• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ನಿ ಶ್ರೀದೇವಿ ಬಗ್ಗೆ ಭಾವುಕರಾಗಿ ಪತ್ರ ಬರೆದ ಬೋನಿಕಪೂರ್

|
Google Oneindia Kannada News

ಮುಂಬೈ, ಮಾರ್ಚ್ 01: "ಈ ಜಗತ್ತಿಗೆ ಶ್ರೀದೇವಿ ಚಾಂದಿನಿ ಇರಬಹುದು. ಆದರೆ ನನ್ನ ಪ್ರೀತಿ, ನನ್ನ ಸಂಗಾತಿ, ನನ್ನ ಕುಟುಂಬಕ್ಕೆ ಆಕೆ ರಕ್ಷಾ ರೇಖೆ" ಎಂದು ಭಾವುಕರಾಗಿ ಪತ್ರ ಬರೆದಿದ್ದಾರೆ ಶ್ರೀದೇವಿ ಅವರ ಪತಿ ಬೋನಿ ಕಪೂರ್.

ಶ್ರೀದೇವಿ ಪಂಚಭೂತಗಳಲ್ಲಿ ಲೀನರಾಗಿ, ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಚಾಂದಿನಿಯಾಗಿ ಉಳಿದಿದ್ದಾರೆ. ಫೆಬ್ರವರಿ 24 ರಂದು ದುಬೈನ ಹೊಟೇಲ್ ವೊಂದರ ಬಾತ್ ಟಬ್ಬಿನಲ್ಲಿ ಮುಳುಗಿ ಇಹಲೋಕ ತ್ಯಜಿಸಿದ ಚಾಂದಿನಿ ಶ್ರೀದೇವಿ ಇನ್ನು ನೆನಪು ಮಾತ್ರವೆಂದರೆ ನಂಬುವುದು ಕಷ್ಟ. ಭಾರತೀಯ ಚಿತ್ರರಂಗದ ಮೊಟ್ಟ ಮೊದಲ ಮಹಿಳಾ ಸೂಪರ್ ಸ್ಟಾರ್ ಎಂಬ ಖ್ಯಾತಿಯ ಶ್ರೀದೇವಿ ಅವರ ಅಂತಿಮ ಸಂಸ್ಕಾರ ನಿನ್ನೆ(ಫೆ.28) ಮುಂಬೈಯಲ್ಲಿ ನಡೆದಿದೆ.

ಲಕ್ಷ ಲಕ್ಷ ಜನರ ಮಧ್ಯೆ ಶ್ರೀದೇವಿಗೆ ಬೋನಿ ಕಪೂರ್ ರಿಂದ ಅಂತ್ಯ ಸಂಸ್ಕಾರಲಕ್ಷ ಲಕ್ಷ ಜನರ ಮಧ್ಯೆ ಶ್ರೀದೇವಿಗೆ ಬೋನಿ ಕಪೂರ್ ರಿಂದ ಅಂತ್ಯ ಸಂಸ್ಕಾರ

ಇದುವರೆಗೂ ಪತ್ನಿಯ ನಿಧನದ ಕುರಿತು ಯಾವುದೇ ಹೇಳಿಕೆ ನೀಡಿರದ ಬೋನಿಕಪೂರ್, ಶ್ರೀದೇವಿಯವರ ಟ್ವಿಟ್ಟರ್ ಖಾತೆಯ ಮೂಲಕ ಪತ್ರವೊಂದನ್ನು ಬರೆದಿದ್ದಾರೆ. ತಮ್ಮ ಬದುಕಿನಲ್ಲಿ ಶ್ರೀದೇವಿಯವರ ಪಾತ್ರವೇನು ಎಂಬುದನ್ನು ಭಾವುಕರಾಗಿ ವಿವರಿಸಿದ್ದಾರೆ. ಆ ಪತ್ರದ ಸಾರಾಂಶ ಇಲ್ಲಿದೆ....

ಲೋಕಕ್ಕೆ ಆಕೆ ಚಾಂದಿನಿ, ನನಗೆ ಪ್ರೀತಿ!

"ಈ ಲೋಕಕ್ಕೆ ಶ್ರೀದೇವಿ ಎಂದರೆ ಚಾಂದಿನಿ, ಅತ್ಯುತ್ತಮ ನಟಿ, ಅವರ ಶ್ರೀದೇವಿ... ಆದರೆ ನನಗೆ ಆಕೆ ಎಂದರೆ ಪ್ರೀತಿ, ನನ್ನ ಸಂಗಾತಿ, ನನ್ನ ಮಕ್ಕಳಿಗೆ ತಾಯಿ, ನನ್ನ ಸ್ನೇಹಿತೆ. ನನ್ನ ಇಬ್ಬರು ಹೆಣ್ಣು ಮಕ್ಕಳಿಗೆ ಆಕೆಯೇ ಎಲ್ಲವೂ ಆಗಿದ್ದಳು! ಅವರ ಬದುಕೂ ಅವಳೇ ಆಗಿತ್ತು. ನಮ್ಮ ಸಂಸಾರದ ಶ್ರೀರಕ್ಷೆಯಾಗಿದ್ದಳು ಅವಳು"

ನಮ್ಮೊಂದಿಗೆ ನಿಂತ ಎಲ್ಲರಿಗೂ ತುಂಬು ಕೃತಜ್ಞತೆಗಳು

ನಮ್ಮೊಂದಿಗೆ ನಿಂತ ಎಲ್ಲರಿಗೂ ತುಂಬು ಕೃತಜ್ಞತೆಗಳು

"ಈ ಸಂಕಷ್ಟದ ಸಮಯದಲ್ಲಿ ನಮ್ಮೊಂದಿಗೆ ನಿಂತ ಎಲ್ಲರಿಗೂ ನಮ್ಮ ತುಂಬು ಕೃತಜ್ಞತೆಗಳು. ಅರ್ಜುನ್, ಅಂಶುಲಾ, ಖುಷಿ, ಜಾನ್ವಿ ಎಲ್ಲರ ಬೆಂಬಲಕ್ಕೆ ನಾನು ಋಣಿಯಾಗಿದ್ದೇನೆ. ನೀವು ನನ್ನ ಬದುಕಿನ ಆಧಾರ ಸ್ತಂಬಗಳು. ನಾವೆಲ್ಲರೂ ಒಂದಾಗಿ ಈ ಕೆಟ್ಟ ಘಳಿಗೆಯನ್ನು ಎದುರಿಸಲು ಪ್ರಯತ್ನಿಸೋಣ. ಆಕೆಯ ಅಗಲಿಕೆ ನಮ್ಮ ಕುಟುಂಬಕ್ಕೆ ಭರಿಸಲಾಗದ ನಷ್ಟ"

ಕಪೂರ್ ಮತ್ತು ಅಯ್ಯಪ್ಪನ್ ಕುಟುಂಬದ ಪತ್ರ

ಶ್ರೀದೇವಿ ಅವರ ಅಗಲಿಕೆಯ ಸಮಯದಲ್ಲಿ ಕಪೂರ್ ಮತ್ತು ಅಯ್ಯಪ್ಪನ್ ಕುಟುಂಬದೊಡನೆ ನಿಂತ ಎಲ್ಲರಿಗೂ ಕಪೂರ್ ಮತ್ತು ಅಯ್ಯಪ್ಪನ್ ಕುಟುಂಬ ಕೃತಜ್ಞತೆ ಅರ್ಪಿಸಿದೆ. ಕುಟುಂಬದ ಪರವಾಗಿ ನಟ ಅನಿಲ್ ಕಪೂರ್ ಅವರು ತಮ್ಮ ಟ್ವಿಟ್ಟರ್ ಖಅತೆಯಲ್ಲಿ ಪತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ.

ಆಕೆಯೊಂದು ದಂತಕತೆ

ಆಕೆಯೊಂದು ದಂತಕತೆ

ಶ್ರೀದೇವಿ ಅವರೊಂದು ದಂತಕತೆ. ಆ ಸುಂದರ ಆತ್ಮ ನಮ್ಮನ್ನು ಬಹಳ ಬೇಗ ತೊರೆದು ಹೋಗಿದೆ. ಈ ಸಮಯದಲ್ಲಿ ನಮ್ಮೊಂದಿಗೆ ನಿಂತ ಕೋಟ್ಯಂತರ ಅಭಿಮಾನಿಗಳಿಗೆ, ಸ್ನೇಹಿತರು, ಹಿತೈಷಿ ಸಂಬಂಧಿಗಳಿಗೆ ನಾವು ಸದಾ ಋಣಿ ಎಂದು ಈ ಪತ್ರದಲ್ಲಿ ಬರೆಯಲಾಗಿದೆ.

ಶ್ರೀದೇವಿ ಸತ್ತಾಗ ಸಾಂಗ್ಸ್ ಹಾಕಿದ್ರಿ, ಸನ್ನಿ ಸತ್ತಾಗ ಏನ್ಮಾಡ್ತೀರಾ?ಶ್ರೀದೇವಿ ಸತ್ತಾಗ ಸಾಂಗ್ಸ್ ಹಾಕಿದ್ರಿ, ಸನ್ನಿ ಸತ್ತಾಗ ಏನ್ಮಾಡ್ತೀರಾ?

ಅಗಲಿದ ಶ್ರೀದೇವಿಯವರು ಸರಕಾರಿ ಗೌರವಕ್ಕೆ ಅರ್ಹರಾ?ಅಗಲಿದ ಶ್ರೀದೇವಿಯವರು ಸರಕಾರಿ ಗೌರವಕ್ಕೆ ಅರ್ಹರಾ?

ಶ್ರೀದೇವಿಯನ್ನು ಬೀಳ್ಕೊಡಲು ಸಾಲುಸಾಲಾಗಿ ಬಂದ ತಾರಾ ಬಳಗಶ್ರೀದೇವಿಯನ್ನು ಬೀಳ್ಕೊಡಲು ಸಾಲುಸಾಲಾಗಿ ಬಂದ ತಾರಾ ಬಳಗ

English summary
Boney Kapoor posted a letter on Sridevi's twitter, hours after she was cremated with state honor in Mumbai. To the world she was their Chandni, but to me she was my love... He writes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X