ಆಂಬುಲೆನ್ಸ್ ವಿಳಂಬವಾಗಿ ಮರಾಠಿ ನಟಿ ಮತ್ತು ಆಕೆಯ ಶಿಶು ಸಾವು

ಮುಂಬೈ, ಅಕ್ಟೋಬರ್ 22: ಅನಾರೋಗ್ಯದಿಂದ ಬಳಲುತ್ತಿದ್ದ ಪೂಜಾ ಝುಂಜರ್ ಎಂಬ ಮರಾಠಿ ನಟಿ ಮತ್ತು ಆಕೆಯ ಶಿಶು ಅಂಬುಲೆನ್ಸ್ ಸಿಗದ ಕಾರಣ ಚಿಕಿತ್ಸಸೆ ದೊರೆಯದೆ ಮೃತರಾದ ದಾರುಣ ಘಟನೆ ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ ನಡೆದಿದೆ.

ತಕ್ಷಣವೇ ಅಂಬುಲೆನ್ಸ್ ದೊರಕಿದ್ದರೆ ಪೂಜಾ ಬದುಕುತ್ತಿದ್ದರು ಎಂದು ಅವರ ಕುಟುಂಬಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂಬೈಯಿಂದ ಸುಮಾರು 600 ಕಿಮೀ ದೂರದಲ್ಲಿರುವ ಹಿಂಗೋಲಿ ಜಿಲ್ಲೆಯಲ್ಲಿ ಭಾನುವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

Recommended Video

      Karnataka Elections 2018 : ಮರಾಠಿ ಭಾಷಿಕರನ್ನ ಪ್ರಚೋದಿಸಲು ಬರ್ತಿದ್ದಾರೆ ಶರದ್ ಪವಾರ್ | Oneindia Kannada
      Pooja Nunjar, Marathi Actress And Baby Die Due To Unavailability Of An Ambulance

      ಗರ್ಭಿಣಿಯಾಗಿದ್ದ ಪೂಜಾ ಹಿಂಗೋಲಿಯ ಆಸ್ಪತ್ರೆಯೊಂದರಲ್ಲಿ ಮಗುವಿಗೆ ಜನ್ಮನೀಡಿದ್ದರು. ಆದರೆ ಅವರ ಸ್ತಿತಿ ಗಂಭಿರವಾಗಿದ್ದು, ಅವರನ್ನು ಬೇರೆ ಆಸ್ಪತ್ರೆಗೆ ಸೇರಿಸುವಂತೆ ವೈದ್ಯರು ಸಲಹೆ ನೀಡಿದ್ದರು. ಅವರನ್ನು ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯಲು ಸರ್ಕಾರಿ ಆಂಬುಲೆನ್ಸ್ ಸಿಗದ ಕಾರಣ ಕುಟುಂಬಸ್ತರು ಖಾಸಗಿ ಅಂಬುಲೆನ್ಸ್ಸ ಒಂದನ್ನು ಪಡೆದು, ಆಕೆಯನ್ನು ಕರೆದೊಯ್ಯಲು ಮುಂದಾಗಿದ್ದರು. ಆದರೆ ಆಗಲೇ ವಿಳಂಬವಾಗಿದ್ದರಿಂದ ಪೂಜಾ ಮತ್ತು ಆಗಷ್ಟೆ ಜನಿಸಿದ್ದ ಅವರ ಮಗು ದಾರಿ ಮಧ್ಯೆಯಲ್ಲಿಯೇ ಅಸುನೀಗಿದರು.

      ಪೂಜಾ ಅವರು ಎರಡು ಮರಾಠಿ ಚಿತ್ರದಲ್ಲಿ ನಟಿಸಿದ್ದರು. ಗರ್ಭಿಣಿಯಾಗಿದ್ದ ಕಾರಣ ಚಿತ್ರರಂಗದಿಂದ ದೂರವುಳಿದಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+