ವಿಮಾನ ನಿಲ್ದಾಣದಲ್ಲಿ 4 ಲಕ್ಷ ಮೌಲ್ಯದ ಚಿನ್ನ ವಶ
ಮಂಗಳೂರು, ಮೇ. 12: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಒಟ್ಟು 4, 14,370 ರೂ. ರೂ. ಮೌಲ್ಯದ 140.5 ಗ್ರಾಂ ಗ್ರಾಂ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಶಾರ್ಜಾದಿಂದ ಶನಿವಾರ ಬೆಳಗ್ಗೆ 9.30ಕ್ಕೆ ಬಂದಿಳಿದ ವಿಮಾನದ ಪ್ರಯಾಣಿಕ ಕಾಸರಗೋಡು ಜಿಲ್ಲೆ ಪಳ್ಳಿಕೆರೆಯ ನಿವಾಸಿ ಮುನೀರ್ ಪಳ್ಳಿಪುಝ ಅಕ್ರಮವಾಗಿ ಚಿನ್ನವನ್ನು ಸಾಗಿಸುತ್ತಿರುವಾಗ ಸಿಕ್ಕಿಬಿದ್ದಿದ್ದಾರೆ.[ಮಂಗಳೂರು : ಬಂಟ್ಸ್ ಹಾಸ್ಟೆಲ್ ವೃತ್ತ ಲೋಕಾರ್ಪಣೆ]

ಬೆಳ್ಳಿಯ ಲೇಪನಕೊಟ್ಟ ಚಿನ್ನದ ತಗಡು ಮತ್ತು ಚಿನ್ನದ ನಾಣ್ಯಗಳನ್ನು ಫ್ಲಾಸ್ಕ್ ನಲ್ಲಿ ಅಡಗಿಸಿ ಸಾಗಿಸಲು ಯತ್ನಿಸಿದ್ದು, ಮುನೀರ್ ಬಳಿಯಿದ್ದ ಬೆಳ್ಳಿ ಲೇಪಿತ ಚಿನ್ನದ ತಗಡುಗಳ ತೂಕ 116.5 ಗ್ರಾಂ ಇದ್ದು, 3 ಚಿನ್ನದ ನಾಣ್ಯಗಳ ತೂಕ 24 ಗ್ರಾಂ ಇತ್ತು.[ಮಂಗಳೂರು : ನಾಪತ್ತೆಯಾಗಿದ್ದ ಶ್ರೀನಿಧಿ ಶವವಾಗಿ ಪತ್ತೆ]
ಕಸ್ಟಮ್ಸ್ ಅಸಿಸ್ಟೆಂಟ್ ಕಮಿಷನರ್ ಕೃಷ್ಣ ಕುಮಾರ್ ಪ್ರಸಾದ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಕಮಿಷನರ್ ಡಿ. ಪುರುಷೋತ್ತಮ್ ಮಾರ್ಗ ದರ್ಶನದಲ್ಲಿ ಮುಂದಿನ ತನಿಖೆ ನಡೆಯುತ್ತಿದೆ.












Click it and Unblock the Notifications