ಮಲಾಡ್ ಮಹಿಳೆ ಹಾಲುಣಿಸುವಾಗ ಕಾರು ಟೋಯಿಂಗ್, ಏನಿದರ ಅಸಲಿಯತ್ತು?

Posted By: ವಿಕಾಸ್ ನಂಜಪ್ಪ
Subscribe to Oneindia Kannada

ಮುಂಬೈ, ನವೆಂಬರ್ 13: ಇಲ್ಲಿನ ಮಲಾಡ್ ಪ್ರದೇಶದ ಮಹಿಳೆಯೊಬ್ಬರು ಮಗು ಜತೆ ಇದ್ದಾಗ ಕಾರನ್ನು ಟೋಯಿಂಗ್ ಮಾಡಿ ಮುಂಬೈ ಟ್ರಾಫಿಕ್ ಪೊಲೀಸರು ಕರೆದೊಯ್ದಿದ್ದು ತಿಳಿದಿರಬಹುದು. ಈ ತಪ್ಪಿಗೆ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿದ ಸುದ್ದಿಯೂ ಬಂದಿದೆ. ಆದರೆ,ಹಾಲುಣಿಸುತ್ತಿದ್ದ ಮಹಿಳೆ ಕಾರನ್ನು ಟೋಯಿಂಗ್ ಮಾಡಿದ ಘಟನೆಗೆ ತಿರುವು ಸಿಕ್ಕಿದೆ.

ಮುಂಬೈನ ಮಲಾಡ್ ಪ್ರದೇಶದಲ್ಲಿ ಜ್ಯೋತಿ ಮಾಲ್ ಹೆಸರಿನ ಮಹಿಳೆ ನೋ ಪಾರ್ಕಿಂಗ್ ಸ್ಥಳದಲ್ಲಿ ಕಾರನ್ನು ನಿಲ್ಲಿಸಿದ್ದರು. ಪೊಲೀಸರು ಎಚ್ಚರಿಕೆ ನೀಡುವ ಸಂದರ್ಭದಲ್ಲಿ ಮಹಿಳೆಯೊಂದಿಗೆ ಮಗು ಇರಲಿಲ್ಲ.

Mumbai car towing incident: Were the cops really guilty?

ಕಾರು ಟೋಯಿಂಗ್ ಮಾಡಿ ಕರೆದೊಯ್ಯುವಾಗ ಮಗುವನ್ನು ಪಡೆದು ಕಾರು ಸೇರಿದ ಮಹಿಳೆ ಕೈಗೆ ಮಗುವನ್ನು ಕೊಡಲಾಗಿದೆ. ಇದರಿಂದ ಎಲ್ಲರ ಅನುಕಂಪದ ದೃಷ್ಟಿ ಬಿದ್ದಿದ್ದು, ಪೊಲೀಸರು ಅಮಾನವೀಯ ಕೃತ್ಯ ಎಸಗಿದ್ದಾರೆ ಎಂದು ಬಿಂಬಿಸಲಾಗಿದೆ ಎಂಬ ವಿಷಯ ಬಹಿರಂಗವಾಗಿದೆ. ಹೊಸ ವಿಡಿಯೊವೊಂದು ಬಂದಿದ್ದು ಇದರಲ್ಲಿ ಕಾರಿನಲ್ಲಿ ಮಹಿಳೆ ಒಬ್ಬರೇ ಇರುವುದು ಕಂಡು ಬಂದಿದೆ.

ಮಗುವಿಗೆ ಹಾಲುಣಿಸುವಾಗ ಸಂಚಾರ ಪೊಲೀಸರು ಅಮಾನವೀಯವಾಗಿ ವರ್ತಿಸಿದ್ದಾರೆ. ಹಾಲುಣಿಸುತ್ತಿದ್ದ ಮಹಿಳೆ ಸಮೇತ ಕಾರು ಎಳೆದುಕೊಂಡು ಹೋಗಿದ್ದಾರೆ ಎಂದು ಎಲ್ಲೆಡೆ ಸುದ್ದಿ ಪ್ರಸಾರವಾಗಿತ್ತು. ಇದಾದ ಬಳಿಕ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರನ್ನು ಅಮಾನತು ಮಾಡಲಾಗಿತ್ತು.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರು ಘಟನೆಯನ್ನು ಖಂಡಿಸಿದ್ದರು. ಪೊಲೀಸರು ಎರಡೂ ವಿಡಿಯೋಗಳನ್ನು ಆಧರಿಸಿ ತನಿಖೆ ಕೈಗೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
There was a twist to the tale after a video of a car being towed away while a woman was breast-feeding her baby went viral. Another video capturing Saturday's incident at Malad (west) in Mumbai changed the entire narrative.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ