ಪೈಲಟ್‌ಗಳ ಕೊರತೆ ಶುಕ್ರವಾರವೂ 130 ಇಂಡಿಗೋ ವಿಮಾನ ಹಾರಾಟ ರದ್ದು

ಮುಂಬೈ, ಫೆಬ್ರವರಿ 15: ಇಂಡಿಗೋ ಏರ್‌ಲೈನ್ಸ್ ಪೈಲಟ್‌ಗಳ ಕೊರತೆಯಿಂದಾಗಿ ಶುಕ್ರವಾರ 130 ವಿಮಾನಗಳ ಹಾರಾಟವನ್ನು ರದ್ದುಪಡಿಸಿದೆ.

ಇಂಡಿಗೋ ವಕ್ತಾರ ಹಾಗೂ ಮುಖ್ಯ ನಿರ್ವಹಣಾಧಿಕಾರಿ ವೂಲ್ಫ್‌ಗಾಂಗ್ ಪ್ರೋಕ್ ಶೌರ್‌ ಅವರಿಗೆ ಕಳುಹಿಸಿದ ಇ-ಮೇಲ್‌ಗೆ ಯಾವುದೇ ಉತ್ತರ ಬಂದಿಲ್ಲ.ಗುರುಗ್ರಾಮ್ ಮೂಲದ ಬಜೆಟ್ ಏರ್‌ಲೈನ್ಸ್‌ 210 ವಿಮಾನಗಳನ್ನು ಹೊಂದಿದ್ದು, ಪ್ರತಿದಿನ 1,300 ಹಾರಾಟಗಳನ್ನು ನಿರ್ವಹಿಸುತ್ತಿದೆ.

ಹಾಗಿದ್ದರೂ, ನಿಗದಿತ ರದ್ದತಿ ಹೊರತುಪಡಿಸಿ ಯಾವುದೇ ಹೆಚ್ಚುವರಿ ವಿಮಾನಗಳ ಹಾರಾಟ ರದ್ದುಪಡಿಸಿಲ್ಲ ಎಂದು ಇಂಡಿಗೋ ವಕ್ತಾರ ಸ್ಪಷ್ಟಪಡಿಸಿದ್ದಾರೆ.ಏರ್‌ಲೈನ್ಸ್‌ನ ಒಟ್ಟಾರೆ ವಿಮಾನಗಳ ಹಾರಾಟದಲ್ಲಿ ಶೇ 10ರಷ್ಟು ಹಾರಾಟ ರದ್ದಾಗಿವೆ ಎಂದು ಮೂಲಗಳು ತಿಳಿಸಿವೆ.

IndiGo faces pilot shortage, cancels 130 flights

ಮಾರ್ಚ್‌ 31ರೊಳಗೆ ಇಂಡಿಗೋ ವಿಮಾನಗಳ ಹಾರಾಟ ಸಹಜ ಸ್ಥಿತಿಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ. ಗುರುವಾರವೂ 70 ವಿಮಾನಗಳ ಹಾರಾಟ ರದ್ದಾಗಿತ್ತು.ನಿಗದಿತ ರದ್ದತಿ ಹಾಗೂ ಬೆಂಗಳೂರಿನಲ್ಲಿ ಏರ್‌ಶೋ ಕಾರಣಕ್ಕೆ ವಿಮಾನ ನಿಲ್ದಾಣದಲ್ಲಿ ಸ್ಥಳಾವಕಾಶ ಇರದ ನೆಪವೊಡ್ಡಿ ಈ ವಿಮಾನಗಳ ಹಾರಾಟ ರದ್ದಾಗಿದ್ದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+