ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಸೋ ದೊಣ್ಣೆಯಿಂದ ಪಾರಾದ ಸಲ್ಮಾನ್ ಖಾನ್

|
Google Oneindia Kannada News

ಮುಂಬೈ, ಮೇ 8 : ಮುಂಬೈ ಸೆಷನ್ಸ್ ಕೋರ್ಟ್ 2002ರ ಹಿಟ್ ಅಂಡ್ ರನ್ ಪ್ರಕರಣದಲ್ಲಿ ನಟ ಸಲ್ಮಾನ್ ಖಾನ್ ಅವರಿಗೆ ವಿಧಿಸಿದ್ದ 5 ವರ್ಷದ ಜೈಲು ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಅಮಾನತುಗೊಳಿಸಿದೆ. ಶುಕ್ರವಾರ ಸಲ್ಮಾನ್ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಈ ಆದೇಶ ನೀಡಿದೆ.

ಮೇ 6 ರ ಬುಧವಾರ ಮುಂಬೈ ಸೆಷೆನ್ಸ್ ಕೋರ್ಟ್ ಸಲ್ಮಾನ್‌ ಖಾನ್ ಅವರಿಗೆ 5 ವರ್ಷದ ಜೈಲು ಶಿಕ್ಷೆ ಮತ್ತು 25 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಸಲ್ಮಾನ್‌ ಖಾನ್ ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಕೋರ್ಟ್ ಎರಡು ದಿನಗಳ ಮಧ್ಯಂತರ ಜಾಮೀನು ನೀಡಿತ್ತು. [ಸಲ್ಮಾನ್ ಜೈಲು ತಪ್ಪಿಸಿಕೊಂಡಿದ್ದು ಹೇಗೆ?]

ಶುಕ್ರವಾರ ಬಾಂಬೆ ಹೈಕೋರ್ಟ್‌ ನ್ಯಾಯಮೂರ್ತಿ ಅಭಯ್ ತಿಪ್ಸೆ ಅವರು ಸಲ್ಮಾನ್ ಖಾನ್ ಜಾಮೀನು ಅರ್ಜಿ ವಿಚಾರಣೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ಶಿಕ್ಷೆಯನ್ನು ಅಮಾನತ್ತಿನಲ್ಲಿಟ್ಟು, ಸೆಷೆನ್ಸ್ ಕೋರ್ಟ್‌ಗೆ ಶರಣಾಗಿ ಜಾಮೀನು ಪಡೆಯುವಂತೆ ಆದೇಶ ನೀಡಿದರು. [ಎರಡು ಹೊತ್ತು ಊಟಕ್ಕೂ ಕಷ್ಟವಾಗಿದೆ : ಸತ್ತ ನೂರುಲ್ಲಾ ಪತ್ನಿ]

Salman

ಸಮಯ 5.51 : ಜಾಮೀನು ಪಡೆದು ನಿವಾಸಕ್ಕೆ ವಾಪಸ್ ಹೊರಟ ಸಲ್ಮಾನ್ ಖಾನ್

ಸಮಯ 5.41 : ಬಾಂಬೆ ಹೈಕೋರ್ಟ್ ಆದೇಶದಂತೆ 30 ಸಾವಿರ ರೂ. ವೈಯಕ್ತಿಕ ಬಾಂಡ್‌ಗೆ ಸಹಿ ಹಾಕಿ ಸಲ್ಮಾನ್ ಜಾಮೀನು ಪ್ರಕ್ರಿಯೆಗಳನ್ನು ಮುಗಿಸಬೇಕಾಗಿದೆ.

ಸಮಯ 5.30 : ಬಾಂಬೆ ಹೈಕೋರ್ಟ್ ಆದೇಶದಂತೆ ಕೋರ್ಟ್‌ಗೆ ಶರಣಾದ ಸಲ್ಮಾನ್ ಖಾನ್

ಸಮಯ 12.50 : ಸಲ್ಮಾನ್ ಖಾನ್ ಬಾಂದ್ರಾ ನಿವಾಸದ ಮುಂದೆ ಅಭಿಮಾನಿಗಳು ಸಂಭ್ರಮಾಚರಣೆ ನಡೆಸುತ್ತಿದ್ದಾರೆ

ಸಮಯ 12.37 : ಸಲ್ಮಾನ್ ಸೆಷನ್ಸ್ ಕೋರ್ಟ್‌ಗೆ ಶರಣಾಗಿ ಷರತ್ತು ಬದ್ಧ ಜಾಮೀನು ಪಡೆಯಬೇಕು

ಸಮಯ 12.35 : ಸಲ್ಮಾನ್ ಖಾನ್ ಶಿಕ್ಷೆಯನ್ನು ಅಮಾನತ್ತಿನಲ್ಲಿಟ್ಟ ಬಾಂಬೆ ಹೈಕೋರ್ಟ್, ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ

ಸಮಯ 12.27 : ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸುವಾಗ ಅವರನ್ನು ಜೈಲಿಗೆ ಏಕೆ ಕಳಿಸಬೇಕು?, ಶಿಕ್ಷೆಯನ್ನು ಅಮಾನತ್ತಿನಲ್ಲಿಡಲು ನಿಮ್ಮ ವಿರೋಧವೇಕೆ? ಎಂದು ಜಡ್ಜ್ ಅಭಯ್ ತಿಪ್ಸೆ ಸಂದೀಪ್ ಶಿಂಧೆ ಅವರನ್ನು ಪ್ರಶ್ನಿಸಿದರು

ಸಮಯ 12.15 : ಸಲ್ಮಾನ್‌ ಖಾನ್‌ಗೆ ಜಾಮೀನು ದೊರೆಯಲಿ ಎಂದು ಅಭಿಮಾನಿಗಳು ವಿಶೇಷ ಪೂಜೆ ನಡೆಸುತ್ತಿದ್ದಾರೆ. ವಾರಣಾಸಿಯಲ್ಲಿ ಪೂಜೆ ನಡೆಯುತ್ತಿದೆ.

ಸಮಯ 12.09 : ಕಮಲ್ ಖಾನ್ ಈಗ ಬ್ರಿಟನ್‌ನಲ್ಲಿ ನೆಲೆಸಿದ್ದು, ಅಲ್ಲಿಯ ಪೌರತ್ವ ಪಡೆದುಕೊಂಡಿದ್ದಾರೆ. ಆದ್ದರಿಂದ ಅವರ ವಿಚಾರಣೆ ನಡೆಸಿಲ್ಲ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಸಂದೀಪ್ ಶಿಂಧೆ ವಾದ ಮಂಡಿಸಿದರು [ಸಲ್ಮಾನ್ ಗುದ್ದೋಡು ಪ್ರಕರಣದ timeline]

ಸಮಯ 12 ಗಂಟೆ : ಸಲ್ಮಾನ್ ಪರ ವಕೀಲ ಅಮಿತ್ ದೇಸಾಯಿ ವಾದ ಮಂಡನೆ ಮುಕ್ತಾಯ

ಸಮಯ 11.58 : ಬಾಂಬೆ ಹೈಕೋರ್ಟ್‌ ಆವರಣದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಸಲ್ಮಾನ್ ಖಾನ್ ಅಭಿಮಾನಿ

ಸಮಯ 11.42 : ಘಟನೆ ನಡೆದ ದಿನ ಸಲ್ಮಾನ್ ಖಾನ್ ಕಾರು ಓಡಿಸುತ್ತಿದ್ದರು ಎಂಬುದನ್ನು ಸಾಬೀತು ಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಅಮಿತ್ ದೇಸಾಯಿ ವಾದ ಮಂಡಿಸಿದರು

ಸಮಯ 11.35 : ಘಟನೆ ನಡೆದ ದಿನ ಸಲ್ಮಾನ್ ಸ್ನೇಹಿತ ಕಮಲ್ ಖಾನ್ ಕಾರಿನಲ್ಲಿದ್ದರು. ಆದರೆ, ಸೆಷನ್ಸ್ ಕೋರ್ಟ್ ಅವರ ಹೇಳಿಕೆಯನ್ನು ಪಡೆದಿಲ್ಲ ಎಂದು ಅಮಿತ್ ದೇಸಾಯಿ ವಾದ ಮಂಡಿಸಿದರು

ಸಮಯ 11.30 : ಸಲ್ಮಾನ್ ಖಾನ್ ಬಾಡಿಗಾರ್ಡ್ ರವೀಂದ್ರ ಪಾಟೀಲ್ ನೀಡಿರುವ ಹೇಳಿಕೆ ಪರಿಶೀಲಿಸುತ್ತಿರುವ ನ್ಯಾಯಮೂರ್ತಿಗಳು

Salman Khan

ಸಮಯ 11.23 : ಸಲ್ಮಾನ್ ಖಾನ್ ಅವರಿಗೆ ಮುಂಬೈ ಸೆಷನ್ಸ್ ಕೋರ್ಟ್‌ ನೀಡಿರುವ ಶಿಕ್ಷೆಯನ್ನು ಅಮಾನತ್ತಿನಲ್ಲಿಡಬೇಕು ಎಂದು ಅಮಿತ್ ದೇಸಾಯಿ ವಾದ ಮಂಡಿಸಿದರು.

ಸಮಯ 11.20 : ಸಲ್ಮಾನ್‌ ಖಾನ್‌ಗೆ ಜಾಮೀನು ನೀಡಬಾರದು ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಸಂದೀಪ್ ಶಿಂಧೆ ಕೋರ್ಟ್‌ಗೆ ಆಕ್ಷೇಪಣೆ ಸಲ್ಲಿಸಿದರು

ಸಮಯ 11.14 : ನ್ಯಾಯಮೂರ್ತಿ ಅಭಯ್ ತಿಪ್ಸೆ ಅವರ ಪೀಠದಲ್ಲಿ ಸಲ್ಮಾನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಆರಂಭ

ಸಮಯ 10.45 : ಸಲ್ಮಾನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಹಿನ್ನಲೆಯಲ್ಲಿ ಬಾಂಬೆ ಹೈಕೋರ್ಟ್‌ ಮುಂದೆ ಫುಟ್‌ಪಾತ್ ವ್ಯಾಪಾರಿಗಳು ಪ್ರತಿಭಟನೆ ಆರಂಭಿಸಿದ್ದಾರೆ

ಸಮಯ 10.31 : ಸಲ್ಮಾನ್ ಖಾನ್ ಪ್ರಕರಣದ ಅರ್ಜಿಯ ವಿಚಾರಣೆ 11.15ಕ್ಕೆ ಆರಂಭವಾಗುವ ಸಾಧ್ಯತೆ ಇದೆ

ಸಮಯ 10.14 : ಪಬ್ಲಿಕ್ ಪ್ರಾಸಿಕ್ಯೂಟರ್ ಸಂದೀಪ್ ಶಿಂಧೆ ಬಾಂಬೆ ಹೈಕೋರ್ಟ್‌ಗೆ ಆಗಮಿಸಿದ್ದಾರೆ

ಸಮಯ 10 ಗಂಟೆ : ಸಲ್ಮಾನ್ ಪರ ಹೈಕೋರ್ಟ್‌ನಲ್ಲಿ ಹರೀಶ್ ಸಾಳ್ವೆ ಬದಲು ಅಮಿತ್ ದೇಸಾಯಿ ವಾದ ಮಂಡಿಸಲಿದ್ದಾರೆ

ಸಮಯ 9.30 : ಸಲ್ಮಾನ್ ಖಾನ್ ಜಾಮೀನು ಅರ್ಜಿ ವಿಚಾರಣೆಯ ಹಿನ್ನಲೆಯಲ್ಲಿ ಬಾಂಬೆ ಹೈಕೋರ್ಟ್ ಸುತ್ತ-ಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

English summary
Bombay high court on Friday, May 8, 2015 suspended Salman Khan’s jail term. Salman Khan convicted and sentenced to 5 years imprisonment in a 2002 hit-and-run case. Justice Abhay Thipsay suspended the jail term after hearing arguments from both sides. Here is live updates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X