ಕ್ರಿಮಿನಲ್ ಪ್ರಕರಣ ಬಹಿರಂಗ ಪಡಿಸದ ಕಾರಣ ಫಡ್ನವೀಸ್ ಗೆ ಕೋರ್ಟ್ ಸಮನ್ಸ್
ಮುಂಬೈ, ನವೆಂಬರ್ 29: 2019 ರ ಮಹಾರಾಷ್ಟ್ರ ಚುನಾವಣಾ ಅಫಿಡವಿಟ್ ನಲ್ಲಿ 2 ಕ್ರಿಮಿನಲ್ ಪ್ರಕರಣಗಳನ್ನು ಬಹಿರಂಗಪಡಿಸದ ಕಾರಣ ಫಡ್ನವೀಸ್ ಅವರನ್ನು ನಾಗ್ಪುರ ನ್ಯಾಯಾಲಯವು ಕರೆದಿದೆ.
ಚುನಾವಣಾ ಸಂದರ್ಭದಲ್ಲಿ ತನ್ನ ವಿರುದ್ದದ ಎರಡು ಕ್ರಮಿನಲ್ ವಿಷಯಗಳ ಬಗ್ಗೆ ಮಾಹಿತಿಯನ್ನು ಮರೆಮಾಚಲಾಗಿದೆ ಎಂದು ಆರೋಪಿಸಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ನ್ಯಾಯಾಂಗವು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ನೀಡಿದ ಸಮನ್ಸ್ ಅನ್ನು ಗುರುವಾರ ನೀಡಿದ್ದಾರೆ.
ನಾಗ್ಪುರದ ಶಾಸಕರಾಗಿರುವ ಫಡ್ನವೀಸ್ ಅವರ ಇಲ್ಲಿನ ಮನೆಗೆ ಸಮನ್ಸ್ ನೀಡಲಾಗಿದೆ ಎಂದು ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಹಾರಷ್ಟ್ರದಲ್ಲಿ ಶಿವಸೇನೆ ನೇತೃತ್ವದಲ್ಲಿ ಹೊಸ ಸರ್ಕಾರ ಪ್ರಮಾಣವಚನ ಸ್ವೀಕರಿಸಿದ ದಿನವೇ ಈ ಬೆಳವಣಿಗೆ ಸಂಭವಿಸಿದೆ.

ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ನವೆಂಬರ್ 1 ರಂದು ಬಿಜೆಪಿ ನಾಯಕನ ವಿರುದ್ದ ಅಫಿಡಿಟ್ ನಲ್ಲಿ ಬಹಿರಂಗಪಡಿಸದ ಆರೋಪದ ಕುರಿತು ಕ್ರಿಮಿನಲ್ ಮೊಕದ್ದಮೆ ಕೋರಿ ಅರ್ಜಿಯನ್ನು ಸಲ್ಲಿಸಲಾಗಿತ್ತು.
ನವೆಂಬರ್ 4 ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಈ ಪ್ರಕರಣದ ಸಾರಾಂಶವನ್ನು ಕ್ರಿಮಿನಲ್ ಪ್ರಕರಣವಾಗಿ ನಡೆಸಲಾಗುವುದು ಎಂದು ತೀಳಿಸಿತ್ತು. ಜನ ಪ್ರಾತಿನಿದ್ಯ ಕಾಯ್ದೆ 1951 ರ ಸೆಕ್ಷನ್ 125 ಎ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವನ್ನಾಗಿ ಪರಿಗಣಣಿಸಲಾಗುವುದು ಎಂದು ಮ್ಯಾಜಿಸ್ಟ್ರೇಟ್ ಎಸ್ ಡಿ ಮೆಹ್ತಾ ಹೇಳಿದ್ದಾರೆ.












Click it and Unblock the Notifications