Breaking: ದಾದರ್ ಬಳಿ ಹಳಿ ತಪ್ಪಿದ ದಾದರ್- ಪುದುಚೇರಿ ಎಕ್ಸ್‌ಪ್ರೆಸ್ ರೈಲು
ಮುಂಬೈ, ಏಪ್ರಿಲ್ 15: ದಾದರ್- ಪುದುಚೇರಿ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 11005ರ 3 ಬೋಗಿಗಳು ಮಾತುಂಗಾ ಮತ್ತು ದಾದರ್ ನಿಲ್ದಾಣದ ನಡುವೆ ಹಳಿ ತಪ್ಪಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಇಲ್ಲಿಯವರೆಗೆ ಯಾವುದೇ ಪ್ರಾಣಹಾನಿ ಮತ್ತು ಗಾಯಗೊಂಡ ಪ್ರಯಾಣಿಕರು ವರದಿಯಾಗಿಲ್ಲ. ರೈಲು ಹಳಿ ತಪ್ಪಲು ಕಾರಣ ಇನ್ನೂ ತಿಳಿದುಬಂದಿಲ್ಲ. ರೈಲ್ವೆ ಇಲಾಖೆಯ ಸಂಬಂಧಪಟ್ಟ ತಂಡಗಳು ಪರಿಸ್ಥಿತಿಯನ್ನು ಪರಿಶೀಲಿಸುತ್ತಿವೆ. ವರದಿಗಳ ಪ್ರಕಾರ, ಹಳಿತಪ್ಪಿದ ಮೂರು ಬೋಗಿಗಳು ರೈಲಿನ ಹಿಂಭಾಗದವುಗಳಾಗಿವೆ.
ರೈಲ್ವೆ ಕಂಟ್ರೋಲ್ ರೂಂನಿಂದ ಬಂದ ಮಾಹಿತಿಯ ಪ್ರಕಾರ, 11005 ರೈಲಿನ 3 ಬೋಗಿಗಳು ರಾತ್ರಿ 9.45ಕ್ಕೆ ದಾದರ್ ನಿಲ್ದಾಣದ ಬಳಿ ಹಳಿತಪ್ಪಿವೆ. ಶೀಘ್ರ ಮರುಸ್ಥಾಪನೆಗಾಗಿ ರೈಲು ಸ್ಥಳಾಂತರ ಕಾರ್ಯ ಭರದಿಂದ ಸಾಗುತ್ತಿದೆ.

Recommended Video
ರೈಲ್ವೆ ಆಡಳಿತದೊಂದಿಗೆ ಸಮನ್ವಯದಲ್ಲಿ, ಹಿರಿಯ ಜಿಆರ್‌ಪಿ ಮುಂಬೈ ರೈಲ್ವೆ ಅಧಿಕಾರಿಗಳು ರೈಲಿನಲ್ಲಿದ್ದ ಪ್ರಯಾಣಿಕರ ಸಹಾಯಕ್ಕಾಗಿ ವ್ಯವಸ್ಥೆ ಮಾಡುತ್ತಿದ್ದಾರೆ. ಪ್ರಯಾಣಿಕರು ಸಹಕರಿಸಲು ವಿನಂತಿಸಲಾಗಿದೆ ಮತ್ತು ತುರ್ತು ಸಂದರ್ಭಗಳಲ್ಲಿ 1512 ಕರೆ ಮಾಡಲು ಜಿಆರ್‌ಪಿ ಮುಂಬೈ ರೈಲ್ವೆ ಅಧಿಕಾರಿಗಳು ಕೋರಿದ್ದಾರೆ.













Click it and Unblock the Notifications