ಕಾಣೆಯಾಗಿದ್ದ 9 ವರ್ಷದ ಬಾಲಕಿ ಶವವಾಗಿ ಪತ್ತೆ, ಅತ್ಯಾಚಾರ ಶಂಕೆ
ಮುಂಬೈ, ಏ.6: ಕಾಣೆಯಾಗಿದ್ದ 9 ವರ್ಷದ ಬಾಲಕಿ ಮುಂಬೈನ ಜುಹುವಿನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಅತ್ಯಾಚಾರ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಶಂಕಿತರನ್ನು ಬಂಧಿಸಲಾಗಿದ್ದು, ಕೊಲೆ ಮಾಡುವ ಮೊದಲು ಬಾಲಕಿ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂದು ಪಲೀಸರು ತಿಳಿಸಿದ್ದಾರೆ. ಬಾಲಕಿ ಎರಡು ದಿನಗಳಿಂದ ಕಾಣೆಯಾಗಿದ್ದಳು. ಸ್ಥಳೀಯರು ರಸ್ತೆಯನ್ನು ಬಂದ್ ಮಾಡಿ ಅತ್ಯಾಚಾರ, ಕೊಲೆ ಆರೋಪಿ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸುತ್ತಿದ್ದಾರೆ.

ಬಾಲಕಿ ಕಾಣೆಯಾಗಿರುವ ಕುರಿತು ಪೋಷಕರು ದೂರು ನೀಡಿದ್ದರು. ಇದೀಗ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications