ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಲ ಮರುಪಾವತಿಗೆ 60 ದಿನ ಕಾಲಾವಕಾಶ: ಆರ್ ಬಿ ಐ

ಗೃಹ ಸಾಲ, ವಾಹನ ಸಾಲ, ಬೆಳೆ ಸಾಲ ಮರುಪಾವತಿ ಮಾಡಬೇಕಾಗಿರುವವರಿಗೆ 60 ದಿನ ಕಾಲವಕಾಶ ನೀಡಿ ಭಾರತೀಯ ರಿಸರ್ವ್ ಬ್ಯಾಂಕ್ ಆದೇಶ ಹೊರಡಿಸಿದೆ.

By Prithviraj
|
Google Oneindia Kannada News

ಮುಂಬೈ, ನವೆಂಬರ್, 21: ನೋಟು ನಿಷೇಧ ಪರಿಣಾಮ ಸಾರ್ವಜನಿಕರು ಹಣದ ಸಮಸ್ಯೆ ಎದುರಿಸುತ್ತಿರುವುದರಿಂದ ರೂ. ಕೋಟಿ ವರೆಗಿನ ಗೃಹ, ವಾಹನ, ಬೆಳೆ ಮತ್ತಿತರರ ಸಾಲ ಮರುಪಾವತಿಗೆ 60 ದಿನ ಕಾಲವಕಾಶ ನೀಡಿ ಭಾರತೀಯ ರಿಸರ್ವ್ ಬ್ಯಾಂಕ್ ಸೋಮವಾರ ಆದೇಶ ಹೊರಡಿಸಿದೆ.

ಈ ಆದೇಶವು ನವೆಂಬರ್ 1 ರಿಂದ ಡಿಸೆಂಬರ್ 31ರ ನಡುವಿನ ಅವಧಿಯಲ್ಲಿ ಸಾಲ ಮರುಪಾವತಿ ಮಾಡಬೇಕಾಗಿರುವವರಿಗೆ ಮಾತ್ರ ಅನ್ವಯವಾಗುತ್ತದೆ ಎಂದು ಆರ್ ಬಿ ಐ ಸ್ಪಷ್ಟಪಡಿಸಿದೆ.[ನೋಟು ಬ್ಯಾನ್ : ದಿನಭತ್ಯೆಗಾಗಿ ಕಾದಿರುವ ಇಂಗ್ಲೆಂಡ್ ಕ್ರಿಕೆಟ್ ತಂಡ]

Borrowers get additional 60 days to repay loans: RBI

ಅಷ್ಟೇ ಅಲ್ಲದೆ ಪ್ರತಿ ತಿಂಗಳು ಸಾಲ ಮರುಪಾವತಿ ಮಾಡುತ್ತಿದ್ದ ಮತ್ತು ಸಕ್ರಿಯವಾದ ಸಾಲದ ಖಾತೆ ಹೊಂದಿರುವವರಿಗೆ ಮಾತ್ರ ಈ ಆದೇಶ ಅನ್ವಯಿಸುತ್ತದೆ ಎಂದು ಆರ್ ಬಿ ಐ ಹೇಳಿದೆ.

ಸಕ್ರಿಯವಾದ ಬಂಡವಾಳ ಖಾತೆ ಹೊಂದಿದ್ದು, ಯಾವುದಾದರೂ ಬ್ಯಾಂಕ್ ಮೂಲಕ ಒಂದು ಕೋಟಿರೂ. ಗಿಂತಲೂ ಕಡಿಮೆ ಮೊತ್ತದ ಸಾಲ ಪಡೆದಿರುವ ಯಾವುದೇ ಸಾಲಗಾರರಿಗೆ ಈ ಆದೇಶ ಅನ್ವಯವಾಗುತ್ತದೆ.

ಅಷ್ಟೇ ಅಲ್ಲದೆ. ಒಂದು ಕೋಟಿಗೂ ಕಡಿಮೆ ಮೊತ್ತದ ವ್ಯಾಪರ ಸಾಲ, ವೈಯಕ್ತಿಕ ಸಾಲ, ಹೊಂದಿರುವವರೂ ಸಹ ಈ ಆದೇಶ ಅನ್ವಯವಾಗುತ್ತದೆ ಎಂದು ಆರ್ ಬಿ ಐ ಹೇಳಿದೆ.

English summary
In view of cash crunch being faced by borrowers, the RBI on Monday provided additional 60 days for repayment of housing, car, farm and other loans worth up to Rs 1 crore. This is applicable to loans payable between November 1 and December 31, the RBI said in a notification.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X