ಮೂರಕ್ಕಿಂತ ದ್ವಿಪಕ್ಷ ಮೈತ್ರಿಯಿಂದ ಸ್ಥಿರ ಸರ್ಕಾರ ಸಾಧ್ಯ: ಅಜಿತ್ ಪವಾರ್

ಮುಂಬೈ, ನವೆಂಬರ್ 23: ಮೂರು ಪಕ್ಷಗಳು ಸೇರಿ ಸರ್ಕಾರ ರಚಿಸುವುದಕ್ಕಿಂತ ಎರಡೇ ಪಕ್ಷಗಳು ಸೇರಿದಾಗ ಸ್ಥಿರ ಸರ್ಕಾರವನ್ನು ರಚನೆ ಮಾಡಬಹುದು ಎಂದು ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದ್ದಾರೆ.

ಪ್ರಮಾಣವಚನ ಸ್ವೀಕಾರ ಮಾಡಿದ ಬಳಿಕ ಮಾತನಾಡಿದ ಅಜಿತ್ ಪವಾರ್ ಮೂರು ಸೇರಿ ಸರ್ಕಾರ ರಚಿಸಿದರೆ ಗೊಂದಲಗಳು ಹೆಚ್ಚು, ಎರಡೇ ಪಕ್ಷಗಳು ಸೇರಿದರೆ ಹೊಂದಾಣಿಕೆ ಮಾಡಿಕೊಂಡು, ಸ್ಥಿರ ಸರ್ಕಾರ ರಚಿಸಬಹುದು ಎಂದು ಅಭಿಪ್ರಾಯ ಪಟ್ಟರು.

ಮಹಾರಾಷ್ಟ್ರ ವಿಧಾನಸಭೆ ಫಲಿತಾಂಶ ಹೊರ ಬಂದು ತಿಂಗಳುಗಳೇ ಕಳೆದರೂ ಸರ್ಕಾರ ರಚನೆ ಮಾಡಲು ಸಾಧ್ಯವಿರಲಿಲ್ಲ. ಇದರಿಂದ ಮಹಾರಾಷ್ಟ್ರ ಜನತೆಗೆ ತೊಂದರೆಯಾಗಿತ್ತು. ರೈತರ ಸಮಸ್ಯೆ ಸೇರಿದಂತೆ ಹಲವು ಸಮಸ್ಯಗಳಿದ್ದವು.

A Stable Government Is Possible With Party Alliance

ಸರ್ಕಾರ ರಚನೆ ಮಾಡುವುದು ಅನಿವಾರ್ಯವಾಗಿತ್ತು. ಹೀಗಾಗಿ ಏಕಾಏಕಿ ಸರ್ಕಾರ ರಚನೆ ಮಾಡುವ ನಿರ್ಧಾರಕ್ಕೆ ಬಂದೆವು, ಬಿಜೆಪಿಗೆ ಬೆಂಬಲ ನೀಡಿದ್ದೇವೆ ಸರ್ಕಾರ ರಚನೆ ಮಾಡಿದ್ದೇವೆ ಎಂದು ಹೇಳಿದರು.

ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತವಿತ್ತು, ರಾಷ್ಟ್ರಪತಿ ಆಡಳಿತ ತೆಗೆದು ಹಾಕುವಂತೆ ದೇವೇಂದ್ರ ಫಡ್ನವಿಸ್ ಮನವಿ ಮಾಡಿದ್ದರು. ರಾಜ್ಯಪಾಲರು ಬೆಳಗ್ಗೆ ರಾಷ್ಟ್ರಪತಿ ಆಡಳಿತ ಹಿಂಪಡೆಯುವಂತೆ ಶಿಫಾರಸು ಮಾಡಿದ್ದರು.

ಮೊದಲು ಎನ್‌ಸಿಪಿ, ಕಾಂಗ್ರೆಸ್, ಶಿವಸೇನಾ ಸೇರಿ ಸರ್ಕಾರ ರಚನೆ ಮಾಡಲು ಮುಂದಾಗಿದ್ದರು. ಅಂತಿಮ ಕ್ಷಣದಲ್ಲಿ ಎನ್‌ಸಿಪಿ ಕಾಂಗ್ರೆಸ್ ಹಾಗೂ ಶಿವಸೇನೆಗೆ ಕೈಕೊಟ್ಟು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+