ಸಲ್ಮಾನ್ ಖಾನ್ ಜೈಲು ತಪ್ಪಿಸಿಕೊಂಡಿದ್ದೇ ಒಂದು 'ಕಮಾಲ್'
ಮುಂಬೈ, ಮೇ.8: 2002ರ ಹಿಟ್ ಅಂಡ್ ರನ್ ಕೇಸಿನಲ್ಲಿ ನಟ ಸಲ್ಮಾನ್ ಖಾನ್ ಪಾಲಿಗೆ ಅಡ್ವೊಕೇಟ್ ಹರೀಶ್ ಸಾಳ್ವೆ ದೇವರಾದ ಬೆನ್ನಲ್ಲೇ ಸಲ್ಮಾನ್ ಗೆಳೆಯ ಗಾಯಕ ಕಮಲ್ ಖಾನ್ ಅವರು ದೇವದೂತನಾಗಿದ್ದಾರೆ. ಸೆಷನ್ಸ್ ಕೋರ್ಟ್ ನೀಡಿದ್ದ 5 ವರ್ಷ ಶಿಕ್ಷೆಯನ್ನು ಹೈಕೋರ್ಟ್ ಶುಕ್ರವಾರ ಅಮಾನತುಗೊಳಿಸಿದೆ. ಈ ಆದೇಶ ನೀಡಲು ಪ್ರಮುಖ ಕಾರಣವಾಗಿದ್ದು 'ಸ್ಟಾರ್ ವಿಟ್ನೆಸ್' ಕಮಲ್ ಖಾನ್.
13ವರ್ಷ ಸುದೀರ್ಘ ವಿಚಾರಣೆ ವೇಳೆಯಲ್ಲಿ ಈ ಘಟನೆಯ ಪ್ರಮುಖ ಸಾಕ್ಷಿಯಾಗಿರುವ ಕಮಲ್ ಖಾನ್ ರನ್ನು ಸರಿಯಾಗಿ ವಿಚಾರಣೆಗೆ ಒಳಪಡಿಸದ ಡಿಫೆನ್ಸ್ ಲಾಯರ್ ಗಳು ಈಗ ಕೈ ಕೈ ಹಿಸುಕಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. [ಹಿಟ್ ಅಂಡ್ ರನ್ ಕೇಸ್ ಟೈಮ್ ಲೈನ್]
ಶುಕ್ರವಾರ(ಮೇ.8) ಮಧ್ನಾಹ್ನ ಬಾಂಬೆ ಹೈಕೋರ್ಟ್ ಜಡ್ಜ್ ಅಭಯ್ ತಿಪ್ಸೆ ಅವರು ಕಮಲ್ ಖಾನ್ ವಿಚಾರಣೆ ಏಕೆ ಮಾಡಿಲ್ಲ ಎಂದು ಕೇಳಿದಾಗ ಡಿಫೆನ್ಸ್ ವಕೀಲ ಸಂದೀಪ್ ಶಿಂಧೆ ಬಳಿ ಉತ್ತರವಿರಲಿಲ್ಲ. [ಜೈಲಿಗೆ ಕಳಿಸಿದ ಹೀರೋ ಈ ಬಾಡಿಗಾರ್ಡ್]
ಕಮಾಲ್: ಕಮಲ್ ಖಾನ್ ವಿಚಾರಣೆ ನಡೆಸದ ಕಾರಣ ಐಪಿಸಿ ಸೆಕ್ಷನ್ 304 II ಅನ್ವಯ ಪ್ರಕರಣ ಮುಂದುವರೆಸಲು ಅಥವಾ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ. ಕಾರು ಚಾಲನೆ ಯಾರು ಮಾಡುತ್ತಿದ್ದರು. ಯಾರು ಯಾರು ಕಾರಿನಲ್ಲಿದ್ದರು ಎಂಬುದೇ ಇನ್ನೂ ಬಗೆ ಹರಿದಿಲ್ಲ. ಹೀಗಾಗಿ ಸಲ್ಮಾನ್ ಗೆ ಶಿಕ್ಷೆ ವಿಧಿಸಬೇಕಾಗಿಲ್ಲ ಎಂದು ಜಡ್ಜ್ ಅಭಯ್ ತೀರ್ಪಿದ್ದಾರೆ. [ಸೆಷನ್ಸ್ ಕೋರ್ಟ್ ಶಿಕ್ಷೆ ರದ್ದು, ಜೈಲು ತಪ್ಪಿಸಿಕೊಂಡ ಸಲ್ಮಾನ್]
ಯಾರೀತ ಕಮಲ್ ಖಾನ್: 1972 ರ ಮಾರ್ಚ್ 12ರಂದು ಉತ್ತರ ಲಂಡನ್ನಿನ ಹೈಗೇಟ್ ಎಂಬಲ್ಲಿ ಜನಿಸಿದ ಕಮಲ್ ಖಾನ್ ಬಾಲಿವುಡ್, ಹಿಂದಿ ಪಾಪ್ ಸಿಂಗರ್. ನಂತರ ನಟ, ಸ್ಕ್ರಿಪ್ಟ್ ರೈಟರ್, ಸಂಗೀತಗಾರ, ಉದ್ಯಮಿಯಾಗಿ ಗುರುತಿಸಿಕೊಂಡವರು. ಸದ್ಯ ಬಿಸಿನೆಸ್ ನೋಡಿಕೊಂಡು ಸ್ವಿಟ್ಜರ್ಲೆಂಡ್ ನ ಜ್ಯೂರಿಚ್ ನಲ್ಲಿ ನೆಲೆಸಿದ್ದಾರೆ. [ಕಮಲ್ ಯಾರು ಇಲ್ಲಿದೆ ಹೆಚ್ಚಿನ ವಿವರ]

ಕಮಲ್ ಖಾನ್ ಬಳಿ ಇದೆ ಹಲವು ಪ್ರಶ್ನೆಗೆ ಉತ್ತರ
2002ರ ಸೆ.28ರಂದು ಸಲ್ಮಾನ್ ಖಾನ್, ರವೀಂದ್ರ ಪಾಟೀಲ್ ಜೊತೆಗೆ ಕಮಲ್ ಖಾನ್ ಕೂಡಾ ಕಾರಿನಲ್ಲಿದ್ದರು ಎಂಬುದು ಸಾಬೀತಾಗಿದೆ. ಆದರೆ, ಘಟನೆ ನಡೆದಾಗ ಕಾರು ಚಾಲನೆ ಮಾಡಿದ್ದು ಯಾರು ಎಂಬುದು ಗೊಂದಲಮಯವಾಗಿದೆ. ಸಲ್ಮಾನ್? ಅಲ್ತಾಫ್ ಅಥವಾ ಅಶೋಕ್ ಸಿಂಗ್? ಯಾರಿರ ಬಹುದು ಉತ್ತರ ಕಮಲ್ ಖಾನ್ ನೀಡಬಹುದು.
|
ಕಮಲ್ ಖಾನ್ ಕರೆಸಿಕೊಳ್ಳುತ್ತೇವೆ ಎಂದ ಅಭಾ ಸಿಂಗ್
ಹಿಟ್ ಅಂಡ್ ರನ್ ಕೇಸಿಗೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷಿಯಾಗಿರುವ ಸ್ವಿಟ್ಜರ್ಲೆಂಡ್ ನಿವಾಸಿ ಕಮಲ್ ಖಾನ್ ಅವರನ್ನು ವಿಚಾರಣೆಗೆ ಕರೆಸಿಕೊಳ್ಳುತ್ತೇವೆ ಎಂದು ಹಿರಿಯ ಅಡ್ವೊಕೇಟ್ ಅಭಾ ಸಿಂಗ್ ಹೇಳಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಸಂತೋಷ್ ಅರ್ಜಿ
ಸಾಮಾಜಿಕ ಕಾರ್ಯಕರ್ತ ಸಂತೋಷ್ ಡಾಂಡ್ಕರ್ ಅರ್ಜಿ ಹಾಕಿ ಕಮಲ್ ಖಾನ್ ವಿಚಾರಣೆಗೆ ಕೋರ್ಟಿಗೆ ಹಾಜರಾದರೆ ಸತ್ಯ ಬೆಳಕಿಗೆ ಬರುತ್ತದೆ ಎಂದು ಮನವಿ ಸಲ್ಲಿಸಿದ್ದರು. ಸಂತೋಷ್ ಪರ ವಕೀಲೆ ಅಭಾ ಸಿಂಗ್ ವಾದಿಸಿದ್ದರು. ಆದರೆ, ಅರ್ಜಿಯನ್ನು ಸೆಷನ್ಸ್ ಕೋರ್ಟ್ ತಳ್ಳಿ ಹಾಕಿತ್ತು. ಇದಕ್ಕೆ ಕಾರಣವೂ ಇತ್ತು. ಪೊಲೀಸ್ ಛಾರ್ಜ್ ಶೀಟ್ ನಲ್ಲಿ ಕಮಾಲ್ ಹೆಸರು ಪ್ರಮುಖ ಸಾಕ್ಷಿ ಪಟ್ಟಿಯಿಂದ ನಾಪತ್ತೆಯಾಗಿತ್ತು.

ಸಾಕ್ಷಿಗಳ ಪಟ್ಟಿಯಿಂದ ಕಮಾಲ್ ಹೆಸರು ನಾಪತ್ತೆ?
ಸೆ.28, 2002ರಂದು ನಡೆದ ಘಟನೆ ಬಗ್ಗೆ ಕಮಲ್ ಖಾನ್ ಅವರು ಅಕ್ಟೋಬರ್ 2, 2002ರಂದು ಅವರು ಬಾಂದ್ರಾ ಪೊಲೀಸ್ ಠಾಣೆಗೆ ತೆರಳಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಆದರೆ, ಪ್ರಮುಖ ಸಾಕ್ಷಿಯಾದ ಕಮಾಲ್ ವಿಚಾರಣೆ ನಡೆಸಿಲ್ಲ.
ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ನೀಡಿದ ಹೇಳಿಕೆಗಳು, ಹಾಗೂ 27 ಸಾಕ್ಷಿಗಳ ವ್ಯತಿರಿಕ್ತ ಹೇಳಿಕೆಗಳು ಕೇಸ್ ವಿಚಾರಣೆ ವಿಳಂಬ ಗೊಳಿಸಿತು.
ಕಮಾಲ್ ಖಾನ್ ವಿರುದ್ಧ ಬಂಧನ ವಾರೆಂಟ್?
ಘಟನೆ ಬಗ್ಗೆ ಮಾತನಾಡಲು ಕಮಾಲ್ ಖಾನ್ ಇಷ್ಟಪಟ್ಟಿರಲಿಲ್ಲ. ತಲೆತಪ್ಪಿಸಿಕೊಂಡು ತಿರುಗುತ್ತಿದ್ದ ವಿರುದ್ಧ ಬಂಧನ ವಾರೆಂಟ್ ಕೂಡಾ ಜಾರಿಯಾಗಿತ್ತು. ಕಮಾಲ್ ರನ್ನು ಬಂಧಿಸಿ ಬಂಧನ ಷರತ್ತು ಬದ್ಧ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ನಂತರ ವಿದೇಶಕ್ಕೆ ಹಾರಿದ ಕಮಾಲ್ ನಂತರ ಭಾರತದ ಕಡೆಗೆ ತಲೆ ಹಾಕಿ ಮಲಗಿರಲಿಲ್ಲ, ಸಾಲದ್ದಕ್ಕೆ ಪ್ರಾಸಿಕ್ಯೂಷನ್ ಕೂಡಾ ಸಾಕ್ಷಿ ಪಟ್ಟಿಯಿಂದ ಕಮಾಲ್ ಕೈ ಬಿಟ್ಟಿತ್ತು.

ವಿದೇಶದಿಂದಲೇ ವಿಚಾರಣೆಗೆ ಹಾಜರಾಗಬಹುದು
CrPC ಸೆಕ್ಷನ್ 275 ಅನ್ವಯ ಕಮಾಲ್ ಅವರು ಇಂಗ್ಲೆಂಡ್ ಅಥವಾ ಜ್ಯೂರಿಚ್ ನಲ್ಲಿದ್ದರೂ ಆಡಿಯೋ ಅಥವಾ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಬಹುದು. ಅದರೆ, ಈ ವ್ಯವಸ್ಥೆ ಬಳಸುವಲ್ಲಿ ಡಿಫೆನ್ಸ್ ಲಾಯರ್ಸ್ ವಿಫಲರಾದರು. ಏ.23ರಂದು ಕೊನೆ ಹಂತದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದನ್ನು ಜಡ್ಜ್ ಡಬ್ಲ್ಯೂ ಡಿ ದೇಶಪಾಂಡೆ ತಳ್ಳಿ ಹಾಕಿದರು.












Click it and Unblock the Notifications