ಇತರೆ ಕೈದಿಗಳ ಜತೆ ಬಿಡುಗಡೆಯಾಗಲಿದ್ದಾರೆ ಆರ್ಯನ್ ಖಾನ್
ಮುಂಬೈ, ಅಕ್ಟೋಬರ್ 30: ಮುಂಬೈ ತೀರದಲ್ಲಿ ಕ್ರೂಸ್ ಹಡಗಿನಲ್ಲಿ ನಿಷೇಧಿತ ಡ್ರಗ್ಸ್ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ತಿಂಗಳ ಆರಂಭದಲ್ಲಿ ಬಂಧನಕ್ಕೊಳಗಾಗಿರುವ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಇಂದು ಬಿಡುಗಡೆಗೊಳ್ಳಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಗುರುವಾರ ಬಾಂಬೆ ಹೈಕೋರ್ಟ್ ಜಾಮೀನು ನೀಡಿದ್ದರೂ ಶುಕ್ರವಾರ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಹೀಗಾಗಿ ಆರ್ಯನ್ ಖಾನ್ ಮತ್ತೊಂದು ರಾತ್ರಿ ಜೈಲಿನಲ್ಲಿಯೇ ಕಳೆಯಬೇಕಾಗಿತ್ತು.
ಬಿಡುಗಡೆ ಪ್ರಕ್ರಿಯೆ ಕುರಿತು ಮಾತನಾಡಿರುವ ಆರ್ಥರ್ ರೋಡ್ ಜೈಲು ಸೂಪರಿಂಟೆಂಡೆಂಟ್ ನಿತಿನ್ ವೈಚಲ್ ಬಿಡುಗಡೆ ಆದೇಶ ನಮ್ಮ ಕೈ ಸೇರಿದೆ. ಇನ್ನು ಒಂದೆರಡು ಗಂಟೆಗಳಲ್ಲಿ ಆರ್ಯನ್ ಖಾನ್ ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಾರೂಖ್ ಖಾನ್ ಬರುವ ಸಾಧ್ಯತೆ ಇದೆ.

"ನಾವು ಯಾರಿಗೂ ವಿಶೇಷ ಆತಿಥ್ಯ ನೀಡುವುದಿಲ್ಲ. ಕಾನೂನು ಎಲ್ಲರಿಗೂ ಒಂದೇ. ಜಾಮೀನು ಪೇಪರ್ ಗಳು ಸ್ವೀಕರಿಸಲು ಸಂಜೆ 5. 30ಕ್ಕೆ ಕಾಲಾವಕಾಶ ಇದೆ. ಆದರೆ ಸಕಾಲಕ್ಕೆ ಪೇಪರ್ ಗಳು ಸಲ್ಲಿಕೆಯಾಗದ ಹಿನ್ನೆಲೆಯಲ್ಲಿಅವರನ್ನು ಬಿಡುಗಡೆ ಮಾಡುವುದಿಲ್ಲ" ಜೈಲು ಎಂದು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದರು.
ಆರ್ಯನ್ ಖಾನ್ ಅವರ ಕಾನೂನು ತಂಡ, "ಸಂಜೆ 7 ಗಂಟೆಯವರೆಗೆ ಪೇಪರ್ ಗಳನ್ನು ಸ್ವೀಕರಿಸಿ ಬಿಡುಗಡೆ ಮಾಡಬಹುದು" ಎಂದು ಹೇಳಿದ ಹಿನ್ನೆಲೆಯಲ್ಲಿ ಜೈಲು ಅಧಿಕಾರಿಗಳು ಈ ಸಮರ್ಥನೆ ನೀಡಿದ್ದಾರೆ.
"ಬಿಡುಗಡೆಗಾಗಿ ಆರ್ಥರ್ ರೋಡ್ ಜೈಲಿನ ಹೊರಗಿನ ಜಾಮೀನು ಪೆಟ್ಟಿಗೆಯಲ್ಲಿ ಬಿಡುಗಡೆ ಆದೇಶದ ಭೌತಿಕ ಪ್ರತಿಯನ್ನು ಹಾಕಬೇಕು. ಇದಕ್ಕಾಗಿ ಜೈಲು ಅಧಿಕಾರಿಗಳು ಸಂಜೆ 5.35 ರವರೆಗೆ ಕಾಯುತ್ತಾರೆ" ಎಂದು ಆರ್ಥರ್ ರೋಡ್ ಜೈಲು ಅಧೀಕ್ಷಕ ನಿತಿನ್ ವಾಯ್ಚಲ್ ಅವರು ಹೇಳಿದ್ದಾರೆ.
ಕಳೆದ ಹಲವು ದಿನಗಳಿಂದ ಮುಂಬೈನ ಅರ್ತರ್ ರೋಡ್ ಜೈಲಿನಲ್ಲಿ ಬಂಧಿಯಾಗಿರುವ ಆರ್ಯನ್ ಖಾನ್ ಗೆ ಅವರಿಗೆ ನಿನ್ನೆ ಜಾಮೀನು ಸಿಕ್ಕಿದ್ದು, ನಾಳೆ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.
ಮಾದಕ ವಸ್ತುಗಳ ಬಳಕೆ, ಮಾರಾಟ ಸೇರಿದಂತೆ ಅನೇಕ ಆರೋಪಗಳನ್ನು ಆರ್ಯನ್ ಖಾನ್ ಮೇಲೆ ಎನ್ ಸಿ ಬಿ ಹೊರಿಸಿದೆ. ಆರ್ಥರ್ ರೋಡ್ ಜೈಲಿನ ಅಧಿಕಾರಿಗಳ ಪ್ರಕಾರ, ಆರ್ಯನ್ ಖಾನ್ ಅವರನ್ನು ಶನಿವಾರ ಮಧ್ಯಾಹ್ನ ಜೈಲಿನಿಂದ ಬಿಡುಗಡೆ ಮಾಡಲಾಗುತ್ತದೆ.
ನಾವು ಕಳೆದ ಮೂರು ದಿನಗಳಿಂದ ಸ್ವತಂತ್ರ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದೇವೆ ಮತ್ತು ನಾವು ಐದು ಅಧಿಕಾರಿಗಳು ಮತ್ತು ಮೂವರು ಖಾಸಗಿ ಸಾಕ್ಷಿಗಳನ್ನು ಪರೀಕ್ಷಿಸಿದ್ದೇವೆ ಮತ್ತು ವಿವಿಧ ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದೇವೆ ಎಂದು ಐಷಾರಾಮಿ ಹಡಗಿನಲ್ಲಿ ಡಗ್ಸ್ ಪ್ರಕರಣದ ಕುರಿತು ಡಿಡಿಜಿ ಎನ್‌ಸಿಬಿ ಜ್ಞಾನೇಶ್ವರ್ ಸಿಂಗ್ ಹೇಳಿದ್ದಾರೆ.
ಸಮೀರ್ ವಾಂಖೆಡೆ ಅವರನ್ನು ಕಳೆದ ದಿನ ವಿಚಾರಣೆಗೊಳಪಡಿಸಿದ್ದು ಅವರು ಕೆಲವು ದಾಖಲೆಗಳನ್ನು ಸಲ್ಲಿಸಿದ್ದಾರೆ. ನಾವು ಅದನ್ನು ವಿಶ್ಲೇಷಿಸುತ್ತಿದ್ದೇವೆ. ನಾವು ಇನ್ನೂ ಕೆಲವು ದಾಖಲೆಗಳನ್ನು ಕೇಳಿದ್ದೇವೆ ಮತ್ತು ಅಗತ್ಯವಿದ್ದರೆ ಅವರನ್ನು ಮತ್ತೆ ಸಂಪರ್ಕಿಸುತ್ತೇವೆ. ಲಭ್ಯವಿರುವ ಎಲ್ಲಾ ಮೂಲಗಳ ಮೂಲಕ ಸಾಕ್ಷಿ ಪ್ರಭಾಕರ್ ಸೈಲ್ ಅವರೊಂದಿಗೆ ಸಂಪರ್ಕವನ್ನು ಸ್ಥಾಪಿಸಲು ನಾವು ಪ್ರಯತ್ನಿಸಿದ್ದೇವೆ.
ಸೈಲ್ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಮಾಧ್ಯಮ ವರದಿಗಳು ಬಂದಿದ್ದರಿಂದ ನಮಗೆ ಸಹಾಯ ಮಾಡುವಂತೆ ನಾವು ಮುಂಬೈ ಪೊಲೀಸ್ ಕಮಿಷನರ್ ಅವರನ್ನು ವಿನಂತಿಸಿದ್ದೇವೆ. ಅವರಿಗೆ ಇನ್ನೂ ನೋಟಿಸ್ ನೀಡಲು ನಮಗೆ ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.











Click it and Unblock the Notifications