ಮತಗಟ್ಟೆಯಲ್ಲಿ ಹಳದಿ ಸೀರೆಯಲ್ಲಿ ಮಿಂಚಿದ್ದ ರೀನಾ ಮತ್ತೊಮ್ಮೆ ಸುದ್ದಿಯಲ್ಲಿ
ಲಕ್ನೋ, ಅಕ್ಟೋಬರ್ 22: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹಳದಿ ಸೀರೆಯುಟ್ಟು ಇವಿಎಂ ಹಿಡಿದು ಬಂದು ಎಲ್ಲರ ಚಿತ್ತ ನೆಟ್ಟಿದ್ದ ಚುನಾವಣಾ ಅಧಿಕಾರಿ ರೀನಾ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಈಗ ಲಕ್ನೋ ಉಪಚುನಾವಣೆಯಲ್ಲಿ ಗುಲಾಬಿ ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ. ರೀನಾ ದ್ವಿವೇದಿ ಯಾವ ಸೆಲೆಬ್ರಿಟಿಗಿಂತಲೂ ಕಡಿಮೆಯಿಲ್ಲ, ಅವರ ಫ್ಯಾಷನ್ ಸ್ಕಿಲ್‌ಗೆ ಎಂಥವರೂ ಫಿದಾ ಆಗುತ್ತಾರೆ.
ನಟಿಯಾಗಬೇಕೆಂಬ ಆಸೆಯನ್ನೂ ಕೂಡ ಕಂಡಿದ್ದವರು.ಇದೀಗ ಗುಲಾಬಿ ಸೀರೆಯಲ್ಲಿ ಮತಗಟ್ಟೆಗೆ ಬರುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಹಳದಿ ಸೀರೆಯುಟ್ಟು ಕೈಯಲ್ಲಿ ಇವಿಎಂ ಹಿಡಿದು ಬಂದಿರುವ ಫೋಟೊ ವೈರಲ್ ಆಗಿತ್ತು.

ಸೋಮವಾರ ಲಕ್ನೋನ ಕೃಷ್ಣಾನಗರದ ಮಹಾನಗರ ಪಿಯು ಕಾಲೇಜಿನಲ್ಲಿ ನಡೆದ ಉಪ ಚುನಾವಣೆಯಲ್ಲಿ ಮತ್ತೆ ಕಾಣಿಸಿಕೊಂಡಿದ್ದಾರೆ. ಗುಲಾಬಿ ಹಾಗೂ ಗೋಲ್ಡ್ ಡಿಸೈನರ್ ಸೀರೆಯುಟ್ಟು ಕಪ್ಪುಬಣ್ಣದ ಶಿಮ್ಮರ್ ಬ್ಲೌಸ್ ತೊಟ್ಟು ಬಂದಿದ್ದು, ಅವರಲ್ಲಿರುವ ಫ್ಯಾಷನ್ ಸ್ಕಿಲ್ ಎಷ್ಟರ ಮಟ್ಟಿಗೆ ಇದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿತ್ತು.
ಮತದಾರರ ಬೆರಳಿಗೆ ಇಂಕ್ ಹಾಕುವುದು ಹಾಗೂ ಮತದಾರರ ವಿವರಗಳನ್ನು ಪಡೆಯುವುದರಲ್ಲಿ ತಲ್ಲೀನರಾಗಿದ್ದ ಸಂದರ್ಭದಲ್ಲಿ ಫೋಟೊ ಕ್ಲಿಕ್ ಮಾಡಲಾಗಿದೆ. ಸಣ್ಣ ವಯಸ್ಸಿನಲ್ಲೇ ಅವರಿಗೆ ಮದುವೆ ಮಾಡಲಾಗಿತ್ತು 15 ವರ್ಷದ ಮಗ ಇದ್ದಾನೆ.
ದ್ವಿವೇದಿ ಅವರು 2014, 2017,2019ರ ಚುನಾವಣೆಯಲ್ಲಿ ಚುನಾವಣಾ ಅಧಿಕಾರಿಯಾಗಿದ್ದರು. ಅವರಿಗೆ ಫೇಸ್‌ಬುಕ್‌ನಲ್ಲಿ 4500 ಮಂದಿ ಫಾಲೋವರ್‌ಗಳು ಇದ್ದಾರೆ. ಟಿಕ್‌ಟಾಕ್‌ನಲ್ಲಿ 8700 ಮಂದಿ ಫಾಲೋ ಮಾಡುತ್ತಿದ್ದಾರೆ.











Click it and Unblock the Notifications