• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೂರು ಗಂಟೆ ಮುಂಚಿತವಾಗಿ ಏರ್ ಇಂಡಿಯಾ ಟಿಕೆಟ್ ಬುಕ್ ಮಾಡಿದರೂ ಸಸ್ತಾ

|

ಮುಂಬೈ, ಮೇ 10: ಏರ್ ಇಂಡಿಯಾ ಶನಿವಾರದಿಂದ ಹೊಸ ಕೊಡುಗೆ ನೀಡಲಿದೆ. ಅದರ ಪ್ರಕಾರ ದೇಶಿ ವಿಮಾನಗಳು ಹೊರಡುವ ಮೂರು ಗಂಟೆ ಮುಂಚೆ ಸಿಕ್ಕಾಪಟ್ಟೆ ರಿಯಾಯಿತಿ ದೊರೆಯಲಿದೆ. ತುರ್ತಾಗಿ ಪ್ರಯಾಣ ಕೈಗೊಳ್ಳುವವರಿಗೆ ಹಾಗೂ ಕೊನೆ ಕ್ಷಣದಲ್ಲಿ ಟಿಕೆಟ್ ಖರೀದಿಸಲು ಸಿಕ್ಕಾಪಟ್ಟೆ ಹಣ ತೆರುವವರಿಗೆ ಇದರಿಂದ ಅನುಕೂಲ ಆಗಲಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಈ ಬಗ್ಗೆ ಶುಕ್ರವಾರ ಹೇಳಿಕೆ ಬಿಡುಗಡೆ ಮಾಡಿರುವ ಏರ್ ಇಂಡಿಯಾ, ಇನ್ನೇನು ವಿಮಾನ ಹೊರಡಲು ಮೂರು ಗಂಟೆ ಬಾಕಿ ಇರುವಂತೆ ಉಳಿದ ಸೀಟುಗಳಿಗೆ ಭಾರೀ ರಿಯಾಯಿತಿ ನೀಡಲಾಗುವುದು. ಮಾರಾಟ ದರಕ್ಕಿಂತ ಕನಿಷ್ಠ ನಲವತ್ತು ಪರ್ಸೆಂಟ್ ರಿಯಾಯಿತಿಯಲ್ಲಿ ಟಿಕೆಟ್ ದೊರೆಯಲಿದೆ. ಈ ಕೊಡುಗೆ ಶನಿವಾರದಿಂದ ದೊರೆಯಲಿದೆ ಎಂದು ತಿಳಿಸಲಾಗಿದೆ.

ಏರ್ ಇಂಡಿಯಾ ನೇಮಕಾತಿ : 67 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇನ್ನು ವಕ್ತಾರರು ಮಾತನಾಡಿ, ಕೊನೆ ನಿಮಿಷದ ಪ್ರಯಾಣಿಕರು ಸಾಮಾನ್ಯವಾಗಿ ತುರ್ತು ಕಾರಣಗಳಿಗಾಗಿ ತೆರಳುತ್ತಾರೆ. ಅಂಥವರು ಹೆಚ್ಚಿನ ವಿಮಾನ ಯಾನ ಟಿಕೆಟ್ ದರ ತೆರಬೇಕಾಗುತ್ತದೆ. ಇನ್ನು ಮುಂದೆ ಆ ದರ ಕಡಿಮೆ ಆಗಲಿದೆ ಎಂದು ತಿಳಿಸಿದ್ದಾರೆ.

ಏರ್ ಇಂಡಿಯಾದ ಮುಖ್ಯ ಕಚೇರಿಯಲ್ಲಿ ಶುಕ್ರವಾರ ನಡೆದ ವಾಣಿಜ್ಯ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಏರ್ ಇಂಡಿಯಾದ ಬುಕ್ಕಿಂಗ್ ಕೌಂಟರ್ ಸೇರಿದಂತೆ ಎಲ್ಲ ಔಟ್ ಲೆಟ್ ಗಳಲ್ಲಿ ಟಿಕೆಟ್ ಖರೀದಿಸಬಹುದು. ಏರ್ ಇಂಡಿಯಾ ಮೊಬೈಲ್ ಅಪ್ಲಿಕೇಷನ್, ಏರ್ ಇಂಡಿಯಾ ಅಪ್ಲಿಕೇಷನ್ ಮತ್ತು ಪ್ರವಾಸಿ ಏಜೆಂಟರ ಮೂಲಕ ಖರೀದಿಸಬಹುದು.

English summary
Last Minute domestic flight tickets, 3 hour before departure will be cheaper from Air India. Statement regarding this released on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X