• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟಿಆರ್‌ಪಿ ಹಗರಣ : ಅರ್ನಬ್ ಗೋಸ್ವಾಮಿ ಹಾಗೂ ಬಾರ್ಕ್ ಮಾಜಿ ಸಿಇಒ ನಡುವಿನ ವಾಟ್ಸಾಪ್ ಚಾಟ್ ಸೋರಿಕೆ

|

ನವದೆಹಲಿ, ಜನವರಿ 15: ರಿಪಬ್ಲಿಕ್‌ ಟಿವಿಯ ಅರ್ನಬ್ ಗೋಸ್ವಾಮಿ ಮತ್ತು ಮಾಜಿ ಬಾರ್ಕ್ ಸಿಇಒ ಪಾರ್ಥೋ ದಾಸ್‌ಗುಪ್ತಾ ನಡುವಿನ ವಾಟ್ಸಾಪ್ ಚಾಟ್ ಸೋರಿಕೆಗೊಂಡಿದ್ದು, ಟ್ವಿಟರ್‌ನಲ್ಲಿ ಹರಿದಾಡಿವೆ.

ಗೋಸ್ವಾಮಿ ಮತ್ತು ಬಾರ್ಕ್ ಸಿಇಒ ನಡುವಿನ ವಾಟ್ಸಾಪ್ ಚಾಟ್‌ ಸ್ಕ್ರೀನ್‌ಶಾಟ್‌ಗಳು ಟ್ವಿಟರ್‌ನಲ್ಲಿ ಸ್ಪೋಟಗೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

''ವಾಟ್ಸಾಪ್ ಸುರಕ್ಷಿತ, ನಿಮ್ಮ ಖಾಸಗಿ ಚಾಟ್ ಬಹಿರಂಗವಾಗಲ್ಲ''ವಾಟ್ಸಾಪ್ ಸುರಕ್ಷಿತ, ನಿಮ್ಮ ಖಾಸಗಿ ಚಾಟ್ ಬಹಿರಂಗವಾಗಲ್ಲ"

''ಇವುಗಳು ಬಾರ್ಕ್ ಸಿಇಒ ಮತ್ತು ಅರ್ನಬ್ ಗೋಸ್ವಾಮಿ ನಡುವಿನ ಸೋರಿಕೆಯಾದ ವಾಟ್ಸಾಪ್ ಚಾಟ್‌ಗಳ ಕೆಲವು ಸ್ನ್ಯಾಪ್‌ಶಾಟ್‌ಗಳಾಗಿವೆ. ಇವು ಅವರನ್ನ ಪವರ್ ಬ್ರೋಕರ್ ಆಗಿ ಗುರುತಿಸಿದ್ದು, ಅನೇಕ ಪಿತೂರಿಗಳನ್ನು ತೋರಿಸುತ್ತದೆ ಮತ್ತು ದೇಶದ ಯಾವುದೇ ಕಾನೂನು ನಿಯಮಗಳ ಪ್ರಕಾರ ಅವರು ದೀರ್ಘಕಾಲ ಜೈಲಿನಲ್ಲಿರುತ್ತಾರೆ '' ಎಂದು ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್ ಭೂಷಣ್ ಹೇಳಿದ್ದಾರೆ.

ಇನ್ನು ಅರ್ನಬ್ ಗೋಸ್ವಾಮಿ ಮತ್ತು ಬಾರ್ಕ್ ಸಿಇಒ ನಡುವಿನ ವಾಟ್ಸಾಪ್ ಚಾಟ್‌ ಸಂಭಾಷಣೆಯು ಅಧಿಕೃತವಾಗಿದ್ದರೆ, ಮುಂದಿನ ದಿನಗಳಲ್ಲಿ ಕಠಿಣ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು.

ಟಿಆರ್‌ಪಿ ಹಗರಣ ಪ್ರಕರಣದ ವಿಚಾರಣೆಯನ್ನು ಮುಂಬೈ ಹೈಕೋರ್ಟ್ ಜನವರಿ 29 ರವರೆಗೆ ಮುಂದೂಡಿದೆ. ಮುಂದಿನ ವಿಚಾರಣೆಯವರೆಗೆ ಗೋಸ್ವಾಮಿಯನ್ನು ಬಂಧಿಸುವುದಿಲ್ಲ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

English summary
Twitter has exploded with screenshots of alleged leaked WhatsApp chat between Arnab Goswami and former BARC CEO Partho Dasgupta.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X