ಮೋದಿಗೆ ಕುಟುಂಬವಿಲ್ಲ, ಇದೆಲ್ಲ ಅರ್ಥ ಆಗೊಲ್ಲ: ಶರದ್ ಪವಾರ್ ವ್ಯಂಗ್ಯ

ಜಲ್ನಾ, ಏಪ್ರಿಲ್ 17: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೆಂಡತಿ ಇಲ್ಲ, ಮಕ್ಕಳೂ ಇಲ್ಲ. ಹೀಗಾಗಿ ಅವರಿಗೆ ಕುಟುಂಬದ ಮಹತ್ವ ಅರ್ಥವಾಗುವುದಿಲ್ಲ ಎನ್ನುವ ಮೂಲಕ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ತಮ್ಮ ಕುಟುಂಬದ ಸದಸ್ಯರ ಕುರಿತು ಮಾತನಾಡಿದ್ದ ಮೋದಿ ವಿರುದ್ಧ ಕಿಡಿಕಾರಿದ್ದಾರೆ.

ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಮಾತನಾಡಿದ ಅವರು, ಅವರ ಕುಟುಂಬದಲ್ಲಿ ಯಾರೂ ಇಲ್ಲ. ಕುಟುಂಬ ಹೇಗೆ ನಡೆಯುತ್ತದೆ, ಮಗ ಮತ್ತು ಹೆಂಡತಿಯನ್ನು ನೋಡಿಕೊಳ್ಳುವುದು ಹೇಗೆ ಎಂಬುದು ಅವರಿಗೆ ಹೇಗೆ ಗೊತ್ತಾಗುತ್ತದೆ. ಈ ಕಾರಣದಿಂದಲೇ ಅವರು ಬೇರೆಯವರ ಮನೆಯೊಳಗೆ ಇಣುಕುವುದನ್ನು ಮುಂದುವರಿಸಿದ್ದಾರೆ. ಬೇರೆಯವರ ಮನೆಯೊಳಗೆ ಇಣುಕುವುದು ಒಳ್ಳೆಯದಲ್ಲ ಮೋದಿಜಿ. ನಾನೂ ಸಾಕಷ್ಟು ಹೇಳಬಹುದು ಆದರೆ, ಕೆಳಮಟ್ಟಕ್ಕೆ ಇಳಿಯುವುದಿಲ್ಲ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮೋದಿ ಅವರು ಎಲ್ಲ ಸಮಯಕ್ಕೂ ತಮ್ಮ ಬಗ್ಗೆ ಮಾತನಾಡುತ್ತಾ ಪುಕ್ಕಟೆ ಪ್ರಚಾರ ನೀಡುತ್ತಿದ್ದಾರೆ ಎಂದಿದ್ದಾರೆ.

Lok Sabha elections 2019 NCP chief Sharad pawar narendra modi has no family

ಮೋದಿ ಅವರು ಪವಾರ್ ಬಗ್ಗೆ ಮಾತನಾಡುತ್ತಿದ್ದಾರೆ ಎಂದರೆ ಅವರಲ್ಲಿ ಏನೋ ಇದೆ ಎಂದು ಜನರು ಅಂದುಕೊಳ್ಳುತ್ತಿದ್ದಾರೆ. ಅವರು ಮಾತನಾಡುವಾಗಲೂ ಪವಾರ್‌ ಜಿ ಉತ್ತಮ ವ್ಯಕ್ತಿ, ಆದರೆ ಅವರ ಕುಟುಂಬದಲ್ಲಿ ಸಮಸ್ಯೆ ಇದೆ. ಅವರ ಕುಟುಂಬದ ಸದಸ್ಯರ ನಡುವೆ ಹೊಂದಾಣಿಕೆಯ ಕೊರತೆ ಇದೆ ಎಂದು ಮೋದಿ ಹೇಳುತ್ತಾರೆ ಎಂದು ಹೇಳಿದ್ದಾರೆ.

ಈ ಪ್ರಣಾಳಿಕೆಗಳಲ್ಲಿ ಯಾವುದು ನಿಮ್ಮ ಗಮನ ಸೆಳೆದಿದೆ?

'ನನ್ನ ಸೋದರಳಿಯಂದಿರು ಬೆಳೆದಿದ್ದಾರೆ ಮತ್ತು ತಮ್ಮ ಜವಾಬ್ದಾರಿಗಳನ್ನು ತೆಗೆದುಕೊಂಡಿದ್ದಾರೆ. ನನಗೆ ಇರುವುದು ಒಬ್ಬಳೇ ಮಗಳು. ಅವಳಿಗೆ ಮದುವೆಯಾಗಿದೆ. ನನ್ನ ಕುಟುಂಬದಲ್ಲಿ ಏನಾದರೂ ಅದನ್ನು ತೆಗೆದುಕೊಂಡು ಅವರು ಏನು ಮಾಡುತ್ತಾರೆ ಎಂದು ಕೇಳಲು ಬಯಸಿದ್ದೆ. ಆದರೆ, ಬಳಿಕ ನನಗೆ ನೆನಪಾಯಿತು, ನನಗೆ ಹೆಂಡತಿ, ಮಗಳು, ಅಳಿಯ, ಸೋದರ ಸಂಬಂಧಿಗಳು ನನ್ನನ್ನು ನೋಡಲು ಇದ್ದಾರೆ. ಆದರೆ ಅವರಿಗೆ ಯಾರೂ ಇಲ್ಲ ಎಂದು ಪವಾರ್ ಲೇವಡಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+