ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ: 2 ಸಾವಿರ ವರ್ಷಗಳಷ್ಟು ಹಳೆಯ ರಹಸ್ಯ ಗುಹೆಗಳು ಪತ್ತೆ

|
Google Oneindia Kannada News

ಮುಂಬೈ, ಮಾರ್ಚ್ 16: ಮಹಾರಾಷ್ಟ್ರದಲ್ಲಿ 2 ಸಾವಿರ ವರ್ಷಗಳಷ್ಟು ಪುರಾತನ ರಹಸ್ಯ ಗುಹೆಗಳು ಪತ್ತೆಯಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಮಹಾರಾಷ್ಟ್ರದ ಜಲಗಾಂವ್‌ನಲ್ಲಿ ಗುಹೆಗಳು ಪತ್ತೆಯಾಗಿವೆ, ಹೊರಭಾಗದಿಂದ ಗಮನಿಸಿದರೆ ಇಲ್ಲಿ ಗುಹೆಗಳು ಇರುವುದು ತಿಳಿಯುವುದಿಲ್ಲ. ಈ ಗುಹೆಗಳ ಬಗ್ಗೆ ಚೌಗಾಂವ್ ಗ್ರಾಮಸ್ಥರನ್ನು ವಿಚಾರಿಸಿದಾಗ ಆ ಗುಹೆಗಳನ್ನು ನೋಡಿರಲಿಲ್ಲ ಎನ್ನುವ ಉತ್ತರ ಬಂದಿದೆ.

ಹಿಮಾಲಯದ ಗುಹೆಯಲ್ಲಿ ಧ್ಯಾನ ಮಾಡಿದರೆ ನೈಸರ್ಗಿಕ ವಿಪತ್ತಿನಿಂದ ರಕ್ಷಿಸಲು ಆಗೊಲ್ಲ: ಶಿವಸೇನಾಹಿಮಾಲಯದ ಗುಹೆಯಲ್ಲಿ ಧ್ಯಾನ ಮಾಡಿದರೆ ನೈಸರ್ಗಿಕ ವಿಪತ್ತಿನಿಂದ ರಕ್ಷಿಸಲು ಆಗೊಲ್ಲ: ಶಿವಸೇನಾ

ದಕ್ಷಿಣ ಭಾರತವನ್ನು ಬಹುಕಾಲ ಆಳಿದ ಶಾತವಾಹನ ರಾಜರ ಕಾಲದಲ್ಲಿ ಈ ರಹಸ್ಯ ಗುಹೆಗಳು ನಿರ್ಮಾಣವಾಗಿದ್ದಿರಬಹುದು ಎಂದು ಪುರಾತತ್ವ ಶಾಸ್ತ್ರಜ್ಞ ಭುಜಂಗ್ ರಾಮ್‌ರಾವ್ ತಿಳಿಸಿದ್ದಾರೆ.

 Over 2,000 Year Old Secret Caves Discovered In Maharashtra

ಈವರೆಗೆ ಎಲ್ಲೂ ಈ ಗುಹೆಗಳಿರುವ ದಾಖಲೆಗಳು ಲಭ್ಯವಾಗಿಲ್ಲ, ಗುಹೆಗಳ ಒಳ ಪ್ರವೇಶ ಮಾರ್ಗದಲ್ಲಿಯೇ ನೀರಿನ ಟ್ಯಾಂಕುಗಳು, ಕಲ್ಲಿನ ಕಂಬಗಳು ಕಾಣಿಸುತ್ತಿವೆ. ಈ ಗುಹೆಯಲ್ಲಿ ದೇವರುಗಳ ಚಿತ್ರವಿಲ್ಲ, ಕೆತ್ತನೆಯ ಚಿಹ್ನೆಯೂ ಕೂಡಾ ಇಲ್ಲ, ವಿಗ್ರಹಗಳೂ ಕೂಡ ಕಂಡುಬಂದಿಲ್ಲ.

ಭಿರಮ್ ಘಾಟ್ ರಸ್ತೆಯ ಪ್ರಾಚೀನ ಮಾರ್ಗದಲ್ಲಿ ಈ ಗುಹೆಗಳನ್ನು ಪತ್ತೆ ಹಚ್ಚಲಾಗಿದೆ. ಗುಹೆಗೆ ತಲುಪುವ ಮಾರ್ಗವೂ ಕೂಡ ಸರಿಯಾಗಿಲ್ಲ. ಚೌಗಾಂವ್‌ನಿಂದ 3 ಕಿ.ಮೀ ದೂರದವರೆಗೆ ಹಳೆಯ ಶಿವ ದೇವಾಲಯದ ತನಕ ವಾಹನದಲ್ಲಿ ತೆರಳಬಹುದು.

ಅಲ್ಲಿಂದ ಗುಹೆ ಇರುವ ಬೆಟ್ಟಕ್ಕೆ ಸುಮಾರು 2 ಕಿ.ಮೀಯಷ್ಟು ನಡೆಯಬೇಕು. ನಂತರ ಮೂರು ಕಿ.ಮೀ ನಡೆದಾದ ಶಾತವಾಹನ ಕಾಲದಲ್ಲಿ ಕಟ್ಟಿದ ಕೋಟೆಯ ಬಾಗಿಲು ಕಾಣಿಸುತ್ತದೆ.

English summary
Highly secretive and hidden caves dating back to well over 2,000 years ago have been discovered near the Chaugav village in Chopda tehsil of Jalgaon district of Maharashtra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X