ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಲ್ಮಾನ್ ಅವರಿಗೆ ಮುಳುವಾದ ನಾಲ್ಕು ಪ್ರಶ್ನೆಗಳು

By Mahesh
|
Google Oneindia Kannada News

ಮುಂಬೈ, ಮೇ.8: 2002ರ ಹಿಟ್ ಅಂಡ್ ರನ್ ಕೇಸಿನಲ್ಲಿ ಅಪರಾಧಿ ಎನಿಸಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಜೈಲಿನ ಬಾಗಿಲಿಗೆ ತಂದ ಅಂಶಗಳು ಯಾವುದು? ಸೆಷನ್ಸ್ ನ್ಯಾಯಾಲಯ ನೀಡಿದ 240 ಪುಟಗಳ ತೀರ್ಪಿನಲ್ಲಿ ಏನಿದೆ? ಸಲ್ಮಾನ್ ಗೆ ಮುಳುವಾದ ನಾಲ್ಕು ಪ್ರಶ್ನೆಗಳೇನು? ಯಾರ ಸಾಕ್ಷಿ ಸಲ್ಮಾನ್ ಗೆ 13 ವರ್ಷಗಳ ನಂತರ ಜೈಲುವಾಸದ ಭೀತಿ ಹೆಚ್ಚಿಸಿದೆ? ಎಲ್ಲಕ್ಕೂ ಉತ್ತರ ಮುಂದಿದೆ.

ಸಲ್ಮಾನ್ ಖಾನ್ ಗೆ ತ್ವರಿತಗತಿಯಲ್ಲಿ ಮಧ್ಯಂತರ ಜಾಮೀನು ಸಿಕ್ಕ ವಿಷಯ ಈಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಸಲ್ಮಾನ್ ಗೆ ನೀಡಿರುವ ಮಧ್ಯಂತರ ಜಾಮೀನು ಅವಧಿ ಮುಗಿದಿದ್ದು, ಹೈಕೋರ್ಟಿನಲ್ಲಿ ಪೂರ್ಣ ಪ್ರಮಾಣದ ಜಾಮೀನು ನೀಡುವಂತೆ ಹಾಕಿರುವ ಅರ್ಜಿ ವಿಚಾರಣೆ ನಡೆದಿದೆ. ಜಾಮೀನು ಸಿಕ್ಕರೂ ಖುಲಾಸೆಯಂತೂ ಸಾಧ್ಯವೇ ಇಲ್ಲ. [ಜಯಲಲಿತಾ ನಂತರ ಸಲ್ಲೂಗೆ 'ದೇವರಾದ' ಸಾಳ್ವೆ]

ಸಲ್ಮಾನ್ ಪರ ವಕೀಲ ಅಮಿತ್ ದೇಸಾಯಿ ಹಾಗೂ ಪಬ್ಲಿಕ್ ಪ್ರಾಸಿಕ್ಯೂಟರ್ ಸಂದೀಪ್ ಶಿಂಧೆ ಅವರ ವಾದ ಪ್ರತಿವಾದವನ್ನು ಆಲಿಸಿ ಬಾಂಬೆ ಹೈಕೊರ್ಟ್ ಜಡ್ಜ್ ಅಭಯ್ ತಿಪ್ಸೆ ತೀರ್ಪು ನೀಡಲಿದ್ದಾರೆ. [ಹಿಟ್ ಅಂಡ್ ರನ್ ಕೇಸ್ ಟೈಮ್ ಲೈನ್]

ಅದರೆ, ಇದಕ್ಕೂ ಮುನ್ನ ಸಲ್ಮಾನ್ ರನ್ನು ದೋಷಿಯೆಂದು ಸಾಬೀತುಪಡಿಸಿದ ಅಂಶಗಳ ಬಗ್ಗೆ ಇಲ್ಲಿ ಗಮನಿಸಿದರೆ, ಸುಳ್ಳು ಹಾಗೂ ಬಾಲಿಶ ಡಿಫೆನ್ಸ್ ವಾದ ಕಣ್ಮುಂದೆ ಗೋಚರಿಸುತ್ತದೆ. ನ್ಯಾಯಾಧೀಶ ಡಿ.ಡಬ್ಲ್ಯು. ದೇಶಪಾಂಡೆ ಪರಿಗಣಿಸಿದ ಪ್ರಮುಖ ಅಂಶಗಳು ಮುಂದಿವೆ...[ಜೈಲಿಗೆ ಕಳಿಸಿದ ಹೀರೋ ಈ ಬಾಡಿಗಾರ್ಡ್]

ರವೀಂದ್ರ ಪಾಟೀಲ್ ಹೇಳಿಕೆ ಬಗ್ಗೆ ಸಲ್ಲೂ

ರವೀಂದ್ರ ಪಾಟೀಲ್ ಹೇಳಿಕೆ ಬಗ್ಗೆ ಸಲ್ಲೂ

ರವೀಂದ್ರ ಪಾಟೀಲ್ ಹೇಳಿಕೆ ಬಗ್ಗೆ ಸಲ್ಮಾನ್ ಖಾನ್ ನಿರುತ್ತರರಾದರು. ಕಾರು ಚಲಾಯಿಸುತ್ತಿರಲಿಲ್ಲ ಎಂದಿದ್ದ ಸಲ್ಮಾನ್ ಗೆ ತಮ್ಮ ಹೇಳಿಕೆ ಸಾಬೀತು ಪಡಿಸಲಾಗಲಿಲ್ಲ. ಸಲ್ಮಾನ್ ಅವರ ಬಾಡಿಗಾರ್ಡ್ ಆಗಿದ್ದ ರವಿಂದ್ರ ಪಾಟೀಲ್ ನೀಡಿದ ಹೇಳಿಕೆ ಪ್ರಕಾರ ಘಟನೆ ಸಂದರ್ಭದಲ್ಲಿ ಸಲ್ಮಾನ್ ಅವರು ಚಾಲಕರಾಗಿದ್ದರು, ಕಮಲ್ ಖಾನ್ ಹಿಂಬದಿ ಕುಳಿತ್ತಿದ್ದರು ಎಂದಿದ್ದರು. ಕಮಲ್ ಸಾಕ್ಷಿ ಹೇಳಿಲ್ಲ. ಪಾಟೀಲ್ ಹೇಳಿಕೆಗೆ ಪುಷ್ಟಿ ನೀಡಲು ಪ್ರತ್ಯಕ್ಷ ದರ್ಶಿಗಳು, ಸಂತ್ರಸ್ತರು ನೀಡಿದ ಹೇಳಿಕೆ ಸಲ್ಮಾನ್ ಗೆ ಶಿಕ್ಷೆಗೆ ತಳ್ಳಿತು.

ವಾಹನ ಓಡಿಸುವಾಗ ಕುಡಿದಿರಲಿಲ್ಲ

ವಾಹನ ಓಡಿಸುವಾಗ ಕುಡಿದಿರಲಿಲ್ಲ

ಮುಳುವಾದ ಆಲ್ಕೋಹಾಲ್ ಬರ್ಕಾಡಿ ರಮ್. ಘಟನೆ ನಡೆದ ದಿನ ಸಲ್ಮಾನ್ ಖಾನ್ ಅವರ ದೇಹದ ರಕ್ತದಲ್ಲಿ ಮದ್ಯದ ಅಂಶ ನಿಗದಿತ ಪ್ರಮಾಣಕ್ಕಿಂತ ಅಧಿಕವಾಗಿತ್ತು. ತಜ್ಞರ ಹೇಳಿಕೆ ಪ್ರಕಾರ ರಕ್ತದಲ್ಲಿ ಆಲ್ಕೋಹಾಲ್ ಅಂಶ 30 ಮಿಲಿ ಗ್ರಾಮ್ ನಷ್ಟಿರಬಹುದು. ಸಲ್ಮಾನ್ ಅವರ ರಕ್ತದಲ್ಲಿ 62 ಮಿಲಿಗ್ರಾಂನಷ್ಟಿದೆ. ಹೀಗಾಗಿ ಸಲ್ಮಾನ್ ಖಾನ್ ಅವರು ಘಟನೆ ನಡೆದ ವೇಳೆ ಕಾರಿನಲ್ಲಿದ್ದರು ಹಾಗೂ ವಾಹನ ಚಲಾಯಿಸುವಾಗ ಕುಡಿದಿದ್ದರು ಎಂದು ಸಲ್ಮಾನ್ ವಿರುದ್ಧ ದಾಖಲೆ ಸಲ್ಲಿಸಲಾಗಿತ್ತು.

ಚಾಲಕ ಅಶೋಕ್ ಸಿಂಗ್ ಹೇಳಿಕೆ ಉಲ್ಟಾ ಪಲ್ಟಾ

ಚಾಲಕ ಅಶೋಕ್ ಸಿಂಗ್ ಹೇಳಿಕೆ ಉಲ್ಟಾ ಪಲ್ಟಾ

ಕೇಸ್ ಉಲ್ಟಾ ಪಲ್ಟಾ ಮಾಡಿದ ಸಲ್ಮಾನ್ ಅವರ ಚಾಲಕ ಅಶೋಕ್ ಸಿಂಗ್ ಹೇಳಿಕೆ. ಕಾರಿನಲ್ಲಿ ಇದ್ದಿದ್ದು ಮೂರೇ ಜನ ಎಂದು ಸಾಬೀತಾಗಿದ್ದು, ಆದರೆ, ಅಶೋಕ್ ಸಿಂಗ್ ಕಾರಿನಲ್ಲಿದ್ದರು ಎಂದಾಗ ಕೇಸ್ ತಿರುವು ಪಡೆಯಿತು. ಸಲ್ಮಾನ್ ಅವರು ಕಾರು ಚಲಾಯಿಸುತ್ತಿರಲಿಲ್ಲ ಎಂದರೆ ಅಶೋಕ್ ಕಾರಿನಲ್ಲಿ ಇದ್ದಿದ್ದಕ್ಕೆ ಸಾಕ್ಷಿ ಬೇಕಿತ್ತು. ಡಿಫೆನ್ಸ್ ಲಾಯರ್ ಇದನ್ನು ಪ್ರೂವ್ ಮಾಡಲಾಗಲಿಲ್ಲ.

ಡ್ರೈವಿಂಗ್ ಲೈಸನ್ಸ್ ಇರಲಿಲ್ಲ

ಡ್ರೈವಿಂಗ್ ಲೈಸನ್ಸ್ ಇರಲಿಲ್ಲ

ಕುಡಿದು ವಾಹನ ಚಲಾಯಿಸಿದ್ದು ಸಾಬೀತಾದ ಬೆನ್ನಲ್ಲೇ ಡ್ರೈವಿಂಗ್ ಲೈಸನ್ಸ್ ಇಲ್ಲದೆ ವಾಹನ ಚಲಾಯಿಸಿದ್ದು ಸಾಬೀತಾಯಿತು. ಆರ್ ಟಿಒ ದಾಖಲೆ ಪ್ರಕಾರ ಸಲ್ಮಾನ್ ಅವರು 2004ರ ಲೈಸನ್ಸ್ ನೀಡಲಾಯಿತು. ಘಟನೆ ನಡೆದ ಬಳಿಕ ಸಲ್ಮಾನ್ ಅವರು ಸಂತ್ರಸ್ತರನ್ನು ಕಾಣದೆ ಪೊಲೀಸ್ ಬಳಿ ಹೋಗಿದ್ದೇಕೆ? ವಕೀಲರ ಮನೆಯಲ್ಲಿ ಪೊಲೀಸರು ಬಂಧಿಸಿದ್ದೇಕೆ? ತಪ್ಪು ಮಾಡಿಲ್ಲ ಎಂದರೆ ಡ್ರೈವರ್ ರನ್ನು ಪೊಲೀಸ್ ವಶಕ್ಕೆ ನೀಡಬಹುದಿತ್ತಲ್ಲವೇ ಎಂಬ ಪ್ರಶ್ನೆಗೆ ಸಲ್ಮಾನ್ ಬಳಿ ಉತ್ತರವಿರಲಿಲ್ಲ.

English summary
2002 Hit and Run Case: Finally verdict came in the thirteen year old hit and run case. One must be curious to know that despite the Defence argued so hard, how the actor got punished. Here are these four points which led Salman Khan's conviction in the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X