56 ವರ್ಷದ ಶಿಕ್ಷಕನಿಂದ ವಿದ್ಯಾರ್ಥಿನಿ ಮೇಲೆ ನಿರಂತರ ಅತ್ಯಾಚಾರ:ಬಂಧನ
ಮುಂಬೈ, ಮೇ 4: ಕಳೆದ ಮೂರು ವರ್ಷಗಳಿಂದ ಬೆದರಿಸಿ ವಿದ್ಯಾರ್ಥಿನಿ ಮೇಲೆ ನಿರಂತರ ಅತ್ಯಾಚಾರವೆಸಗುತ್ತಿದ್ದ ಕಾಮುಕ ಶಿಕ್ಷಕ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಗುರು ಎನ್ನುವ ಸ್ಥಾನಕ್ಕೆ ಕಳಂಕ ತಂದ ಶಿಕ್ಷಕ ಆಕೆಯ ಮಾನವನ್ನು ಹರಾಜು ಹಾಕಲು ಯತ್ನಿಸಿ, ಕೊನೆಗೆ ತಾನೇ ಸಿಕ್ಕಿಹಾಕಿಕೊಂಡಿದ್ದಾನೆ.
ಎಂಟನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯ ಬೆತ್ತಲೆ ಫೋಟೋಗಳನ್ನು ಇಟ್ಟುಕೊಂಡು ಆಕೆಗೆ ಬ್ಲ್ಯಾಕ್ ಮೇಲ್ ಮಾಡಿ ಆಕೆಯನ್ನು ಶಿಕ್ಷಕನೊಬ್ಬ ಅತ್ಯಾಚಾರವೆಸಗುತ್ತಿದ್ದ.
ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿನಿ ಕಾಲೇಜು ಸೇರಿದಳು. ಅಲ್ಲಿಯೂ ಬಂದು ಆಕೆಯ ಬಗ್ಗೆ ಇಲ್ಲಸಲ್ಲದ್ದು ಹೇಳಿ, ಆಕೆಯ ಚಾರಿತ್ರ್ಯ ಕುರಿತು ಹೇಳಿ ಆಕೆಗೆ ಕಾಲೇಜು ಟಿಸಿ ಕೊಡುವಂತೆ ಮಾಡಿದ್ದ.

ಬಳಿಕ ಮತ್ತೊಂದು ಕಾಲೇಜಿಗೆ ಸೇರಿದಾಗ ಅದೇ ರೀತಿಯಾದಾಗ ಎಲ್ಲವನ್ನೂ ವಿಚಾರಿಸಿದಾಗ ಯುವತಿ ತನಗಾಗಿದ್ದ ನೋವನ್ನು ಹಂಚಿಕೊಂಡಿದ್ದಾಳೆ. ತಕ್ಷಣ ಪೊಲೀಸರಿಗೆ ಕರೆ ಮಾಡಿ ಆತನನ್ನು ಪೊಲೀಸರ ವಶಕ್ಕೆ ನೀಡಲಾಗಿದೆ.












Click it and Unblock the Notifications