ಸಲ್ಮಾನ್ ಗೆ ರಕ್ಷೆ ನೀಡಿದ 'ಬೀಯಿಂಗ್ ಹ್ಯೂಮನ್'
ಮುಂಬೈ, ಮೇ.6: ಬಾಲಿವುಡ್ ನ 'ಬ್ಯಾಡ್ ಬಾಯ್' ಎನಿಸಿರುವ ಸಲ್ಮಾನ್ ಖಾನ್ ಅಪರಾಧಿಯಾಗಿ 10 ವರ್ಷ ಶಿಕ್ಷೆ ಭೀತಿಯಲ್ಲಿರುವಾಗ ಅವರ ಕೈ ಹಿಡಿದಿದ್ದು ಹುಚ್ಚು ಅಭಿಮಾನಿಗಳಲ್ಲ. ನಿರ್ಗತಿಕ ಮಕ್ಕಳು, ಸಲ್ಲೂ ಮಾಡಿದ ಪರೋಪಕಾರದ ಕೆಲಸಗಳು. ಹೌದು, ಸಲ್ಲೂ ಬ್ಯಾಡ್ ಬಾಯ್ ಅಲ್ಲ 'ಬೀಯಿಂಗ್ ಹ್ಯೂಮನ್' ಸಂಸ್ಥೆ ನಡೆಸುವ ಹೃದಯವಂತ ಎಂದು ಕೋರ್ಟಿನಲ್ಲಿ ವಾದಿಸಿದ್ದು ತಕ್ಕಮಟ್ಟಿಗೆ ಫಲ ನೀಡಿದೆ.
ಐಪಿಸಿ ಸೆಕ್ಷನ್ 304 II ಅಡಿಯಲ್ಲಿ ಪ್ರಕರಣ ದಾಖಲಾಗಿ ವಿಚಾರಣೆ ನಡೆದ ಕಾರಣ ಸಲ್ಮಾನ್ ಖಾನ್ ಅವರು 10 ವರ್ಷ ಶಿಕ್ಷೆ ಭೀತಿಯಲ್ಲಿದ್ದರು. [ಗುದ್ದೋಡು ಕೇಸ್ ತೀರ್ಪು: ಸಲ್ಮಾನ್ ದೋಷಿ ]
ಅದರೆ, ಸಲ್ಮಾನ್ ಪರ ವಕೀಲ ಶ್ರೀಕಾಂತ್ ಶಿವಾಡೆ ಮಂಡಿಸಿದ ವಾದ ಅವರ ಶಿಕ್ಷೆ ಪ್ರಮಾಣವನ್ನು ತಗ್ಗಿಸಿದೆ. ಸಲ್ಮಾನ್ ಖಾನ್ ಅವರ 'ಬೀಯಿಂಗ್ ಹ್ಯೂಮನ್' ಸಂಸ್ಥೆ ಕೈಗೊಂಡಿರುವ ಸಾಮಾಜಿಕ ಕಳಕಳಿ ಕಾರ್ಯಗಳು ಅವರಿಗೆ ಸ್ವಲ್ಪ ರಿಲೀಫ್ ನೀಡಿದೆ.ಸೆಷನ್ಸ್ ಕೋರ್ಟಿನಲ್ಲಿ ಶಿಕ್ಷೆ ಪಡೆದ ಸಲ್ಮಾನ್ ಗೆ ಸಂಜೆ ವೇಳೆಗೆ ಬಾಂಬೆ ಹೈಕೋರ್ಟಿನಿಂದ ಮಧ್ಯಂತರ ಜಾಮೀನು ಮಂಜೂರಾಗಿದೆ. [ಸಲ್ಮಾನ್ ಖಾನ್ ಪ್ರಕರಣದ ತೀರ್ಪು ಅಪ್ಡೇಟ್ಸ್]
ಅಪಘಾತ ಪ್ರಕರಣದಲ್ಲಿ ಸಂತ್ರಸ್ತರಾದ ಕುಟುಂಬಕ್ಕೆ ದಾನ ನೀಡಿದ ಸಲ್ಮಾನ್ ನಂತರ ಅನಾಥರು, ನಿರ್ಗತಿಕರು, ಅಶಕ್ತರ ರಕ್ಷಣೆ, ನೆರವಿಗಾಗಿ ಹುಟ್ಟು ಹಾಕಿದ ಬೀಯಿಂಗ್ ಹ್ಯೂಮನ್ ಸಂಸ್ಥೆ ಅನೇಕರಿಗೆ ದಾರಿ ದೀಪವಾಗಿದೆ. ಬೀಯಿಂಗ್ ಹ್ಯೂಮನ್ ಬಗ್ಗೆ ಒಂದಿಷ್ಟು ವಿವರ ಮುಂದಿದೆ. [ಹಿಟ್ ಅಂಡ್ ರನ್ ಕೇಸ್ ಟೈಮ್ ಲೈನ್]

ಬೀಯಿಂಗ್ ಹ್ಯೂಮನ್ ಹುಟ್ಟು
ಸೆ.28, 2002ರಲ್ಲಿ ಅಪಘಾತ ಸಂಭವಿಸಿದ ಮೇಲೆ ಸಲ್ಮಾನ್ ಖಾನ್ 18 ದಿನಗಳ ಕಾಲ ಜೈಲುವಾಸ ಅನುಭವಿಸಿದ್ದರು. ನಂತರ ಸರ್ಕಾರೇತರ ಸಂಸ್ಥೆ ನಿರ್ಮಿಸಿ ಸಮಾಜಿಕ ಕಳಕಳಿ ಕಾರ್ಯದಲ್ಲಿ ಹೆಚ್ಚೆಚ್ಚು ತೊಡಗಿಕೊಂಡರು.ಬಾಂದ್ರಾ ಪೊಲೀಸ್ ಸ್ಟೇಷನ್ ಲಾಕಪ್ ನಲ್ಲಿದ್ದ ಸಲ್ಮಾನ್ ಅವರು ಮನೆ ಯೂಟವನ್ನು ನಿರಾಕರಿಸಿ ಸಹಖೈದಿಗಳ ಜೊತೆ ಬೆರೆತಾಗ ಬೀಯಿಂಗ್ ಹ್ಯೂಮನ್ ಕಲ್ಪನೆ ಹೊಳೆದಿದೆ.

ಸಂತ್ರಸ್ತರಿಗೆ ಹಣ ನೀಡಿದ ಸಲ್ಮಾನ್
ಬಾಂಬೆ ಹೈಕೋರ್ಟ್ ಆದೇಶದಂತೆ ಮೃತನ ಕುಟುಂಬಕ್ಕೆ 10 ಲಕ್ಷ ರು ಹಾಗೂ ಗಾಯಗೊಂಡವರಿಗೆ 3 ಲಕ್ಷ ಹಾಗೂ 1.5 ಲಕ್ಷ ರು ನೀಡಿದ್ದರು. ಬೀಯಿಂಗ್ ಹ್ಯೂಮನ್ ಮೂಲಕ ಕ್ಯಾನ್ಸರ್, ಏಡ್ಸ್ ಪೀಡಿತ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ತಪಾಸಣೆ ನೀಡಲಾಗುತ್ತಿದೆ. ಅನೇಕ ಶಾಲೆಗಳು, ಎನ್ ಜಿಒಗಳ ಜೊತೆ ಕೈಜೋಡಿಸಿ ಈ ಕಾರ್ಯ ಕೈಗೊಳ್ಳಲಾಗಿದೆ. ಪ್ರವಾಹ ಪೀಡಿತ, ನೈಸರ್ಗಿಕ ವಿಕೋಪ ಪೀಡಿತರಿಗೆ ಸಲ್ಮಾನ್ ನೆರವಾಗುತ್ತಿದ್ದಾರೆ.

ಜನ ಸಾಮಾನ್ಯರ ಕಣ್ಣಲ್ಲಿ ಸಲ್ಮಾನ್
ಜನ ಸಾಮಾನ್ಯರಲ್ಲಿ ಅನೇಕರು ಸಲ್ಮಾನ್ ಒಳ್ಳೆ ವ್ಯಕ್ತಿಯೇ ಇರಬಹುದು. ಅದರೆ, ಕಾನೂನಿನ ಮುಂದೆ ಎಲ್ಲರೂ ತಲೆಬಾಗಬೇಕು, ಶಿಕ್ಷೆ ಆಗಿರುವುದು ಮುಖ್ಯ. ಎಷ್ಟು ವರ್ಷ ಎಂಬುದಕ್ಕಿಂತ ಸಂತ್ರಸ್ತರಿಗೆ ಸರಿಯಾದ ನೆರವು ಸಿಕ್ಕಿದೆಯೇ ಎಂಬುದನ್ನು ಕೋರ್ಟ್ ಗಮನಹರಿಸಿದರೆ ಪ್ರಕರಣದ ತೀರ್ಪಿಗೂ ಬೆಲೆ ಬರುತ್ತದೆ ಎಂಬ ಟ್ವೀಟ್ ಗಳು ಕಾಣಿಸಿಕೊಂಡಿವೆ. [ಟ್ವೀಟ್ ಗಳಲ್ಲಿ ಜನರ ಪ್ರತಿಕ್ರಿಯೆ]

ಅಪ್ಪ ಸಲೀಂ ಖಾನ್ ಹೇಳಿದ ಮಾತು ನಿಜವಾಗಿದೆ.
ಕನ್ನಡದ 'ಪ್ರೇಮದ ಕಾಣಿಕೆ'ಸಿನಿಮಾಕ್ಕೆ ಕಥೆ ಒದಗಿಸಿದ್ದ ಹೆಸರಾಂತ ಚಿತ್ರ ಸಾಹಿತಿ ಸಲೀಂ ಖಾನ್ ಅವರು ಮಗನ ಬಗ್ಗೆ ಹೇಳಿದ್ದು ಹೀಗೆ" ನಿನ್ನ ಎಲ್ಲಾ ತೊಂದರೆಗಳು ರಾತ್ರಿ 11 ಗಂಟೆಯಿಂದ ಮುಂಜಾನೆ 3 ಗಂಟೆಯೊಳಗೆ ನಡೆಯಲಿದೆ' ಈ ಮಾತು ಹಲವು ಬಾರಿ ನಿಜವಾಗಿದೆ ಕೂಡಾ. ಹಿಟ್ ಅಂಡ್ ರನ್ ಘಟನೆ ನಡೆದಿದ್ದು ಕೂಡಾ ರಾತ್ರಿ 2.30 ಕ್ಕೆ ಸಂಭವಿಸಿದ್ದು ಎಂಬುದನ್ನು ಸ್ಮರಿಸಬಹುದು.

ಬಾಂದ್ರಾ ಹುಡುಗ ಸಲ್ಮಾನ್ ಪರಿಸರ ಪ್ರೇಮಿ ಕೂಡಾ
ಬಾಂದ್ರಾ ಬ್ಯಾಂಡ್ ಸ್ಟ್ಯಾಂಡ್ ನಲ್ಲಿ ಮರಗಳು ಕಡಿಮೆಯಾಗಿರುವ ಬಗ್ಗೆ ಅನೇಕ ಸಲ ವ್ಯಥೆ ವ್ಯಕ್ತಪಡಿಸಿದ ಸಲ್ಮಾನ್, ಮತ್ತೆ ಮರಗಳನ್ನು ನೆಟ್ಟು ಪರಿಸರ ಉಳಿಸುವ ಯೋಜನೆ ಹಾಕಿಕೊಂಡಿದ್ದಾರೆ.

ದಾನ ಧರ್ಮದಲ್ಲಿ ಸಲ್ಮಾನ್ ಎತ್ತಿದ ಕೈ
ದಾನ ಧರ್ಮ ಸಲ್ಮಾನ್ ಖಾನ್ ರಕ್ತಗತವಾಗಿ ಬಂದಿದೆ. ಆಗಾಗ್ಗೆ ರಕ್ತದಾನ ಮಾಡುವ ಸಲ್ಲೂ, ಆಸ್ಪತ್ರೆಗಳಿಗೆ ತೆರಳಿ ತೀವ್ರವಾಗಿ ಕಾಯಿಲೆಗೊಳಗಾಗಿರುವ ಮಕ್ಕಳಿಗೆ ಆರೈಕೆ ಮಾಡುತ್ತಾರೆ. ಕ್ಯಾನ್ಸರ್, ಏಡ್ಸ್ ಪೀಡಿತ ಮಕ್ಕಳಿಗಾಗಿ ಶ್ರಮಿಸುತ್ತಿದ್ದಾರೆ. ನಿರ್ಗತಿಕಳಾಗಿ ರಸ್ತೆಯಲ್ಲಿ ಸಿಕ್ಕ ಅರ್ಪಿತಾಳನ್ನು ಮನೆಗೆ ಕರೆ ತಂದು ತಂಗಿ ಸ್ಥಾನ ನೀಡಿ ಮದುವೆ ಮಾಡಿ ಬಿಗ್ ಬ್ರದರ್ ಎನಿಸಿಕೊಂಡಿದ್ದಾರೆ.

ಒಂದು ಕೇಳಿದರೆ ನೂರು ಜನರಿಗೆ ದಾನ
ವಾಂಟೆಡ್ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಸ್ಟುಡಿಯೋದಲ್ಲಿ ಕಸ ಗುಡಿಸುವ ಮಹಿಳೆಯೊಬ್ಬರು ತಮ್ಮ ಗೋಳು ತೋಡಿಕೊಂಡು ಒಂದು ಸೀರೆಗಾಗಿ ಸಲ್ಮಾನ್ ರನ್ನು ಕೇಳುತ್ತಾರೆ. ಮರುದಿನ ಸ್ಟುಡಿಯೋದಲ್ಲಿರುವ 35ಕ್ಕೂ ಮಂದಿ ಮಹಿಳಾ ಕೆಲಸಗಾರರಿಗೆ ಹೊಸ ಸೀರೆ ಸಿಗುತ್ತದೆ. ಇನ್ನೊಮ್ಮೆ ಹೊಚ್ಚ ಹೊಸ ಲ್ಯಾಪ್ ಟಾಪ್ ಯಾರೋ ಕೇಳಿದ ತಕ್ಷಣ ದಾನ ಮಾಡಿದ್ದರು.
|
ಹೃದಯ ಚಿಕಿತ್ಸೆಗೆ ನೆರವಾಗಿದ್ದ ಸಲ್ಮಾನ್
600ಜನ ಮಕ್ಕಳ ಹೃದಯ ಚಿಕಿತ್ಸೆಗೆ ನೆರವಾಗಿದ್ದ ಸಲ್ಮಾನ್ ಅವರಿಗೆ ಶಿಕ್ಷೆ ಕಡಿಮೆ ಮಾಡಿ ಎಂದು ಕೋರಿದ ವಕೀಲ ಶ್ರೀಕಾಂತ್ ಶಿವಾಡೆ.
|
ಬಿಎಂಡಬ್ಲ್ಯೂ ಹಿಟ್ ಅಂಡ ರನ್ ಕೇಸ್
ಬಿಎಂಡಬ್ಲ್ಯೂ ಹಿಟ್ ಅಂಡ್ ರನ್ ಕೇಸ್ ಬಗ್ಗೆ ಪ್ರಸ್ತಾಪಿಸಿದ ಶ್ರೀಕಾಂತ್ ಶಿವಾಡೆ.
|
ಸಯಾಮಿ ಅವಳಿಗಳ ಪ್ರತಿಕ್ರಿಯೆ
ಸಲ್ಮಾನ್ ಖಾನ್ ಗೆ ಜೈಲುಶಿಕ್ಷೆ ಸುದ್ದಿ ಕೇಳಿ ಸಯಾಮಿ ಅವಳಿಗಳು ನೀಡಿದ ಪ್ರತಿಕ್ರಿಯೆ ಹೀಗಿತ್ತು.












Click it and Unblock the Notifications