ಐಪಿಎಲ್ 2026 ಮುಗಿಯುವ ಮುನ್ನವೇ ಎಲ್‌ಎಸ್‌ಜಿ ನಾಯಕತ್ವ ಸ್ಥಾನಕ್ಕೆ ರಿಷಭ್ ಪಂತ್ ಗುಡ್‌ಬೈ

Rishabh Pant: ಐಪಿಎಲ್ 2026ರ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಕಳಪೆ ಪ್ರದರ್ಶನದ ಮೂಲಕ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ. ಇದರ ಬೆನ್ನಲ್ಲೇ ರಿಷಭ್ ಪಂತ್ ಅವರು ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ ಎಂದು ಫ್ರಾಂಚೈಸಿ ಶುಕ್ರವಾರ (ಮೇ 29) ಪ್ರಕಟಿಸಿದೆ.

ನಾಯಕತ್ವದ ಜವಾಬ್ದಾರಿಯಿಂದ ಕೆಳಗಿಳಿಸುವಂತೆ ಪಂತ್ ಮಾಡಿದ ಮನವಿಯನ್ನು ಶುಕ್ರವಾರ (ಮೇ 29) ಅಂಗೀಕರಿಸಲಾಗಿದೆ ಎಂದು ಫ್ರಾಚೈಸಿ ತಿಳಿಸಿದೆ. 2025ರ ಐಪಿಎಲ್ ಹರಾಜಿನಲ್ಲಿ ಲಕ್ನೋ ತಂಡವು ಪಂತ್ ಅವರನ್ನು 27 ಕೋಟಿ ರೂಪಾಯಿ ಮೊತ್ತಕ್ಕೆ ಖರೀದಿಸಿತ್ತು. ಇದು ಐಪಿಎಲ್ ಇತಿಹಾಸದ ಅತ್ಯಂತ ದುಬಾರಿ ಒಪ್ಪಂದಗಳಲ್ಲಿ ಒಂದಾಗಿತ್ತು. ಈ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ತೋರಿದ ನಂತರ ಅವರು ತಕ್ಷಣದಿಂದಲೇ ಜಾರಿಗೆ ಬರುವಂತೆ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

Rishabh Pant Steps Down As Lucknow Super Giants Captain After Indian Premier League 2026 Disaster

ಕೇವಲ 4ರಲ್ಲಿ ಮಾತ್ರ ಜಯ

ತಂಡದ ನಾಯಕನಾಗಿ ಕಳೆದ ಎರಡು ಸೀಸನ್‌ಗಳಲ್ಲಿ ಪಂತ್ ಅವರು ಲಕ್ನೋ ತಂಡವನ್ನು ಪ್ಲೇ ಆಫ್‌ ಹಂತಕ್ಕೆ ಕೊಂಡೊಯ್ಯುವಲ್ಲಿ ವಿಫಲರಾದರು. ಅದರಲ್ಲೂ ಐಪಿಎಲ್ 2026ರ ಸೀಸನ್‌ನಲ್ಲಿ ತಂಡವು ಅಂಕಪಟ್ಟಿಯ ಕೊನೆಯ ಸ್ಥಾನಕ್ಕೆ ಕುಸಿಯಿತು. ಈ ಆವೃತ್ತಿಯಲ್ಲಿ ಎಲ್‌ಎಸ್‌ಜಿ ಆಡಿದ 14 ಪಂದ್ಯಗಳಲ್ಲಿ ಕೇವಲ 4ರಲ್ಲಿ ಮಾತ್ರ ಜಯ ಸಾಧಿಸಿತು. ಇದಕ್ಕೂ ಮೊದಲು 2025ರ ಸೀಸನ್‌ನಲ್ಲೂ ತಂಡವು ಹೇಳಿಕೊಳ್ಳುವಷ್ಟು ಪ್ರದರ್ಶನ ಕಂಡುಬಂದಿರಲಿಲ್ಲ. (14 ಪಂದ್ಯಗಳಲ್ಲಿ 6 ಜಯ). ರಿಷಬ್ ಪಂತ್ ನಾಯಕತ್ವದಲ್ಲಿ ಲಕ್ನೋ ಆಡಿದ 28 ಪಂದ್ಯಗಳಲ್ಲಿ ಕೇವಲ 10 ಪಂದ್ಯಗಳನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಎಲ್‌ಎಸ್‌ಜಿ ಫ್ರಾಂಚೈಸಿ ಹೇಳಿದ್ದೇನು?

'ರಿಷಬ್ ಪಂತ್ ಅವರು ಫ್ರಾಂಚೈಸಿಯ ನಾಯಕತ್ವದ ಜವಾಬ್ದಾರಿಯಿಂದ ಮುಕ್ತಗೊಳಿಸುವಂತೆ ಮನವಿ ಮಾಡಿಕೊಂಡಿದ್ದರು. ಅವರ ಈ ಮನವಿಯನ್ನು ಲಕ್ನೋ ಸೂಪರ್ ಜೈಂಟ್ಸ್ ಅಂಗೀಕರಿಸಿದ್ದು, ಇದು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ,' ಅಂತಾ ಫ್ರಾಂಚೈಸಿ ತಿಳಿಸಿದೆ. 2025ರ ಸೀಸನ್‌ನ 14 ಪಂದ್ಯಗಳಲ್ಲಿ ಪಂತ್ ಕೇವಲ 269 ರನ್ ಗಳಿಸಿದ್ದರು ಮತ್ತು ಈ ವರ್ಷದ 2026ರ ಆವೃತ್ತಿಯಲ್ಲಿ ಕೇವಲ 312 ರನ್ ಗಳಿಸಲಷ್ಟೇ ಶಕ್ತರಾದರು.

ಪಂತ್ ಕೊಡುಗೆ ಸ್ಮರಿಸಿದ ಮ್ಯಾನೇಜ್‌ಮೆಂಟ್

ತಂಡದ ಮ್ಯಾನೇಜ್‌ಮೆಂಟ್ ಪಂತ್ ಅವರ ಕೊಡುಗೆಯನ್ನು ಸ್ಮರಿಸಿದೆ. 'ಇಂತಹ ಕಠಿಣ ನಿರ್ಧಾರಗಳು ತಂಡದ ಹಿತದೃಷ್ಟಿಯಿಂದ ಅನಿವಾರ್ಯ. ಪಂತ್ ಅವರ ಮನವಿಯನ್ನು ನಾವು ಗೌರವಿಸುತ್ತೇವೆ. ಈಗ ನಮ್ಮ ಗಮನ ಮುಂದಿನ ಸೀಸನ್‌ಗಾಗಿ ತಂಡವನ್ನು ಮರುನಿರ್ಮಾಣ ಮಾಡುವ ಕಡೆಗಿದೆ,' ಎಂದು ತಿಳಿಸಿದೆ.

ಪಂತ್ ನಾಯಕತ್ವ ಬಿಟ್ಟರೂ ತಂಡದ ಆಟಗಾರನಾಗಿ ಮುಂದುವರಿಯುತ್ತಾರೆಯೇ ಅಥವಾ ಮುಂದಿನ ಹರಾಜಿನಲ್ಲಿ ಬೇರೆ ತಂಡ ಸೇರುತ್ತಾರೆಯೇ ಎಂಬುದು ಕುತೂಹಲ ಮೂಡಿಸಿದೆ. ಲಕ್ನೋ ತಂಡಕ್ಕೆ ಈಗ ಹೊಸ ನಾಯಕನ ಹುಡುಕಾಟ ಶುರುವಾಗಿದ್ದು, ಶೀಘ್ರದಲ್ಲೇ ಹೊಸ ನಾಯಕನ ಘೋಷಣೆಯಾಗುವ ಸಾಧ್ಯತೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+