ಟ್ರಂಪ್ ಭೇಟಿ: ಯಮುನೆಗೆ ನೀರು, ಸುತ್ತಮುತ್ತಲ ಪ್ರದೇಶ ಸ್ವಚ್ಛ
ಮಥುರಾ, ಫೆಬ್ರವರಿ 20: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಭಾರತದ ಸೌಂದರ್ಯವನ್ನು ಹೆಚ್ಚಿಸಲು ನಾನಾ ಕೆಲಸಗಳು ನಡೆಯುತ್ತಿವೆ.
ಪ್ರಮುಖವಾಗಿ ಗುಜರಾತ್, ಆಗ್ರಾಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಯಮುನಾ ನದಿಗೆ ನೀರು ಹರಿಸುವ ಕಾರ್ಯವನ್ನು ಮಾಡಿದೆ.
ಟ್ರಂಪ್ ಭೇಟಿ ವೇಳೆ ನದಿಯ ಪರಿಸರವನ್ನು ಸುಂದರವಾಗಿ ಕಾಣುವಂತೆ ಮಾಡಲು ಉತ್ತರಪ್ರದೇಶದ ನೀರಾವರಿ ಇಲಾಖೆಯು ಯಮುನಾ ನದಿಗೆ 500 ಕ್ಯೂಸೆಕ್ಸ್ ನೀರನ್ನು ಹರಿಸಿದೆ ಎಂದು ವರದಿಗಳು ತಿಳಿಸಿವೆ.

ನದಿಗೆ ನೀರು ಹರಿಸಿರುವುದರಿಂದ ಸ್ಥಳದಲ್ಲಿ ಬರುತ್ತಿದ್ದ ಕೆಟ್ಟ ವಾಸನೆ ಕೂಡ ದೂರಾಗಲಿದೆ. ನದಿಯ ಪರಿಸರ ಮತ್ತಷ್ಟು ಸುಂದರವಾಗಿ ಕಾಣಲಿದೆ ಎಂದು ತಿಳಿಸಿದ್ದಾರೆ.
ಆಗ್ರಾಗೆ ಅಮೆರಿಕಾ ಅಧ್ಯಕ್ಷ ಟ್ರಂಪ್ ಭೇಟಿ ನೀಡುತ್ತಾರೆಂಬ ಮಾಹಿತಿ ಹಿನ್ನೆಲೆಯಲ್ಲಿ ನದಿಗೆ 500 ಕ್ಯೂಸೆಕ್ಸ್ ನೀರನ್ನು ಹರಿಸಲಾಗಿದೆ. ಫೆಬ್ರವರಿ 20 ರಂದು ಮಥುರಾದ ಯಮುನಾಗೆ ಈ ನೀರು ಹರಿಯಲಿದ್ದು, ಫೆಬ್ರವರಿ 21 ರಂದು ಆಗ್ರಾ ತಲುಪಲಿದೆ ಎಂದು ಅಧಿಕಾರಿ ಧರ್ಮೇಂದರ್ ಸಿಂಗ್ ಫೋಗಟ್ ಹೇಳಿದ್ದಾರೆ.












Click it and Unblock the Notifications