ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಲ್ಮಾನ್ ಖಾನ್ ಮೇಲೆ ವಿಧಿಸಿದ್ದ ಶಿಕ್ಷೆ ಅಮಾನತು

By Mahesh
|
Google Oneindia Kannada News

ಮುಂಬೈ, ಮೇ.08: 2002ರ ಹಿಟ್ ಅಂಡ್ ರನ್ ಕೇಸಿನಲ್ಲಿ ಅಪರಾಧಿ ಎನಿಸಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಜೈಲುವಾಸ ತಪ್ಪಿಸಿಕೊಂಡಿದ್ದಾರೆ. ಸೆಷನ್ಸ್ ಕೋರ್ಟ್ ವಿಧಿಸಿದ್ದ 5 ವರ್ಷ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಶುಕ್ರವಾರ ಅಮಾನತುಗೊಳಿಸಿದೆ. ಹೀಗಾಗಿ ಜಾಮೀನು ಪಡೆಯಲು ಸಲ್ಮಾನ್ ಅರ್ಹರಾಗಿದ್ದಾರೆ.

ಜೈಲಿನ ಬಾಗಿಲಿನ ತನಕ ಬಂದಿದ್ದ ಸಲ್ಮಾನ್ ಖಾನ್ ಅವರನ್ನು ಜೈಲಿಗೆ ಕಳಿಸುವಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಸಂದೀಪ್ ಶಿವಾಡೆ ವಿಫಲರಾಗಿದ್ದಾರೆ. [ಹಿಟ್ ಅಂಡ್ ರನ್ ಕೇಸ್ ಟೈಮ್ ಲೈನ್]

ಸಲ್ಮಾನ್ ಖಾನ್ ಅವರಿಗೆ ಶಿಕ್ಷೆ ವಿಧಿಸಲು ಸೆಷನ್ಸ್ ಕೋರ್ಟ್ ಜಡ್ಜ್ ಡಬ್ಲ್ಯೂಡಿ ದೇಶಪಾಂಡೆ ಪರಿಗಣಿಸಿದ ಅಂಶಗಳನ್ನು ಎತ್ತಿ ಹಿಡಿಯುವಲ್ಲಿ ಸರ್ಕಾರಿ ವಕೀಲರು ವೈಫಲ್ಯ ಕಂಡಿದ್ದರಿಂದ ಹೈಕೋರ್ಟ್ ಜಡ್ಜ್ ಅಭಯ್ ತಿಪ್ಸೆ ಅವರು ಸಲ್ಮಾನ್ ಅವರಿಗೆ ಜಾಮೀನು ನೀಡಲು ಅಡ್ಡಿಯಿಲ್ಲ.[ಸಲ್ಮಾನ್ ಗೆ ರಕ್ಷೆ ನೀಡಿದ 'ಬೀಯಿಂಗ್ ಹ್ಯೂಮನ್']

Hit and Run Case : HC suspends Session courts sentence on Salman Khan

ಸಲ್ಮಾನ್ ಏನು ಮಾಡಬಹುದು?: ಸಲ್ಮಾನ್ ಖಾನ್ ಅವರು ಈಗ ಮತ್ತೊಮ್ಮೆ ಜಾಮೀನಿಗಾಗಿ ಅರ್ಜಿ ಹಾಕಲು ಸೆಷನ್ಸ್ ಕೋರ್ಟಿಗೆ ತೆರಳಬೇಕು. ಶಿಕ್ಷೆ ಅದೇಶ ಅಮಾನತುಗೊಂಡಿರುವುದರಿಂದ ಕೋರ್ಟಿನ ಮುಂದೆ ಶರಣಾಗತರಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. [ಹೈಕೋರ್ಟ್ ಅರ್ಜಿ ವಿಚಾರಣೆ ಅಪ್ಡೇಟ್ಸ್]

ಈಗ ನಡುವೆ ಸಲ್ಮಾನ್ ಖಾನ್ ಗೆ ತ್ವರಿತಗತಿಯಲ್ಲಿ ಮಧ್ಯಂತರ ಜಾಮೀನು ಸಿಕ್ಕ ವಿಷಯ ಈಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಸಲ್ಮಾನ್ ಗೆ ನೀಡಿರುವ ಮಧ್ಯಂತರ ಜಾಮೀನು ಅವಧಿ ಮುಗಿದಿದ್ದು, ಹೈಕೋರ್ಟಿನಲ್ಲಿ ಪೂರ್ಣ ಪ್ರಮಾಣದ ಜಾಮೀನು ನೀಡುವಂತೆ ಹಾಕಿರುವ ಅರ್ಜಿ ವಿಚಾರಣೆ ನಡೆದು, ಶುಭ ಸುದ್ದಿ ಸಿಕ್ಕಿದೆ. ಅದರೆ, ಸಂಜೆ ವೇಳೆಗೆ ಜಾಮೀನು ಸಿಕ್ಕರೂ ಖುಲಾಸೆಯಂತೂ ಸಾಧ್ಯವೇ ಇಲ್ಲ.[ಸಲ್ಲೂಗೆ 'ದೇವರಾದ' ಸಾಳ್ವೆ]

ಸಲ್ಮಾನ್ ಗೆ ಜಾಮೀನು, ಕಮಲ್ ಕಮಾಲ್

ಸಲ್ಮಾನ್ ಗೆ ಜಾಮೀನು, ಕಮಲ್ ಕಮಾಲ್

ಘಟನೆ ದಿನ ಸಲ್ಮಾನ್ ಜೊತೆ ಕಾರಿನಲ್ಲಿದ್ದ ಗಾಯಕ ಲಂಡನ್ ನಿವಾಸಿ ಕಮಲ್ ಖಾನ್ ಅವರು ಸಲ್ಮಾನ್ ಅವರ ಪಾಲಿಗೆ ದೇವರಾಗಿದ್ದಾರೆ. ಕಮಲ್ ಖಾನ್ ಅವರ ವಿಚಾರಣೆ ಏಕೆ ಇನ್ನೂ ನಡೆಸಿಲ್ಲ ಎಂದು ಡಿಫೆನ್ಸ್ ಅವರಿಗೆ ಜಡ್ಜ್ ತಿಪ್ಸೆ ಕೇಳಿದ ಪ್ರಶ್ನೆಗೆ ಡಿಫೆನ್ಸ್ ಲಾಯರ್ ಶಿವಾಡೆ ಬಳಿ ಉತ್ತರವಿರಲಿಲ್ಲ. ಈ ಅಂಶ ಸಲ್ಮಾನ್ ಗೆ ವರವಾಗಿ ಅವರ ಶಿಕ್ಷೆ ಅಮಾನತು ಹಾಗೂ ಜಾಮೀನು ದೊರಕಿಸಿಕೊಡಲು ನೆರವಾಯಿತು.

ಶರಣಾಗತರಾಗಿ ಜಾಮೀನು ಪಡೆಯಲಿ

ಶರಣಾಗತರಾಗಿ ಜಾಮೀನು ಪಡೆಯಲಿ, ಮದ್ಯ ಸೇವಿಸಿದ್ದು ಸಾಬೀತಾಗಿದೆ. ಅದರೆ, ಕಾರು ಚಲಾಯಿಸಿದ್ದರ ಬಗ್ಗೆ ಪುರಾವೆ ಇಲ್ಲ ಇದನ್ನು ಐಪಿಸಿ ಸೆಕ್ಷನ್ 304 II ಅಡಿಯಲ್ಲಿ ಏಕೆ ಸೇರಿಸಬೇಕು ಎಂದು ಜಡ್ಜ್ ತಿಪ್ಸೆ ಪ್ರಶ್ನಿಸಿದರು.

ಸಲ್ಮಾನ್ ಬೇಲ್ ಪಡೆಯಬಹುದು

ಸಲ್ಮಾನ್ ಅವರು ಈಗ ಸೆಷನ್ಸ್ ಕೋರ್ಟಿಗೆ ಶರಣಾಗಿ ಪೂರ್ಣ ಪ್ರಮಾಣದ ಜಾಮೀನು ಪಡೆಯಬಹುದು ಎಂದು ತೀರ್ಪು ನೀಡಿದ ಬಾಂಬೆ ಹೈಕೋರ್ಟ್ ಜಡ್ಜ್ ಅಭಯ್ ತಿಪ್ಸೆ.

ಪಾಸ್ ಪೋರ್ಟ್ ನೀಡುವಂತೆ ಕೋರಿಕೆ

ಭಜರಂಗಿ ಭಾಯಿ ಜಾನ್ ಸೇರಿದಂತೆ ಅನೇಕ ಚಿತ್ರಗಳ ಶೂಟಿಂಗ್ ಗಾಗಿ ಲಂಡನ್ ಇನ್ನಿತರ ದೇಶಕ್ಕೆ ಸಲ್ಮಾನ್ ತೆರಳಬೇಕಾಗುತ್ತದೆ. ಹೀಗಾಗಿ ಪಾಸ್ ಪೋರ್ಟ್ ನೀಡುವಂತೆ ಕೇಳಿಕೊಂಡ ಸಲ್ಮಾನ್ ಪರ ವಕೀಲ ಅಮಿತ್ ದೇಸಾಯಿ.

ವಕೀಲೆ ಅಭಾ ಸಿಂಗ್ ಹೇಳಿಕೆ

ವಕೀಲೆ ಅಭಾ ಸಿಂಗ್ ಮಾತನಾಡಿ ಕಮಲ್ ಆರ್ ಖಾನ್ ಅವರ ವಿಚಾರಣೆ, ಹೇಳಿಕೆ ಪಡೆಯುವ ವಿಷಯದಲ್ಲಿ ಡಿಫೆನ್ಸ್ ಮಾಡಿದ ದೋಷ ಸಲ್ಮಾನ್ ಗೆ ವರವಾಗಿದೆ. ಅಗತ್ಯ ಬಿದ್ದರೆ ವಿದೇಶದಿಂದ ಕಮಲ್ ಖಾನ್ ರನ್ನು ಕರೆಸಿಕೊಳ್ಳಲಾಗುವುದು ಎಂದಿದ್ದಾರೆ.

English summary
Hit and Run Case : Salman Khan can get bail has to execute fresh bond. from High Court Session Court sentence suspended by HC Judge Abhay Thipse today(May.8).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X