ಮುಂಬೈ: 3 ಗಂಟೆಗಳಲ್ಲಿ 36 ಮಿ.ಮೀ ಮಳೆ, ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಮುಂಬೈ, ಜುಲೈ 16: ಮುಂಗಾರು ಚುರುಕುಗೊಂಡಿದ್ದು ಮುಂಬೈನಲ್ಲಿ ಭಾರಿ ಮಳೆಯಾಗುತ್ತಿದೆ.

ಗುರುವಾರದಿಂದಲೇ ಮಳೆ ಶುರುವಾಗಿದೆ, ಬೆಳಗ್ಗೆಯಿಂದ ಬಿಡದೇ ಮಳೆ ಸುರಿಯುತ್ತಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಇನ್ನು ಸಾಕಷ್ಟು ರೈಲುಗಳು ತಡವಾಗಿ ಹೊರಟಿದೆ, ಇನ್ನೂ ಕೆಲವು ರೈಲುಗಳ ಸಂಚಾರ ಸ್ಥಗಿತಗೊಂಡಿದೆ, ಬಸ್‌ಗಳು ಮಾರ್ಗವನ್ನೇ ಬದಲಿಸಿದ ಘಟನೆ ವರದಿಯಾಗಿದೆ.

ಶುಕ್ರವಾರ ಬೆಳಗ್ಗೆ 7 ರಿಂದ ಮೂರು ಗಂಟೆಗಳ ಕಾಲ 36 ಮಿ.ಮೀನಷ್ಟು ಮಳೆ ಸುರಿದಿದೆ. ಪೂರ್ವ ಭಾಗದಲ್ಲಿ 75 ಮಿ.ಮೀ ಮಳೆಯಾಗಿದೆ. ಪಶ್ಚಿಮ ಭಾಗದಲ್ಲಿ 73 ಮಿ.ಮೀನಷ್ಟು ಮಳೆಯಾಗಿದೆ. ಇಂದು ಬೆಳಗ್ಗೆಯಿಂದ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಹಲವಯ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

 ರೈಲ್ವೆ ಅಧಿಕಾರಿ ಹೇಳಿದ್ದೇನು?

ರೈಲ್ವೆ ಅಧಿಕಾರಿ ಹೇಳಿದ್ದೇನು?

ಪೂರ್ವ ಮುಂಬೈನ ಕುರ್ಲಾ ನಿಲ್ದಾಣದ ಬಳಿ ಹಳಿಗಳಲ್ಲಿ ನೀರು ಹರಿಯುವುದರಿಂದ ಮುಖ್ಯ ಮಾರ್ಗ ಹಾಗೂ ಬಂದರು ಮಾರ್ಗದ ಉಪ ನಗರ ಸೇವೆಗಳಿಗೆ ತೊಂದರೆಯಾಗಿದೆ ಎಂದು ಕೇಂದ್ರ ರೈಲ್ವೆ ಮುಖ್ಯ ಜನಸಂಪರ್ಕ ಅಧಿಕಾರಿ ಶಿವಾಜಿ ಸುತಾರ್ ಹೇಳಿದ್ದಾರೆ. ರೈಲುಗಳು ಎರಡು ಮಾರ್ಗಗಳಲ್ಲಿ ನಿಗದಿತ ಸಮಯಕ್ಕಿಂತ 20 ರಿಂದ 25 ನಿಮಿಷಗಳು ತಡವಾಗಿ ಓಡಾಡುತ್ತಿವೆ.

 ಮುಂಬೈನ್ ಐದು ಜಿಲ್ಲೆಗಳಿಗೆ ರೆಡ್ ಅಲರ್ಟ್

ಮುಂಬೈನ್ ಐದು ಜಿಲ್ಲೆಗಳಿಗೆ ರೆಡ್ ಅಲರ್ಟ್

ಮುಂಬೈನಲ್ಲಿ ಇಂದು ಭಾರಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಪುಣೆ, ರಾಯಗಢ, ರತ್ನಗಿರಿ,ಕೊಲ್ಹಾಪುರ, ಸತಾರಾ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಮುಂಬೈ ಹಾಗೂ ಥಾಣೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

 ಮುಂಬೈನ ಯಾವ್ಯಾವ ಭಾಗಗಳಲ್ಲಿ ಎಷ್ಟು ಮಳೆಯಾಗಿದೆ?

ಮುಂಬೈನ ಯಾವ್ಯಾವ ಭಾಗಗಳಲ್ಲಿ ಎಷ್ಟು ಮಳೆಯಾಗಿದೆ?

ಕಳೆದ 24 ಗಂಟೆಗಳಲ್ಲಿ ಮುಂಬೈ ನಗರದಲ್ಲಿ 64.45 ಮಿ.ಮೀ ಮಳೆಯಾಗಿದೆ. ಪಶ್ಚಿಮದಲ್ಲಿ 127.16 ಮಿ.ಮೀ, ಪೂರ್ವದಲ್ಲಿ 120.67 ಮಿ.ಮೀ ಮಳೆಯಾಗಿದೆ.

 ಜುಲೈ 20ರವರೆಗೂ ಭಾರಿ ಮಳೆ

ಜುಲೈ 20ರವರೆಗೂ ಭಾರಿ ಮಳೆ

ಮುಂಬೈನಲ್ಲಿ ಜುಲೈ 20ರವರೆಗೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ, ಈ ಬಾರಿ ಮುಂಬೈಗೆ ತಡವಾಗಿ ಮುಂಗಾರು ಆರಂಭಿಸಿದೆ. ದೆಹಲಿಯಲ್ಲೂ ಕೂಡ ಮಳೆ ಶುರುವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+