ಯಾರೀತ ಕಮಾಲ್ ಖಾನ್?, ಸಲ್ಮಾನ್ ಆಪ್ತ ಸಖ
ಮುಂಬೈ, ಮೇ.8: 2002ರ ಹಿಟ್ ಅಂಡ್ ರನ್ ಕೇಸಿನಲ್ಲಿ ನಟ ಸಲ್ಮಾನ್ ಖಾನ್ ಪಾಲಿಗೆ ಅಡ್ವೊಕೇಟ್ ಹರೀಶ್ ಸಾಳ್ವೆ ದೇವರಾದ ಬೆನ್ನಲ್ಲೇ ಸಲ್ಮಾನ್ ಗೆಳೆಯ ಗಾಯಕ ಕಮಲ್ ಖಾನ್ ಅವರು ದೇವದೂತನಾಗಿದ್ದಾರೆ. ಯಾರೀತ ಕಮಲ್ ಖಾನ್ ಇಲ್ಲಿದೆ ಆತನ ಬಗ್ಗೆ ಸಂಕ್ಷಿಪ್ತ ವಿವರ..
ತಮ್ಮ ಚಿತ್ರಗಳ ಮೂಲಕ ಅನೇಕ ಪ್ರತಿಭೆಗಳಿಗೆ ಅವಕಾಶ ನೀಡುತ್ತಾ ಬಂದಿರುವ ಸಲ್ಮಾನ್ ಖಾನ್ ಅವರು ಪ್ಯಾರ್ ಕಿಯಾ ತೋ ಡರ್ ನಾ ಕ್ಯಾ ಚಿತ್ರದಲ್ಲಿ ಕಮಲ್ ಅವರ ಜನಪ್ರಿಯ ಹಾಡನ್ನು ಬಳಸಿಕೊಂಡಿದ್ದರು. 'ಓ ಓಹ್ ಜಾನೆ ಜಾನಾ" ಹಾಡಿನಲ್ಲಿ ಶರ್ಟ್ ಕಳಚಿ ನಿಂತ ಮುಂಚೆ ಬೇರ್ ಲೆಸ್ ಬಾಡಿ ತೋರುವ ಮೂಲಕ ಜನಪ್ರಿಯತೆ ಉಳಿಸಿಕೊಂಡರು. [ಸಲ್ಲೂಗೆ 'ದೇವರಾದ' ಸಾಳ್ವೆ]
ಆರ್ ಡಿ ಬರ್ಮನ್ ಹೆಸರಿನಲ್ಲಿ ನೀಡುವ ಉದಯೋನ್ಮುಖ ಗಾಯಕ ಫಿಲಂಫೇರ್ ಪ್ರಶಸ್ತಿ ತನ್ನದಾಗಿಸಿಕೊಂಡ ಕಮಲ್ ಖಾನ್ ವಿಶ್ವದೆಲ್ಲೆಡೆ 27ಕ್ಕೂ ಅಧಿಕ ದೇಶಗಳ 127ಕ್ಕೂ ಅಧಿಕ ನಗರಗಳಲ್ಲಿ 250ಕ್ಕೂ ಅಧಿಕ ಸಂಗೀತ ಕಾರ್ಯಕ್ರಮ ನೀಡಿದ್ದಾರೆ.[ಹಿಟ್ ಅಂಡ್ ರನ್ ಕೇಸ್ ಟೈಮ್ ಲೈನ್]

ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತಗಾರ ಎ.ಆರ್ ರೆಹಮಾನ್ ಜೊತೆ ಕೂಡಾ ಕೈ ಜೋಡಿಸಿದ್ದ ಕಮಲ್ ಅವರು ಸ್ಲಂಗಾಡ್ ಮಿಲೇನೇರ್, ನಿಕೋಲ್ ಸ್ವಾರ್ಜೆಂಗರ್ ಆಲ್ಬಂಗಳಿಗೂ ತಮ್ಮ ಕೊಡುಗೆ ನೀಡಿದ್ದಾರೆ. ಎಂಟಿವಿ, ವೀ ಚಾನೆಲ್, ಜೀ ಟಿವಿ ಚಾನೆಲ್ ಪ್ರಶಸ್ತಿಗಳು ಸಂದಿವೆ.
2005ರಲ್ಲಿ ರಾಹುಲ್ ರಾವೆಲ್ ಅವರ ಸನ್ನಿ ಡಿಯ್ಲ್ ಅಭಿನಯದ 'ಜೋ ಬೋಲೆ ಸೋ ನಿಹಾಲ್' ಚಿತ್ರದಲ್ಲಿ ನಟಿಸುವ ಮೂಲಕ ನಟನೆಯಲ್ಲೂ ಅದೃಷ್ಟ ಪರೀಕ್ಷಿಸಿದರು. [ಸಲ್ಮಾನ್ ಗೆ ರಕ್ಷೆ ನೀಡಿದ 'ಬೀಯಿಂಗ್ ಹ್ಯೂಮನ್']
ಎನ್ ಡಿಟಿವಿಯ ರಿಯಾಲಿಟಿ ಶೋನಲ್ಲೂ ಕಾಣಿಸಿಕೊಂಡಿದ್ದ ಕಮಲ್ 2009ರಲ್ಲಿ ಸಲ್ಮಾನ್ ಅಭಿನಯದ ಸೂಪರ್ ಹಿಟ್ ಚಿತ್ರ ವಾಂಟೆಂಡ್ ನಲ್ಲಿ ಇಷ್ಕ್ ವಿಷ್ಕ್ ಎಂಬ ಹಾಡಿಗೆ ದನಿ ನೀಡಿದ್ದರು. 43 ವರ್ಷ ವಯಸ್ಸಿನ ಕಮಲ್ ಖಾನ್ 2002ರ ಅಪಘಾತ ಪ್ರಕರಣದ ಸಾಕ್ಷಿಯಾಗಿದ್ದಾರೆ.
ಪ್ಯಾರ್ ಕಿ ಯಾ ತೊ ಡರ್ ನಾ ಕ್ಯಾ ಚಿತ್ರದ ಜನಪ್ರಿಯ ಹಾಡು 'ಓ ಓಹ್ ಜಾನೆ ಜಾನಾ"
-
ಎಪಿಎಂಸಿಯಲ್ಲಿ ಮೂಟೆಗಳು ಮೈಮೇಲೆ ಬಿದ್ದರೂ ಪವಾಡಸದೃಶ್ಯದಂತೆ ಬದುಕಿದ ಮಹಿಳೆ Video Viral -
Ankita Jayaram: ನಟನೆಯ ನಡುವೆಯೂ ದ್ವಿತೀಯ ಪಿಯುಸಿಯಲ್ಲಿ ಕರ್ಣ ಧಾರಾವಾಹಿ ಖ್ಯಾತಿಯ ನಟಿ ಅಂಕಿತಾ ಜಯರಾಮ್ ಅಮೋಘ ಸಾಧನೆ -
Karnataka Weather: ಕರ್ನಾಟಕದ 4 ಜಿಲ್ಲೆಗಳಲ್ಲಿ ಮಳೆ - ವಿವಿಧ ಭಾಗಗಳಲ್ಲಿ ಭಾರೀ ಬಿಸಿಲು, ಕರ್ನಾಟಕದ ಹವಾಮಾನ ವರದಿ -
April 10 Horoscope: 12 ರಾಶಿಗಳಿಗೆ ಇಂದು ಆರೋಗ್ಯ, ಹಣಕಾಸು ಮತ್ತು ಪ್ರೇಮದಲ್ಲಿ ಮಿಶ್ರ ಫಲ -
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ.











Click it and Unblock the Notifications