ಮಂಗಳೂರು : ನಾಪತ್ತೆಯಾಗಿದ್ದ ಶ್ರೀನಿಧಿ ಶವವಾಗಿ ಪತ್ತೆ

ಮಂಗಳೂರು, ಮೇ 4 : ಶುಕ್ರವಾರ ನಾಪತ್ತೆಯಾಗಿದ್ದ ಮೂರುವರೆ ವರ್ಷದ ಹೆಣ್ಣು ಮಗು ಶ್ರೀನಿಧಿ ಶನಿವಾರ ಶವವಾಗಿ ಪತ್ತೆಯಾಗಿದ್ದಾಳೆ. ಮಗು ನೀರಿನಲ್ಲಿ ಮುಳುಗಿ ಮೃತಪಟ್ಟಿದೆ ಎಂದು ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು ಧೃಡಪಡಿಸಿದ್ದಾರೆ. ಆಟವಾಡುತ್ತಿದ್ದಾಗ ಕಾಲುಜಾರಿ ಚರಂಡಿಗೆ ಬಿದ್ದು ಮೃತಪಟ್ಟಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಮಂಗಳೂರಿನ ಪಂಪ್ ವೆಲ್ ವೃತ್ತದ ಬಳಿಕ ಹಾಸ್ಟೆಲ್ ನಲ್ಲಿ ವಾರ್ಡನ್ ಆಗಿ ಕೆಲಸ ಮಾಡುತ್ತಿದ್ದ ವೇದಾ ಪೂಜಾರಿ ಅವರ ಮಗು ಶ್ರೀನಿಧಿ, ಶುಕ್ರವಾರ ರಾತ್ರಿ ಹಾಸ್ಟೆಲ್ ಆವಣರದಲ್ಲಿ ಆಟವಾಡುತ್ತಿದ್ದ ವೇಳೆ ನಾಪತ್ತೆಯಾಗಿದ್ದಳು. ಶನಿವಾರ ಆಕೆಯ ಮೃತದೇಹ ಪಂಪ್ ವೆಲ್ ವೃತ್ತದ ಬಳಿಯ ಚರಂಡಿಯ ನೀರಿನಲ್ಲಿ ಪತ್ತೆಯಾಗಿದೆ. ಮೃತ ದೇಹದ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದ್ದು, ನೀರಿನಲ್ಲಿ ಮುಳುಗಿ ಮಗು ಮೃತ ಪಟ್ಟಿದೆ ಎಂದು ವೈದ್ಯರು ದೃಢ ಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶ್ರೀನಿಧಿ ಮೃತದೇಹ ದೊರಕಿದ ಚರಂಡಿಯಲ್ಲಿ ಮಳೆ ನೀರು ತುಂಬಿದೆ. ಶುಕ್ರವಾರ ರಾತ್ರಿ ಮಗು ಆಟವಾಡುತ್ತಿದ್ದಾಗ ಕಾಲುಜಾರಿ ಚರಂಡಿಗೆ ಬಿದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. [ಚಿತ್ರಗಳು : Isaac Richard , Mangalore]

ಹಾಸನ ಮೂಲದವರು

ಹಾಸನ ಮೂಲದವರು

ಶ್ರೀನಿಧಿ ಹಾಸನದ ಲೋಕೇಶ್‌ ಮತ್ತು ವೇದಾ ಪೂಜಾರಿ ದಂಪತಿಯ ಪುತ್ರಿ. ವೇದಾ ಅವರು ಪಂಪ್‌ವೆಲ್‌ ವೃತ್ತದ ಬಳಿಯ ಹಾಸ್ಟೆಲ್‌ನಲ್ಲಿ ವಾರ್ಡನ್‌ ಆಗಿ ಕೆಲಸ ಮಾಡುತ್ತಿದ್ದರು. ಮಗು ಶ್ರೀನಿಧಿ ಕೂಡಾ ಅವರ ಜತೆ ವಾಸವಾಗಿದ್ದಳು. ಲೋಕೇಶ್‌ ಹಾಸನದಲ್ಲಿದ್ದರು.

ಶುಕ್ರವಾರ ನಾಪತ್ತೆಯಾದ ಶ್ರೀನಿಧಿ

ಶುಕ್ರವಾರ ನಾಪತ್ತೆಯಾದ ಶ್ರೀನಿಧಿ

ಶುಕ್ರವಾರ ಶ್ರೀನಿಧಿ ಹಾಸ್ಟೆಲ್‌ ಆವರಣದಲ್ಲಿ ಆಟ ಆಡುತ್ತಿದ್ದಳು. ಆದರೆ, ರಾತ್ರಿ 7.30 ರಿಂದ 8 ಗಂಟೆ ಮಧ್ಯೆ ನಾಪತ್ತೆಯಾಗಿದ್ದಾಳೆ. ಎಲ್ಲರೂ ಹುಡುಕಿದರೂ ಶ್ರೀನಿಧಿ ಪತ್ತೆಯಾಗಿರಲಿಲ್ಲ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ನೀಡಲಾಗಿತ್ತು.

ಶನಿವಾರ ಮೃತದೇಹ ಪತ್ತೆ

ಶನಿವಾರ ಮೃತದೇಹ ಪತ್ತೆ

ಶನಿವಾರ ಶ್ರೀನಿಧಿ ಮೃತದೇಹ ಪಂಪ್ ವೆಲ್ ವೃತ್ತದ ಬಳಿಯ ಚರಂಡಿಯ ನೀರಿನಲ್ಲಿ ಪತ್ತೆಯಾಗಿದೆ. ಮೃತ ದೇಹದ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದ್ದು, ನೀರಿನಲ್ಲಿ ಮುಳುಗಿ ಮಗು ಮೃತ ಪಟ್ಟಿದೆ ಎಂದು ವೈದ್ಯರು ದೃಢ ಪಡಿಸಿದ್ದಾರೆ. ಶಾಸಕ ಜೆ.ಆರ್‌.ಲೋಬೊ, ಕಾರ್ಪೊರೇಟರ್‌ ಆಶಾ ಗ್ರೆಟ್ಟಾ ಡಿಸಿಲ್ವಾ ಸ್ಥಳಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಕಾಲುಜಾರಿ ಬಿದ್ದಿರುವ ಶಂಕೆ

ಕಾಲುಜಾರಿ ಬಿದ್ದಿರುವ ಶಂಕೆ

ಶ್ರೀನಿಧಿ ಹಾಸ್ಟಲ್‌ ನ ನಾಯಿಯನ್ನು ಪ್ರತಿದಿನ ಹೊರೆಗೆ ಕರೆದುಕೊಂಡು ಹೋಗುತ್ತಿದ್ದಳು. ಶುಕ್ರವಾರ ನಾಯಿಯನ್ನು ಎಳೆದುಕೊಂಡು ಓಡುವ ಸಂದರ್ಭದಲ್ಲಿ ಮಗು ಆಯ ತಪ್ಪಿ ಚರಂಡಿಗೆ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+