ಎಂಇಪಿ ಮುಖ್ಯಸ್ಥೆ ನೌಹೀರಾ ಶೇಖ್ ವಂಚನೆ ಪ್ರಕರಣದಲ್ಲಿ ಅರೆಸ್ಟ್
ಮುಂಬೈ, ಅಕ್ಟೋಬರ್ 27: ಕೋಟ್ಯಂತರ ರೂಪಾಯಿ ವಂಚನೆ ಮಾಡಿದ ಆರೋಪದ ಮೇಲೆ ಎಂಇಪಿ ಪಕ್ಷದ ನೌಹೀರಾ ಶೇಖರ್ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಹೂಡಿಕೆದಾರರಿಗೆ 300 ಕೋಟಿ ರೂ ವಂಚನೆ ಎಸಗಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ, ಹೀರಾ ಗ್ರೂಪ್ ನ ಕಂಪನಿಗಳು ನಾನಾ ಹೂಡಿಕೆ ಯೋಜನೆಗಳನ್ನು ಹೊಂದಿದ್ವು. ಹಣಕಾಸು ವ್ಯವಹಾರದಲ್ಲಿ ಇಸ್ಲಾಮಿಕ್ ತತ್ವಗಳನ್ನು ಅನುಸರಿಸುವುದಾಗಿ ಕಂಪನಿ ಹೇಳಿಕೊಂಡಿತ್ತು. ಅನೇಕ ಹೂಡಿಕೆದಾರರು ದೂರುಗಳನ್ನು ನೀಡಿದ ಬಳಿಕ ಮೊದಲ ಸಲ ಶೇಖ್ ಅವರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದರು.
ಜಾಮೀನಿನ ಮೇಎ ಬಿಡುಗಡೆಯಾಗಿದ್ದ ಅವರನ್ನು ಈಗ ಮತ್ತೆ ಮುಂಬೈ ಪೊಲೀಸರು ಬಂಧಿಸಿದ್ದಾರೆ. ನವೆಂಬರ್ 3ರವರೆಗೆ ಅವರನ್ನು ಪೊಲೀಸ್ ವಶಕ್ಕೆ ನ್ಯಾಯಾಲಯ ಒಪ್ಪಿಸಿದೆ. ಆಲ್ ಇಂಡಿಯಾ ಮಹಿಳಾ ಎಂಪವರ್‌ಮೆಂಟ್ ಪಕ್ಷ ಹೆಸರಲ್ಲಿ ಅವರು ರಾಜಕೀಯದಲ್ಲೂ ಸದ್ದು ಮಾಡಿದ್ದರು.

ಅಕ್ಟೋಬರ್ 23ರಂದು ಶೇಖ್ ಮತ್ತು ಹೀರಾ ಗೋಲ್ಡ್ ಎಕ್ಸಿಂ ಲಿಮಿಟೆಡ್, ಹೀರಾ ರೀಟೇಲ್ ಪ್ರೈವೇಟ್ ಲಿಮಿಟೆಡ್, ಹೀರಾ ಟೆಕ್ಸ್‌ಟೈಲ್ಸ್, ಹೀರಾ ಫುಡೆಕ್ಸ್‌ನ ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿತ್ತು. ಶೇಖರ್ ಮತ್ತು ಇತರರು ಮಾಸಿಕ ಶೇ.2.ರಿಂದ 3.2ರ ರಿಟರ್ನ್ಸ್ ಅನ್ನು ಹೂಡಿಕೆಗಳಿಗೆ ನೀಡುವುದಾಗಿ ಹೂಡಿಕೆದಾರರಿಗೆ ಭರವಸೆ ನೀಡಿದ್ದರು.












Click it and Unblock the Notifications