ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ರಾಮ ಎಲ್ಲರಲ್ಲೂ ಇದ್ದಾನೆ': ಭೂಮಿ ಪೂಜೆ ಬಗ್ಗೆ ಪ್ರಿಯಾಂಕಾ ಗಾಂಧಿ ಮೊದಲ ಪ್ರತಿಕ್ರಿಯೆ

|
Google Oneindia Kannada News

ಲಕ್ನೌ, ಆಗಸ್ಟ್ 04: ರಾಮ ಮಂದಿರ ಭೂಮಿ ಪೂಜೆ ಕುರಿತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮೊದಲ ಸಲ ಪ್ರತಿಕ್ರಿಯಿಸಿದ್ದಾರೆ. ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಭೂಮಿ ಪೂಜೆ ಕಾರ್ಯಕ್ರಮದ ಬಗ್ಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಮಾತನಾಡಿರಲಿಲ್ಲ.

Recommended Video

ಇದ್ದಕ್ಕಿದ್ದಂತೆ ಕಾಂಗ್ರೆಸ್ ಗೆ ರಾಮನ ಮೇಲೆ ಲವ್ | Oneindia Kannada

ಇದೀಗ, ಮೊದಲ ರಾಮ ಮಂದಿರ ಭೂಮಿ ಪೂಜೆ ಕುರಿತು ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದು, 'ಭಗವಾನ್ ರಾಮ ಮತ್ತು ತಾಯಿ ಸೀತಾಮಾತೆಯ ಸಂದೇಶ ಮತ್ತು ಅನುಗ್ರಹದಿಂದ ರಾಮ ಮಂದಿರ ಭೂಮಿ ಪೂಜೆ ಕಾರ್ಯಕ್ರಮ ರಾಷ್ಟ್ರೀಯ ಏಕತೆ, ಭ್ರಾತೃತ್ವ ಮತ್ತು ಸಾಂಸ್ಕೃತಿಕ ಸಭೆಯ ಒಂದು ಸಂದರ್ಭ ಆಗಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ. ಮುಂದೆ ಓದಿ....

ಅಯೋಧ್ಯೆ ಭೂಮಿಪೂಜೆಗೆ ಆಮಂತ್ರಿತ ಈ 'ವಿಶೇಷ ವ್ಯಕ್ತಿ'ಯ ಕಿರು ಪರಿಚಯಅಯೋಧ್ಯೆ ಭೂಮಿಪೂಜೆಗೆ ಆಮಂತ್ರಿತ ಈ 'ವಿಶೇಷ ವ್ಯಕ್ತಿ'ಯ ಕಿರು ಪರಿಚಯ

ರಾಮ ಎಲ್ಲರೊಂದಿಗೂ ಇದ್ದಾನೆ

ಶ್ರೀರಾಮನ ಕುರಿತು ವಿವರವಾಗಿ ಬರೆದಿರುವ ಪ್ರಿಯಾಂಕಾ ಗಾಂಧಿ 'ಸರಳತೆ, ಧೈರ್ಯ, ಸಂಯಮ, ತ್ಯಾಗ, ಬದ್ಧತೆ ಇವು ಧೀನಬಂಧು ರಾಮ ಹೆಸರಿನ ಮೂಲತತ್ವ. ರಾಮ ಎಲ್ಲರೊಂದಿಗೂ ಇದ್ದಾನೆ, ರಾಮ ಎಲ್ಲರೊಂದಿಗೂ ಇದ್ದಾನೆ' ಎಂದು ಭೂಮಿ ಪೂಜೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ರಾಮಾಯಣ ಅಳಿಸಲಾಗದ ಗುರುತು

ರಾಮಾಯಣ ಅಳಿಸಲಾಗದ ಗುರುತು

'ರಾಮಾಯಣವು ವಿಶ್ವದ ಸಂಸ್ಕೃತಿ ಮತ್ತು ಭಾರತದಲ್ಲಿ ಆಳವಾದ ಮತ್ತು ಅಳಿಸಲಾಗದ ಗುರುತು ಹೊಂದಿದೆ. ರಾಮಾಯಣದ ಕಥೆ ನಮ್ಮ ಸಾಂಸ್ಕೃತಿಕ ಮತ್ತು ಧಾರ್ಮಿಕ ನೆನಪುಗಳಲ್ಲಿ ಬೆಳಗಿದೆ' ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರಾಮಮಂದಿರದ ಎತ್ತರ, ಅಗಲ, ವಿನ್ಯಾಸ ಹಾಗೂ ವಿಶೇಷತೆಗಳುರಾಮಮಂದಿರದ ಎತ್ತರ, ಅಗಲ, ವಿನ್ಯಾಸ ಹಾಗೂ ವಿಶೇಷತೆಗಳು

ಶ್ರೀಹರಿಯ ರೂಪಗಳು ಅಸಂಖ್ಯಾತ

ಶ್ರೀಹರಿಯ ರೂಪಗಳು ಅಸಂಖ್ಯಾತ

'ಭಾರತೀಯರು ರಾಮಾಯಣದಲ್ಲಿನ ಧರ್ಮ, ನೀತಿ, ಕರ್ತವ್ಯ, ತ್ಯಾಗ, ಭವ್ಯ, ಪ್ರೀತಿ, ಶೌರ್ಯ ಮತ್ತು ಸೇವೆಯ ವಿಷಯಗಳಿಂದ ಪ್ರೇರಿತರಾಗಿದ್ದಾರೆ. ಉತ್ತರದಿಂದ ದಕ್ಷಿಣಕ್ಕೆ, ಪೂರ್ವದಿಂದ ಪಶ್ಚಿಮಕ್ಕೆ, ರಾಮನು ಅನೇಕ ರೂಪಗಳಲ್ಲಿ ತನ್ನನ್ನು ತಾನು ರೂಪಿಸಿಕೊಂಡಿದ್ದಾನೆ. ಶ್ರೀಹರಿಯ ಅಸಂಖ್ಯಾತ ರೂಪಗಳಂತೆ, ರಾಮಕಥಾ ಹರಿಕಥಾ ಅನಂತ' ಎಂದು ಪ್ರಿಯಾಂಕಾ ಹೇಳಿದ್ದಾರೆ.

ರಾಮ ಎಲ್ಲರಿಗೂ ಸೇರಿದವನು

ರಾಮ ಎಲ್ಲರಿಗೂ ಸೇರಿದವನು

'ರಾಮ ಎನ್ನುವುದು ಆಶ್ರಯ ಮತ್ತು ತ್ಯಾಗದ ಸಂಕೇತ. ರಾಮ ಶಬರಿ, ಸುಗ್ರೀವನಿಗೆ ಸೇರಿದವನು. ರಾಮ ವಾಲ್ಮೀಕಿಗೆ ಸೇರಿದವನು. ರಾಮ ಭಾಷಾಗೆ ಸೇರಿದವನು. ರಾಮ ಕಂಬನ್‌ಗೆ ಸೇರಿದವನು ಮತ್ತು ಯೇಸುಕ್ರಿಸ್ತನಿಗೂ ಸೇರಿದವನು. ಕಬೀರ್‌, ತುಳಸಿದಾಸ್, ರೈದಾಸ್‌ಗೆ ಸೇರಿದವನು ರಾಮ. ಎಲ್ಲವನ್ನು ಕೊಡುವವನು ಭಗವಾನ್ ರಾಮ. ವಾರಿಸ್ ಅಲಿ ಶಾ ಜೋ ರಬ್ ಹೈ ವೋಹಿ ರಾಮ್ ಹೈ' ಎಂದು ಪ್ರಿಯಾಂಕಾ ಹೇಳಿದ್ದಾರೆ.

English summary
Congress leader Priyanka Gandhi Vadra hopes that ground breaking ceremony of Ram temple in Ayodhya becomes "marker" of national unity, brotherhood and cultural harmony.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X