾಗಿದೆ ಎಂದು ಹಣಕಾಸು ಸಚಿವ ಜಯಂತ್ ಪಾಟೀಲ್ ಹೇಳಿದ್ದಾರೆ.

English summary
Axis bank, one of the top private banks is likely to lose one of its biggest customers, the Maharashtra government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X