50,000 ಚದರಡಿಯ ಬಂಗಲೆಯಲ್ಲಿ ಅಂಬಾನಿ ಮಗಳ ಸಂಸಾರ ಆರಂಭ

ಮುಂಬೈ, ಡಿಸೆಂಬರ್ 21: ಭಾರತದಲ್ಲೇ ಅತ್ಯಂತ ಶ್ರೀಮಂತರಾದ ಮುಕೇಶ್ ಅಂಬಾನಿ ಮಗಳು ಇಶಾ ಹಾಗೂ ಆನಂದ್ ಪಿರಮಲ್ ಮದುವೆ ಅಂತೂ ಮುಗಿದಿದೆ. ಇದೀಗ ನವ ವಿವಾಹಿತರು ಹೊಸ ಬಂಗಲೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಈಗ ಬಂಗಲೆ ಬಗ್ಗೆಯೇ ಮಾತುಕತೆ, ಚರ್ಚೆ ಎಲ್ಲ ಆರಂಭವಾಗಿದೆ. ಅಂಥದ್ದೇನಿದೆ ಈ ಬಂಗಲೆಯ ವಿಶೇಷ ಅಂತೀರಾ?

50,000 ಚದರಡಿಯ ಈ ಅದ್ಭುತ ಬಂಗಲೆ ಇರುವುದು ದಕ್ಷಿಣ ಮುಂಬೈನ ವರ್ಲಿಯಲ್ಲಿ. ಈ ಬಂಗಲೆಯಲ್ಲಿ ನಿಂತರೆ ಕಣ್ಣೆದುರೇ ಅರಬ್ಬಿ ಸಮುದ್ರ. ಇತ್ತ ಮುಕೇಶ್ ರ ಬಂಗಲೆ ಏನು ಅಂತೀರಾ? ಅಂಟಿಲಿಯಾ ಹೆಸರಿನ ಆ ಬಂಗಲೆ 27 ಅಂತಸ್ತಿದ್ದು, 4 ಲಕ್ಷ ಚದರಡಿ ಲೆಕ್ಕಕ್ಕೆ ಬರುತ್ತದೆ. ಇದರ ಮೌಲ್ಯ 43 ಬಿಲಿಯನ್ ಅಮೆರಿಕನ್ ಡಾಲರ್.

ಅಂಥ ಬಂಗಲೆಯಲ್ಲಿ ವಾಸವಿದ್ದವರು ಇಶಾ. ಅವರ ಮದುವೆ ಆನಂದ್ ಪಿರಮಲ್ ಜತೆ ಡಿಸೆಂಬರ್ ಹನ್ನೆರಡನೇ ತಾರೀಕು ಆಗಿತ್ತು. ಮದುವೆ ನಂತರ ಇಶಾ ಹಾಗೂ ಆನಂದ್ ಐವತ್ತು ಸಾವಿರ ಚದರಡಿಯ ಬಂಗಲೆಗೆ ಪ್ರವೇಶ ಮಾಡಲಿದ್ದಾರೆ. ಆ ಬಂಗಲೆಯನ್ನು ಆನಂದ್ ರ ಪೋಷಕರು ಕೊಡುಗೆಯಾಗಿ ನೀಡಿದ್ದಾರೆ.

The 50 thousand square foot mansion Isha Ambanis moving into

ಪಿರಮಲ್ಸ್ ಸಮೂಹವು ರಿಯಲ್ ಎಸ್ಟೇಟ್, ಫಾರ್ಮಾ ವ್ಯವಹಾರಗಳಲ್ಲಿ ಆಸಕ್ತಿ ಹೊಂದಿದೆ. ಈ ಬಂಗಲೆಯನ್ನು 2012ರಲ್ಲಿ $ 6.2 ಕೋಟಿ ಗೆ ಹಿಂದೂಸ್ತಾನ್ ಯುನಿಲಿವರ್ ಕಂಪನಿಯಿಂದ ಖರೀದಿ ಮಾಡಲಾಗಿತ್ತು. ಮದುವೆಗೆ ಮೂರು ತಿಂಗಳ ಮುಂಚಿನಿಂದಲೇ ಬಂಗಲೆಯನ್ನು ಸಿಂಗರಿಸಲು ಆರಂಭಿಸಲಾಗಿತ್ತು.

ಮಾಧ್ಯಮಗಳ ವರದಿ ಪ್ರಕಾರ, ಈ ಬಂಗಲೆಯಲ್ಲಿ ಮೂರು ಬೇಸ್ ಮೆಂಟ್, ಹಲವಾರು ಹಜಾರ ಇತರ ಸೌಲಭ್ಯಗಳಿವೆ. ಇಶಾರ ಅವಳಿ ಸೋದರ ಆಕಾಶ್ ಅಂಬಾನಿಯ ವಿವಾಹ ಮುಂದಿನ ವರ್ಷ ಆರಂಭದಲ್ಲೇ ಶ್ಲೋಕಾ ಜತೆಗೆ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+