ನಟಿ ಊರ್ವಶಿ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್!
ಮುಂಬೈ, ಮಾರ್ಚ್ 29: ಇಲ್ಲಿನ ಬಾಂದ್ರಾದ ನಿವಾಸಿಯೊಬ್ಬ, ವ್ಯಕ್ತಿಯೊಬ್ಬ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ಮಾಡಿಸಿಕೊಂಡು, ಹೋಟೆಲ್ ರೂಮ್ ಬುಕ್ ಮಾಡಿದ ಘಟನೆ ನಡೆದಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ |ಚುನಾವಣೆಯ ಮುಖ್ಯ ದಿನಾಂಕಗಳು
ಫೈವ್ ಸ್ಟಾರ್ ಹೋಟೆಲ್ ನಲ್ಲಿ ರೂಮ್ ಬುಕ್ ಮಾಡಿದ ಅನಾಮಿಕ ವ್ಯಕ್ತಿಯ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಊರ್ವಶಿ ಅವರು ಇತ್ತೀಚೆಗೆ ಬಾಂದ್ರಾದ ಫೈವ್ ಸ್ಟಾರ್ ಹೋಟೆಲ್ ಗೆ ಭೇಟಿ ನೀಡಿದ್ದರು. ಅವರ ಹೆಸರಲ್ಲಿ ರೂಮ್ ಬುಕ್ ಆಗಿದ್ದು ನಿಜ ಎಂದು ಹೋಟೆಲ್ ಸಿಬ್ಬಂದಿ ತಿಳಿಸಿದ್ದಾರೆ. ಆದರೆ, ನಟಿ ಊರ್ವಶಿ ಅಥವಾ ಅವರ ಸೆಕ್ರೆಟರಿಯಾಗಲಿ ಬುಕ್ಕಿಂಗ್ ಮಾಡಿಲ್ಲ ಎಂದು ತನಿಖೆ ವೇಳೆ ತಿಳಿದು ಬಂದಿದೆ.

ಊರ್ವಶಿ ರೌಟೇಲಾ ಅವರ ಹೆಸರು, ಫೋಟೋ ಬಳಸಿ ಹೋಟೆಲ್ ಬುಕ್ಕಿಂಗ್ ಮಾಡಿದ್ದರು. ಆದರೆ, ಬುಕ್ಕಿಂಗ್ ವೇಳೆ ಆ ವ್ಯಕ್ತಿ ನೀಡಿದ್ದ ಆಧಾರ್ ಸಂಖ್ಯೆ ಬಗ್ಗೆ ಅನುಮಾನ ವ್ಯಕ್ತವ್ವಾದ ಹಿನ್ನಲೆಯಲ್ಲಿ ಹೋಟೆಲ್ ಸಿಬ್ಬಂದಿಗಳು, ಊರ್ವಶಿ ಅವರನ್ನು ಈ ಬಗ್ಗೆ ಕೇಳಿದಾಗ, ಸತ್ಯಾಂಶ ಹೊರಬಂದಿದೆ.
ಅನಾಮಿಕ ವ್ಯಕ್ತಿಯ ವಿರುದ್ಧ ಐಪಿಸಿ ಸೆಕ್ಷನ್ 420, 468 ಅನ್ವಯ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ರೂಮ್ ಬುಕ್ಕಿಂಗ್ ಮಾಡುವಾಗ ಐಡೆಂಡಿಟಿ ಕಾರ್ಡ್ ಕೇಳಲಾಗುತ್ತದೆ. 12 ಅಂಕಿಗಳ ಆಧಾರ್ ಸಂಖ್ಯೆಗಳನ್ನು ನೀಡಬೇಕಾಗುತ್ತದೆ. (ಪಿಟಿಐ)












Click it and Unblock the Notifications