ಶಂಕಿತ ಉಗ್ರರೆಂದು ಹೃತಿಕ್ ಚಿತ್ರತಂಡದ ಸದಸ್ಯರನ್ನು ಬಂಧಿಸಿದ ಪೊಲೀಸರು
ಮುಂಬೈ, ಮೇ 30: ಹೃತಿಕ್ ರೋಷನ್ ಹಾಗೂ ಟೈಗರ್ ಶ್ರಾಫ್ ನಟಿಸುತ್ತಿರುವ ಚಿತ್ರವೊಂದರ ಹೆಚ್ಚುವರಿ ಕಲಾವಿದರನ್ನು ಶಂಕಿತ ಉಗ್ರರೆಂದು ಭಾವಿಸಿ ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಪಾಲ್‌ಗಢ ಜಿಲ್ಲೆಯ ವ್ಯಾಪ್ತಿಯಲ್ಲಿ ಚಿತ್ರತಂಡ ಶೂಟಿಂಗ್ ನಡೆಸುತ್ತಿತ್ತು. ಈ ಸಂದರ್ಭದಲ್ಲಿ ಆತ್ಮಾಹುತಿ ದಾಳಿಕೋರರಂತೆ ಕಾಣಿಸುತ್ತಿದ್ದ ಇಬ್ಬರು ಸಂಶಯಾಸ್ಪದವಾಗಿ ನಡೆದಾಡುತ್ತಿದ್ದರು. ಸ್ಥಳೀಯ ಅಂಗಡಿಯೊಂದರಲ್ಲಿ ಸಿಗರೇಟ್ ಖರೀದಿಸುತ್ತಿದ್ದಾಗ ಇವರನ್ನು ಪೊಲೀಸರು ಬಂಧಿಸಿದ್ದಾರೆ.

ಉಗ್ರರು ಎಂಬ ಶಂಕೆಯ ಮೇರೆಗೆ ಬಂಧಿಸಲಾಗಿತ್ತು. ಆದರೆ ಎರಡು ತಾಸಿನ ವಿಚಾರಣೆ ಬಳಿಕ ಅವರು ಚಿತ್ರತಂಡದ ಸದಸ್ಯರೆಂದು ಖಾತ್ರಿಯಾಗಿದೆ.
ಇವರನ್ನು ಬಿಡುಗಡೆ ಮಾಡಲು ಪೊಲೀಸರು ನಿರಾಕರಿಸಿದ ಹಿನ್ನೆಲೆಯಲ್ಲಿ ಚಿತ್ರತಂಡವು ಕಲಾವಿದರ ಜೊತೆಗಿನ ಗುತ್ತಿಗೆ ಯ ದಾಖಲೆ ಪತ್ರವನ್ನು ನೀಡಿದ ಬಳಿಕ ಉಗ್ರರಲ್ಲ ಎನ್ನುವುದು ಪೊಲೀಸರಿಗೆ ಖಾತ್ರಿಯಾಗಿದೆ. ಪೊಲೀಸರ ಈ ನಡೆ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆ ವ್ಯಕ್ತವಾಗಿದೆ.
ಇನ್ನೂ ಹೆಸರಿಡದ ಸಿನೆಮಾ ಒಂದರಲ್ಲಿ ಹೃತಿಕ್ ರೋಷನ್ ಹಾಗೂ ಟೈಗರ್ ಶ್ರಾಫ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.












Click it and Unblock the Notifications