Breaking; ಕೋವಿಡ್ ಸೋಂಕು ತಗುಲಿದರೆ ವಿಶೇಷ ಸಿಎಲ್ ರಜೆ
ಲಕ್ನೋ, ಏಪ್ರಿಲ್ 19; ಕೋವಿಡ್ ಸೋಂಕು ತಗುಲಿರುವ ನೌಕರರು ವಿಶೇಷ ಸಿಎಲ್ ರಜೆ ತೆಗೆದುಕೊಳ್ಳಲು ಉತ್ತರ ಪ್ರದೇಶ ಸರ್ಕಾರ ಅನುಮತಿ ನೀಡಿದೆ. ಯಾವುದೇ ಇಲಾಖೆಯಲ್ಲಿನ ನೌಕರರಿಗೆ ವಿಶೇಷ ಸಿಎಲ್ ನೀಡಲು ನಿರಾಕರಿಸುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಉತ್ತರ ಪ್ರದೇಶ ಸರ್ಕಾರ ಈ ಕುರಿತು ಆದೇಶ ಹೊರಡಿಸಿದೆ. ಈ ಮೂಲಕ ಸರ್ಕಾರಿ ನೌಕರರಿಗೆ ಬಹುದೊಡ್ಡ ಘೋಷಣೆಯನ್ನು ಮಾಡಿದೆ. ಈ ವಿಶೇಷ ಸಿಎಲ್ ರಜೆಗಳು ಒಂದು ತಿಂಗಳ ಅವಧಿಯದ್ದಾಗಿವೆ. ಇಂತಹ ಘೋಷಣೆಯನ್ನು ಕೋವಿಡ್ 2, 3ನೇ ಅಲೆ ಸಂದರ್ಭದಲ್ಲಿ ವಿವಿಧ ಸರ್ಕಾರಗಳು ಮಾಡಿದ್ದವು.
ಕೋವಿಡ್ ಸೋಂಕು ತಗುಲಿರುವ ನೌಕರರಿಗೆ ಈ ರಜೆಯಿಂದ ಅನುಕೂಲವಾಗಲಿದೆ. ವಿವಿಧ ರಾಜ್ಯಗಳಲ್ಲಿ ಈಗ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಈ ಆದೇಶ ಮಹತ್ವ ಪಡೆದುಕೊಂಡಿದೆ. ಹೊಸ ಆದೇಶದ ಬಗ್ಗೆ ಎಲ್ಲಾ ಇಲಾಖೆಗಳಿಗೆ ಸುತ್ತೋಲೆ ಕಳಿಸಲಾಗಿದೆ.

ಈ ವಿಶೇಷ ಸಿಎಲ್ ರಜೆಗಾಗಿ ಯಾವುದೇ ಇಲಾಖೆಯ ಯಾವುದೇ ಉದ್ಯೋಗಿ ಮನವಿ ಸಲ್ಲಿಸಿದರೆ ತಕ್ಷಣ ನೀಡಬೇಕು ಎಂದು ಸುತ್ತೋಲೆಯಲ್ಲಿ ಸರ್ಕಾರ ತಿಳಿಸಿದೆ. ಕೋವಿಡ್ ಸೋಂಕು ತಗುಲಿರುವ ಉದ್ಯೋಗಿ 1 ತಿಂಗಳ ಅವಧಿಯ ತನಕ ರಜೆ ಪಡೆಯಲು ಅವಕಾಶ ನೀಡಲಾಗಿದೆ.

ವಿವಿಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೋವಿಡ್ 2 ಮತ್ತು 3ನೇ ಅವಧಿಯಲ್ಲಿ ಇಂತಹ ರಜೆಯನ್ನು ಪರಿಚಯಿಸಿದ್ದವು. ಈಗ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ 2.0 ಸರ್ಕಾರ ಸರ್ಕಾರಿ ಉದ್ಯೋಗಿಗಳಿಗೆ ಇಂತಹ ರಜೆ ನೀಡಿದೆ.












Click it and Unblock the Notifications