ವೈರಲ್ ಆದ ಈ ಫೋಟೊ ಹಿಂದಿನ ಸತ್ಯಾಂಶ ಫ್ಯಾಕ್ಟ್ ಚೆಕ್ ನಲ್ಲಿ ಹೊರಬಿತ್ತು

ಲಕ್ನೋ, ನ 3: ಉತ್ತರಪ್ರದೇಶ ಸರಕಾರ, ಸರಯೂ ನದಿ ತಟದ ಅಯೋಧ್ಯೆಯಲ್ಲಿ, ಅಕ್ಟೋಬರ್ 26ರಂದು ದೀಪೋತ್ಸವ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ 410,000 ದೀಪಗಳನ್ನು ಬೆಳಗಿಸಲಾಗಿತ್ತು ಮತ್ತಿದು, ಗಿನ್ನೆಶ್ ದಾಖಲೆಗೆ ಸೇರ್ಪಡೆಯಾಗಿತ್ತು.

ಈ ಕಾರ್ಯಕ್ರಮಕ್ಕೆ ಒಟ್ಟಾರೆಯಾಗಿ ಯೋಗಿ ಆದಿತ್ಯನಾಥ್ ಸರಕಾರ 133 ಕೋಟಿ ರೂಪಾಯಿ ಖರ್ಚು ಮಾಡಿತ್ತು. ಇದಕ್ಕೆ ಪರವಿರೋಧ ಟೀಕೆಗಳು/ಸಮರ್ಥನೆಗಳು ವ್ಯಕ್ತವಾಗಿದ್ದವು.

ಜೊತೆಗೆ, ಕಾರ್ಯಕ್ರಮದ ನಂತರ, ಪುಟ್ಟ ಹುಡುಗಿಯೊಂದು, ಹಣತೆಯಲ್ಲಿ ಉಳಿದ ಎಣ್ಣೆಯನ್ನು ಬಾಟಲಿಯಲ್ಲಿ ಸಂಗ್ರಹಿಸಿಕೊಳ್ಳುತ್ತಿರುವ ದೃಶ್ಯ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಫೋಟೋಗೆ ಮರದ ಬಳಿ ಅಳುತ್ತಿರುವ ಹುಡುಗಿಯ ಇನ್ನೊಂದು ಫೋಟೋ ಕೊಲೇಜ್ ಮಾಡಿ ಹರಿಯಬಿಡಲಾಗಿತ್ತು.

Rohingya Refugee Girl Collecting Oil In Ayodhya, Fast Check Found It Is False Image

ಈ ಇಬ್ಬರು, ರೊಹಿಂಗ್ಯಾ ಮುಸ್ಲಿಂ ಹುಡುಗಿಯರು ಎಂದು ಸಾಮಾಜಿಕ ತಾಣದಲ್ಲಿ ಸಿಕ್ಕಾಪಟ್ಟೆ ಈ ಫೋಟೋಗಳು ಹರಿದಾಡುತ್ತಿತ್ತು. ಕಾರ್ಯಕ್ರಮಕ್ಕೆ ಕೋಟಿ ಕೋಟಿ ಸುರಿಯುವ ಅವಶ್ಯಕತೆ ಏನಿತ್ತು ಎನ್ನುವ ಪ್ರಶ್ನೆಗಳೂ ಕೇಳಿಬರುತ್ತಿತ್ತು.

ಬಾಲಕಿ ಹಣತೆಯಿಂದ ಎಣ್ಣೆಯನ್ನು ಸಂಗ್ರಹಿಸುತ್ತಿರುವ ದೃಶ್ಯ ಮನಕಲಕುವಂತಿದೆ, ಆ ಬಾಲಕಿಯ ಮುಖದಲ್ಲಿನ ಭಯ ನೋಡಿ? ಇದೇನಾ ರಾಮರಾಜ್ಯ, ಇದೇನಾ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುವ ಟೀಕೆಗಳು ವ್ಯಕ್ತವಾಗಿದ್ದವು.

ಈ ಬಾಲಕಿಯರು, ನಿಜವಾಗಿಯೂ ರೊಹಿಂಗ್ಯಾ ಹುಡುಗಿಯೇ ಎಂದು ರಿವರ್ಸ್ ಇಮೇಜ್ ಮೂಲಕ, ಫ್ಯಾಕ್ಟ್ ಚೆಕ್ ಮಾಡಿದಾಗ ಈ ಸುದ್ದಿ ಸುಳ್ಳು, 2017ರಲ್ಲಿ ತೆಗೆದಿರುವ ಫೋಟೋ ಇದು ಎನ್ನುವುದು ಎಂದು ಗೊತ್ತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+