ಫಡ್ನವಿಸ್ ರಾಜೀನಾಮೆಗೆ ಪತ್ನಿಯ ಕಾವ್ಯಾತ್ಮಕ ಪ್ರತಿಕ್ರಿಯೆ
Recommended Video
ಮುಂಬೈ,
ನವೆಂಬರ್ 27: ಮಹಾರಾಷ್ಟ್ರದ ನಿರ್ಗಮಿತ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಪತ್ನಿ ಅಮೃತಾ ಫಡ್ನವಿಸ್ ರಾಜಕೀಯದಲ್ಲಿ ಇಲ್ಲದಿದ್ದರೂ ರಾಜಕೀಯ್ಕೆ ಸಂಬಂಧಿಸಿದ ಟ್ವೀಟ್‌ಗಳಿಂದ ದೂರವೇನಿಲ್ಲ. id="toptextpromo"> id='are-slot-1' class='oiad oi-axt oiadv'>ಪತಿಯ
ರಾಜೀನಾಮೆ ಕುರಿತಂತೆ ಟ್ವಿಟ್ಟರ್‌ನಲ್ಲಿ ಶಾಯರಿ ಮೂಲಕ ಭಾವನಾತ್ಮಕ ಸಂದೇಶ ಕಳುಹಿಸಿದ್ದಾರೆ. ಹಾಗೆಯೇ ರಾಜ್ಯದಲ್ಲಿ ಮತ್ತೆ ಫಡ್ನವಿಸ್ ಹಾಗೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎನ್ನುವ ಪೂರ್ಣ ವಿಶ್ವಾಸದ ಮಾತುಗಳನ್ನಾಡಿದ್ದಾರೆ. id='are-slot-2' class='oiad oi-axt oiadv'>
ಕೇವಲ ಮೂರು ದಿನದ ಅವಧಿಗೆ ಮುಖ್ಯಮಂತ್ರಿಯಾಗಿದ್ದ ಫಡ್ನವಿಸ್
ಕೇವಲದ ಮೂರು ದಿನದ ಮಟ್ಟಿಗೆ ಮುಖ್ಯಮಂತ್ರಿಯಾಗಿದ್ದ ದೇವೇಂದ್ರ ಫಡ್ನವಿಸ್ ಎರಡನೇ ಅವಧಿಗೆ ಅಧಿಕಾರ ಸ್ವೀಕರಿಸಿದಾಗ ಟ್ವಿಟ್ಟರ್‌ನಲ್ಲೇ ಅಮೃತಾ ಅಭಿನಂದನೆ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ಪತಿಯ ಜೊತೆಗೆ ಪ್ರಮಾಣವಚನ ಸ್ವೀಕರಿಸಿದ ಅಜಿತ್ ಪವಾರ್‌ಗೂ ಶುಭಾಶಯ ಕೋರಿದ್ದರು.

ಬದಲಾವಣೆಯ ಗಾಳಿ ಬೀಸಲಿದೆ
ಪತಿಯ ನಿರ್ಗಮನ ಕುರಿತು ಭಾವನಾತ್ಮಕವಾಗಿ ಬರೆದುಕೊಂಡಿರುವ ಅಮೃತಾ ಫಡ್ನವಿಸ್, ಇನ್ನಷ್ಟು ಹೊಸತನದೊಂದಿಗೆ ಮತ್ತೆ ಬರುತ್ತೇವೆ, ಈಗ ಚಳಿಗಾಲವಿದೆ ವಾತಾವರಣ ಬದಲಾದ ಬಳಿಕ ಎಲ್ಲವೂ ಬದಲಾಗಲಿದೆ. ಐದು ವರ್ಷಗಳ ಕಾಲ ನಿಮ್ಮ ಸಹೋದರಿಯನ್ನಾಗಿ ಪ್ರೀತಿ ತೋರಿದ್ದಕ್ಕೆ ಮಹಾರಾಷ್ಟ್ರಕ್ಕೆ ಧನ್ಯವಾದ. ನನ್ನ ಜವಾಬ್ದಾರಿಗಳನ್ನು ನಾನು ಈ ಅವಧಿಯಲ್ಲಿ ಉತ್ತಮವಾಗಿ ನಿಭಾಯಿಸಲು ಪ್ರಯತ್ನಿಸಿದ್ದೇನೆ. ಜನರ ಸೇವೆ ಹಾಗೂ ಧನಾತ್ಮಕ ಬದಲಾವಣೆಗಳಿಗೆ ಪ್ರಯತ್ನಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ಗಾಯಕಿ ಹಾಗೂ ಬ್ಯಾಂಕರ್
ಅಮೃತಾ ಫಡ್ನವಿಸ್ ಕೇವಲ ಮಹಾರಾಷ್ಟ್ರದ ಪ್ರಭಾವಿ ರಾಜಕಾರಣಿ ಪತ್ನಿ ಮಾತ್ರ ಆಗಿಲ್ಲ, ವೃತ್ತಿಯಲ್ಲಿ ಬ್ಯಾಂಕರ್ ಹಾಗೂ ಪ್ರವೃತ್ತಿಯಲ್ಲಿ ಗಾಯಕಿಯಾಗಿದ್ದಾರೆ. ಈಗಲೂ ವಾರಾಂತ್ಯದಲ್ಲಿ ಸಾಕಷ್ಟು ಸಂಗೀತ ಕಾರ್ಯಕ್ರಮಗಳನ್ನು ಅಮೃತಾ ನೀಡುತ್ತಿರುತ್ತಾರೆ. ಮರಾಠಿ ಹಾಗೂ ರಾಷ್ಟ್ರೀಯ ಚಾನೆಲ್‌ಗಳಲ್ಲಿ ಇವರ ಹಾಡುಗಳೂ ಪ್ರಸಾರವಾಗಿವೆ.

ಟ್ವಿಟ್ಟರ್‌ನಲ್ಲಿ ಫಾಲೋ ಮಾಡೋದು ಕೇವಲ ನಾಲ್ಕು ಜನರನ್ನು ಮಾತ್ರ
ಟ್ವಿಟ್ಟರ್‌ನಲ್ಲಿ 1.4 ಲಕ್ಷ ಫಾಲೋವರ್ಸ್ ಹೊಂದಿರುವ ಅಮೃತಾ ತಾವು ಕೇವಲ ನಾಲ್ವರನ್ನು ಮಾತ್ರ ಹಿಂಬಾಲಿಸುತ್ತಿದ್ದಾರೆ. ಈ ಮೂಲಕ ಅವರು ಇಷ್ಟ ಪಡುವ ವ್ಯಕ್ತಿಗಳನ್ನು ಬಹಿರಂಗಪಡಿಸಿದ್ದಾರೆ. ಅವರು ಫಾಲೋ ಮಾಡುವ ನಾಲ್ಕು ಖಾತೆಗಳಲ್ಲಿ ಒಂದು ಪತಿ ದೇವೇಂದ್ರ ಫಡ್ವಿಸ್ ಆದರೆ ಉಳಿದ ಮೂರು ಖಾತೆಗಳು ದೇಶದ ಕೋಟ್ಯಂತರ ಜನರು ಆರಾಧಿಸುವವರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವೈಯಕ್ತಿಕ ಖಾತೆ , ಪಿಎಂಓ ಇಂಡಿಯಾ ಖಾತೆಯನ್ನು ಅಮೃತಾ ಫಾಲೋ ಮಾಡುತ್ತಿದ್ದಾರೆ.ಇನ್ನು ಬಾಲಿವುಡ್‌ನ ಬಿಗ್‌ಬಿ ಎಂದೇ ಖ್ಯಾತಿಯಾಗಿರುವ ಅಮಿತಾಬ್ ಭಚ್ಚನ್ ಅವರನ್ನು ಕೂಡ ಅಮೃತ ಫಾಲೋ ಮಾಡುತ್ತಿದ್ದಾರೆ.












Click it and Unblock the Notifications