ಲಕ್ನೋ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕ ಆತ್ಮಹತ್ಯೆ

ಲಕ್ನೋ, ಫೆಬ್ರವರಿ 26: ಲಕ್ನೋದ ಲಾಲ್‌ಬಾಗ್‌ನಲ್ಲಿರುವ ಸರ್ಕಾರಿ ಶಾಲೆಯೊಂದರಲ್ಲಿ 49 ವರ್ಷದ ಶಿಕ್ಷಕರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ರವೀಂದ್ರ ಕುಮಾರ್ ಶುಕ್ಲಾ ಮೃತ ಶಿಕ್ಷಕ, ಮಕ್ಕಳೆಲ್ಲರೂ ತರಗತಿಯಿಂದ ಹೋದ ಬಳಿಕ ಆತ್ಮಹತ್ಯೆ ಮಾಡಿಕೊಮಡಿದ್ದಾರೆ. ಅವರು ರಾಜಾಜಿಪುರಂನ ನಿವಾಸಿಯಾಗಿದ್ದಾರೆ. ಶುಕ್ಲಾ ಅವರು ಎಂದಿನಂತೆ ಮಂಗಳವಾರ ಶಾಲೆಗೆ ಬಂದು ಎಲ್ಲಾ ತರಗತಿಗಳಲ್ಲಿ ಪಾಠ ಮಾಡಿದ್ದರು.

ಹಾಗೆಯೇ ಅವರು ಮುಖ್ಯ ಕಚೇರಿಗೆ ತೆರಳಿ ಮೊಬೈಲ್‌ನ್ನು ಅಲ್ಲಿಯೇ ಬಿಟ್ಟು ಬಂದಿದ್ದರು. ಅವರು ಕ್ಲಾಸ್‌ರೂಮ್ ಬಾಗಿಲು ಹಾಕಿಕೊಂಡಿದ್ದರು. ಆದರೆ ಯಾರಿಗೂ ಅವರು ಮತ್ತೆ ತರಗತಿಗೆ ಬಂದು ನೇಣು ಹಾಕಿಕೊಳ್ಳುತ್ತಾರೆ ಎಂದು ಊಹಿಸಿಯೂ ಇರಲಿಲ್ಲ.

School Teacher Found Hanging In classroom

ಮಂಗಳವಾರದಂದು ಸರಿಯಾದ ಸಮಯಕ್ಕೆ ಶಾಲೆಗೆ ಬಂದಿದ್ದ ಅವರು ಪ್ರತಿದಿನದಂತೆ ತರಗತಿಗಳನ್ನು ನಡೆಸಿ, ಕೊನೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದಾರೆ. ವಿದ್ಯಾರ್ಥಿಗಳೆಲ್ಲ ಮನೆಗೆ ತೆರಳಿದ ನಂತರ ತರಗತಿಗಳ ಬಾಗಿಲನ್ನು ಹಾಕಿ ಬಂದಿದ್ದಾರೆ. ಆದರೆ ಮತ್ತೆ ತರಗತಿಯೊಳಗೆ ತೆರಳಿರುವ ಅವರು ಅಲ್ಲಿದ್ದ ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಹೋದ್ಯೋಗಿಗಳು ನೀಡಿರುವ ಮಾಹಿತಿಯ ಪ್ರಕಾರ ರವೀಂದ್ರ ಅವರಿಗೆ ಆಗಾಗ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿದ್ದು ಅದೇ ನೋವು ಮತ್ತು ಚಿಂತೆಯಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಊಹಿಸಲಾಗಿದೆ.

ಶಾಲೆಯ ಸೆಕ್ಯುರಿಟಿ ರವೀಂದ್ರ ಅವರನ್ನು ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ನೋಡಿದ್ದು ಶಾಲೆಯ ಮುಖ್ಯಸ್ಥರಿಗೆ ತಿಳಿಸಿದ್ದಾರೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+