• search
 • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಡ್ಯ ಚುನಾವಣೆ : ಕಣದಿಂದ ಹಿಂದೆ ಸರಿಯಲಿದ್ದಾರಾ ಡಾ.ಸಿದ್ದರಾಮಯ್ಯ?

|
   Mandya By-elections 2018 : ಮಂಡ್ಯದಲ್ಲೂ ಬಿಜೆಪಿ ಅಭ್ಯರ್ಥಿ ಹಿಂದೆ ಸರಿಯಲಿದ್ದಾರಾ? | Oneindia Kannada

   ಮಂಡ್ಯ, ನವೆಂಬರ್ 02 : ರಾಮನಗರದ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಚುನಾವಣಾ ಕಣದಿಂದ ಹಿಂದೆ ಸರಿದಿದ್ದು ಆಗಿದೆ. ಈಗ ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ ಹಿಂದೆ ಸರಿಯಲಿದ್ದಾರೆಯೇ?.

   ಮಂಡ್ಯ ಲೋಕಸಭೆ ಉಪ ಚುನಾವಣೆ ಮತದಾನಕ್ಕೆ ಕೆಲವೇ ಗಂಟೆಗಳು ಬಾಕಿ ಇದೆ. ಶುಕ್ರವಾರ ಡಾ.ಸಿದ್ದರಾಮಯ್ಯ ಅವರು ಕಣದಿಂದ ಹಿಂದೆ ಸರಿಯಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಆದರೆ, ಈ ಸುದ್ದಿ ಹಬ್ಬಿಸಿದ್ದು ಬೇಳೂರು ಗೋಪಾಲಕೃಷ್ಣ!

   ಮಂಡ್ಯದಲ್ಲಿ ಕೈ-ತೆನೆಗೆ ಹಿನ್ನಡೆ, ಚುನಾವಣೆ ಬಹಿಷ್ಕಾರ ಹಾಕಿದ ಕುರುಬರು

   ಹೌದು, ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮತದಾನ ನವೆಂಬರ್ 3ರ ಶನಿವಾರ ನಡೆಯಲಿದೆ. ಅಭ್ಯರ್ಥಿಗಳು ಕೊನೆ ಕ್ಷಣದ ಕಸರತ್ತು ನಡೆಸುತ್ತಿದ್ದಾರೆ. ಇಂತಹ ಸಮಯದಲ್ಲಿಯೇ ಡಾ.ಸಿದ್ದರಾಮಯ್ಯ ಹಿಂದೆ ಸರಿಯಲಿದ್ದಾರೆ? ಎಂಬ ಸುದ್ದಿ ಹಬ್ಬಿದೆ.

   ಮಂಡ್ಯ ಉಪ ಚುನಾವಣೆ : ಬಿಜೆಪಿ, ಜೆಡಿಎಸ್ ಬಲಾಬಲ

   ಗುರುವಾರ ರಾಮನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಕಾಂಗ್ರೆಸ್ ಸೇರಿ ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದರು. ಈಗ ಮಂಡ್ಯ ಕ್ಷೇತ್ರದ ಅಭ್ಯರ್ಥಿ ಬಗ್ಗೆ ಏಕೆ? ಚರ್ಚೆ ಆರಂಭವಾಗಿದೆ ಎಂಬುದನ್ನು ಕಾದು ನೋಡಬೇಕಿದೆ.....

   ಮಂಡ್ಯ ಚುನಾವಣೆ : ಎಡವಟ್ಟು ಮಾಡಿಕೊಂಡ ಎಲ್.ಆರ್.ಶಿವರಾಮೇಗೌಡ!

   ಬೇಳೂರು ಗೋಪಾಕೃಷ್ಣ ಯಡವಟ್ಟು

   ಬೇಳೂರು ಗೋಪಾಕೃಷ್ಣ ಯಡವಟ್ಟು

   ಸಾಗರ ಕ್ಷೇತ್ರದ ಮಾಜಿ ಶಾಸಕ, ಕಾಂಗ್ರೆಸ್ ನಾಯಕ ಬೇಳೂರು ಗೋಪಾಲಕೃಷ್ಣ ಅವರು ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ಕಣದಿಂದ ನಿವೃತ್ತಿ ಹೊಂದುತ್ತೀರಾ? ಎಂದು ಕೇಳುತ್ತಿದ್ದಾರೆ. ಬೇಳೂರು ಗೋಪಾಲಕೃಷ್ಣ ಅವರು ಏಕೆ ಮಂಡ್ಯ ಜಿಲ್ಲೆಯ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

   ಯಾವ ಪಕ್ಷದಲ್ಲಿದ್ದಾರೆ ಗೊತ್ತಿಲ್ಲ?

   ಯಾವ ಪಕ್ಷದಲ್ಲಿದ್ದಾರೆ ಗೊತ್ತಿಲ್ಲ?

   ಈ ಕುರಿತು ಮಾತನಾಡಿರುವ ಡಾ.ಸಿದ್ದರಾಮಯ್ಯ ಅವರು, 'ಬೇಳೂರು ಗೋಪಾಲಕೃಷ್ಣ ಅವರು ನನಗೆ ಕರೆ ಮಾಡಿ ಕಣದಿಂದ ಹಿಂದೆ ಸರಿಯುತ್ತೀರಾ? ಎಂದು ಕೇಳುತ್ತಿದ್ದಾರೆ. ಅವರು ಯಾರು?, ಯಾವ ಪಕ್ಷದಲ್ಲಿದ್ದಾರೆ? ಎಂಬುದೇ ನನಗೆ ಗೊತ್ತಿಲ್ಲ' ಎಂದು ಹೇಳಿದ್ದಾರೆ.

   ಕಣದಿಂದ ಹಿಂದೆ ಸರಿಯುವುದಿಲ್ಲ

   ಕಣದಿಂದ ಹಿಂದೆ ಸರಿಯುವುದಿಲ್ಲ

   'ಡಾ.ಸಿದ್ದರಾಮಯ್ಯ ಅವರು ಕಣದಿಂದ ಹಿಂದೆ ಸರಿಯಲಿದ್ದಾರೆ ಎಂದು ಸುದ್ದಿ ಹಬ್ಬಿರುವ ಮೂಲಕ ಜಿಲ್ಲೆಯ ಕಾರ್ಯಕರ್ತರಲ್ಲಿ, ಜನರಲ್ಲಿ ಗೊಂದಲ ಮೂಡಿಸಲಾಗುತ್ತಿದೆ. ನಾನು ಕಣದಿಂದ ಹಿಂದೆ ಸರಿಯುವುದಿಲ್ಲ' ಎಂದು ಡಾ.ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದರು.

   ಶನಿವಾರವೇ ಚುನಾವಣೆ

   ಶನಿವಾರವೇ ಚುನಾವಣೆ

   ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮತದಾನಕ್ಕೆ ಕೆಲವೇ ಗಂಟೆಗಳು ಬಾಕಿ ಇದೆ. ಶನಿವಾರ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಲಿದೆ. ಬಿಜೆಪಿಯಿಂದ ಡಾ.ಸಿದ್ದರಾಮಯ್ಯ, ಜೆಡಿಎಸ್‌ನಿಂದ ಎಲ್.ಆರ್.ಶಿವರಾಮೇಗೌಡ ಕಣದಲ್ಲಿದ್ದಾರೆ.

   English summary
   Mandya Lok Sabha By election BJP candidate Dr.Siddaramaiah upset with Former MLA and Congress leader Belur Gopalakrishna. Mandya Lok Sabha by election will be held on November 3, 2018.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X