ಕ್ರೈಸ್ತರ ಕೆಂಗಣ್ಣಿಗೆ ಗುರಿಯಾದ ಹೃತಿಕ್ ಮಾಡಿದ ಟ್ವೀಟ್!

Posted By:
Subscribe to Oneindia Kannada

ಮುಂಬೈ, ಮಾರ್ಚ್ 30: ಬಾಲಿವುಡ್ ನಟ ಹೃತಿಕ್ ರೋಷನ್ ಅವರ 'ಅಫೇರ್ ಟ್ವೀಟ್' ರಗಳೆ ಇನ್ನೂ ಮುಗಿದಿಲ್ಲ. ನಟಿ ಕಂಗನಾ ರನೌಟ್ ಜೊತೆಗಿನ ಓಡಾಟದ ಬಗ್ಗೆ ಬಂದ ಸುದ್ದಿಗೆ ಕಿಡಿಕಾರಿದ್ದ ಹೃತಿಕ್ ಈಗ ಟ್ವೀಟ್ ಮಾಡಿ ಕ್ರೈಸ್ತರ ವಿರೋಧ ಕಟ್ಟಿಕೊಂಡಿದ್ದಾರೆ.

ಪೋಪ್ ಫ್ರಾನ್ಸಿಸ್ ಅವರನ್ನು ಹೆಸರಿಸಿ ಹೃತಿಕ್ ಅವರು ಮಾಡಿದ್ದ ಟ್ವೀಟ್ ವಿರುದ್ಧ ಅಲ್ಪಸಂಖ್ಯಾತ ಕ್ರೈಸ್ತ ಸಮುದಾಯ ತಿರುಗಿ ಬಿದ್ದಿದ್ದು, ಈ ಬಗ್ಗೆ ಪ್ರಶ್ನಿಸಿ ಲೀಗಲ್ ನೋಟಿಸ್ ನೀಡಿದೆ.

ಮುಂಬೈನ ಕ್ರೈಸ್ತ ಸಮುದಾಯದ ಮುಖಂಡರು ನಟ ಹೃತಿಕ್ ರೋಷನ್ ಗೆ ನೋಟಿಸ್ ಕಳಿಸಿದ್ದಲ್ಲದೆ, ಪೋಪ್ ಅವರ ಹೆಸರು ದುರ್ಬಳಕೆ ಮಾಡಿದ ತಪ್ಪಿಗೆ ಸಾರ್ವಜನಿಕವಾಗಿ ಬೇಷರತ್ ಕ್ಷಮೆಯಾಚಿಸುವಂತೆ ಆಗ್ರಹಿಸಿದೆ.

ಏನಿದೆ ಟ್ವೀಟ್ ನಲ್ಲಿ?: ' ನಾನು ಯಾರ ಜೊತೆ ಅಫೇರ್ ಇಟ್ಟುಕೊಂಡಿದ್ದೇನೆ ಎಂದು ಈಗ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ನೋಡಿದರೆ, ನಾನು ಆ ಮಹಿಳೆಗಿಂತ ಪೋಪ್ ಜೊತೆಗೆ ಅಫೇರ್ ಇಟ್ಟುಕೊಂಡಿರುವ ಸಾಧ್ಯತೆ ಹೆಚ್ಚಿದೆ, ಥ್ಯಾಂಕ್ಸ್ ಬಟ್ ನೋ ಥ್ಯಾಂಕ್ಸ್' ಎಂದು ಟ್ವೀಟ್ ಮಾಡಿದ್ದರು.

ಪೋಪ್ ಹೆಸರನ್ನು ಈ ರೀತಿ ಬಳಸಿದ್ದು ಅಕ್ಷಮ್ಯ, ಹೃತಿಕ್ ಅವರು ಕೂಡಲೇ ಕ್ಷಮೆಯಾಚಿಸಬೇಕು ಎಂದು ಕ್ರೈಸ್ತ ಸಮುದಾಯದ ಮುಖಂಡ, ಮಹಾರಾಷ್ಟ್ರದ ಅಲ್ಪಸಂಖ್ಯಾತ ಆಯೋಗದ ಮಾಜಿ ಚೇರ್ಮನ್ ಅಬ್ರಾಹಂ ಮಥಾಯಿ ಅವರು ಪ್ರತಿಕ್ರಿಯಿಸಿದ್ದಾರೆ.

ಇಷ್ಟಕ್ಕೂ ತೀರಾ ಇತ್ತೀಚಿನ ಟ್ವೀಟ್ ಏನಲ್ಲ.

ಇಷ್ಟಕ್ಕೂ ತೀರಾ ಇತ್ತೀಚಿನ ಟ್ವೀಟ್ ಏನಲ್ಲ.

ಧಾರ್ಮಿಕ ಭಾವನೆಗೆ ಧಕ್ಕೆ ತಂದ ಹಿನ್ನಲೆಯಲ್ಲಿ ಭಾರತೀಯ ದಂಡ ಸಂಹಿತೆ ಸೆಕ್ಷನ್ 295ಎ ಅನ್ವಯ ಲೀಗಲ್ ನೋಟಿಸ್ ಜಾರಿಗೊಳಿಸಲಾಗಿದೆ.

ಇಷ್ಟಕ್ಕೂ ತೀರಾ ಇತ್ತೀಚಿನ ಟ್ವೀಟ್ ಏನಲ್ಲ. ಜನವರಿ 28, 2016ರಲ್ಲಿ ಮಾಡಿದ್ದ ಟ್ವೀಟ್. ಕಂಗನಾ ಅವರ ಜೊತೆ ಹೃತಿಕ್ ಗೆ ಅಫೇರ್ ಇತ್ತು ಎಂಬ ಸುದ್ದಿ ಹಬ್ಬಿದ್ದಕ್ಕೆ ಈ ರೀತಿ ಪ್ರತಿಕ್ರಿಯಿಸಿದ್ದರು.

ವಿವಾದಕ್ಕೆ ಕಾರಣವಾದ ಹೃತಿಕ್ ರೋಷನ್ ಮಾಡಿದ ಟ್ವೀಟ್

ವಿವಾದಕ್ಕೆ ಕಾರಣವಾದ ಹೃತಿಕ್ ರೋಷನ್ ಮಾಡಿದ ಹಳೆ ಟ್ವೀಟ್

ಹೃತಿಕ್ ಗೆ ನೋಟಿಸ್ ಕೊಟ್ಟ ಬಗ್ಗೆ ಪ್ರತಿಕ್ರಿಯೆ

ಹೃತಿಕ್ ಗೆ ನೋಟಿಸ್ ಕೊಟ್ಟ ಬಗ್ಗೆ ಪ್ರತಿಕ್ರಿಯೆಗಳು ಹೀಗಿವೆ

ಸೋನಮ್ ಜೊತೆ ಸೆಲ್ಫಿ ಎಲ್ಲದ್ದಕ್ಕೂ ಕಾರಣ

ಒಪ್ಪೋ ಸ್ಮಾರ್ಟ್ ಫೋನ್ ಜಾಹೀರಾತಿನಲ್ಲಿ ಸೋನಮ್ ಜೊತೆ ಸೆಲ್ಫಿ ಎಲ್ಲದ್ದಕ್ಕೂ ಕಾರಣ ಎಂದು ಕಿಚಾಯಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Bollywood actor Hrithik Roshan's woes do not seem to end anytime soon. Recently caught in a legal battle with actor Kangana Ranaut over their alleged affair, Roshan has been slapped with a notice by a minority community group for his tweet on Pope Francis.
Please Wait while comments are loading...